ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ರೋಚಕ ಘಟ್ಟದಲ್ಲಿ ಟೆಸ್ಟ್‌

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹರಾರೆ (ಎಎಫ್‌ಪಿ): ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯ ರೋಚಕ ಘಟ್ಟ ತಲುಪಿದ್ದು, ಅಂತಿಮ ದಿನದಾಟ ಕುತೂಹಲಕ್ಕೆ ಕಾರಣವಾಗಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಎದುರಾಳಿಯ ಗೆಲುವಿಗೆ 264 ರನ್‌ಗಳ ಗುರಿ ನೀಡಿದೆ. ಈ ಸವಾಲು ಬೆನ್ನಟ್ಟಿರುವ  ಪಾಕಿಸ್ತಾನ ನಾಲ್ಕನೇ ದಿನವಾದ ಶುಕ್ರವಾರದ ಆಟದ ಅಂತ್ಯಕ್ಕೆ 49 ಓವರ್‌ಗಳಲ್ಲಿ 5 ವಿಕೆಟ್‌ಗೆ 158 ರನ್‌ ಗಳಿಸಿತ್ತು.

ಇದೀಗ ಆಂತಿಮ ದಿನವಾದ ಶನಿವಾರ ಗೆಲುವಿಗೆ 106 ರನ್‌ ಗಳಿಸುವ ಗುರಿ ಪಾಕ್‌ ತಂಡದ ಮುಂದಿದೆ. ನಾಯಕ ಮಿಸ್ಬಾ ಉಲ್‌ ಹಕ್‌ (26) ಮತ್ತು ಅದ್ನಾನ್‌ ಅಕ್ಮಲ್‌ (17) ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದರು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿ ಇವರ ಮೇಲಿದೆ.
ಇದಕ್ಕೂ ಮುನ್ನ 4 ವಿಕೆಟ್‌ಗೆ 121 ರನ್ ಗಳಿಂದ ಆಟ ಮುಂದುವರಿಸಿದ ಜಿಂಬಾಬ್ವೆ ಎರಡನೇ ಇನಿಂಗ್ಸ್‌ನಲ್ಲಿ 199 ರನ್‌ಗಳಿಗೆ ಆಲೌಟಾಯಿತು. 52 ರನ್‌ಗಳಿಗೆ ಐದು ವಿಕೆಟ್ ಪಡೆದ ರಾಹತ್‌ ಅಲಿ ಪಾಕ್‌ ತಂಡದ ಪರ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: ಮೊದಲ ಇನಿಂಗ್ಸ್‌ 109.5 ಓವರ್‌ಗಳಲ್ಲಿ 294 ಮತ್ತು ಎರಡನೇ ಇನಿಂಗ್ಸ್‌ 89.5 ಓವರ್‌ಗಳಲ್ಲಿ 199 (ಬ್ರೆಂಡನ್‌ ಟೇಲರ್‌ 27, ರಿಚ್ಮಂಡ್‌ ಮುತುಂಬಮಿ 29, ರಾಹತ್‌ ಅಲಿ 52ಕ್ಕೆ 5, ಸಯೀದ್‌ ಅಜ್ಮಲ್‌ 56ಕ್ಕೆ 2, ಅಬ್ದುರ್‌ ರಹ್ಮಾನ್‌ 40ಕ್ಕೆ 2) ಪಾಕಿಸ್ತಾನ: ಮೊದಲ ಇನಿಂಗ್ಸ್‌ 104.5 ಓವರ್‌ಗಳಲ್ಲಿ 230 ಮತ್ತು ಎರಡನೇ ಇನಿಂಗ್ಸ್‌ 49 ಓವರ್‌ಗಳಲ್ಲಿ 5 ವಿಕೆಟ್‌ಗೆ 158 (ಖುರ್ರಮ್‌ ಮನ್ಜೂರ್‌ 54, ಯೂನಿಸ್‌ ಖಾನ್‌ 29, ಮಿಸ್ಬಾ ಉಲ್‌ ಹಕ್‌ ಬ್ಯಾಟಿಂಗ್‌ 26, ಅಸದ್‌ ಶಫೀಕ್‌ 14, ಅದ್ನಾನ್‌ ಅಕ್ಮಲ್‌ ಬ್ಯಾಟಿಂಗ್‌ 17, ಟೆಂಡಾಯ್‌ ಚಟಾರ 29ಕ್ಕೆ 2, ಪ್ರಾಸ್ಪರ್ ಉತ್ಸೆಯಾ 40ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT