ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ತಂತ್ರಜ್ಞಾನದ ಅಗತ್ಯವಿದೆ

Last Updated 31 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರತಿ ಕ್ರೀಡೆಗೆ ತಂತ್ರಜ್ಞಾನದ ಅಗತ್ಯವಿದೆ. ಅದರಲ್ಲೂ ಕ್ರಿಕೆಟ್‌ನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ನಿಭಾಯಿಸಲಿದೆ~ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ನುಡಿದರು.

ರಾಜ್ಯ ತಂಡಗಳಿಗೆ ಪ್ರಾಯೋಜಕತ್ವ ಹಾಗೂ ತಂತ್ರಜ್ಞಾನ ನೆರವು ನೀಡುವ ಸಂಬಂಧ ಡೆಲ್ ಕಂಪೆನಿಯು ಕೆಎಸ್‌ಸಿಎಯೊಂದಿಗೆ ಒಪ್ಪಂದ ಮಾಡಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಇದೊಂದು ಸ್ಮರಣೀಯ ಕ್ಷಣ. ಬಹುರಾಷ್ಟ್ರೀಯ ಕಂಪೆನಿಯೊಂದು ಕೆಎಸ್‌ಸಿಎಗೆ ಬೆಂಬಲ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.  ಕ್ರಿಕೆಟ್ ಆಟವನ್ನು ಬೆಂಗಳೂರಿನಿಂದಾಚೆ ಕೊಂಡೊಯ್ಯುವ ನಮ್ಮ ಯೋಜನೆಗೆ ಈ ಒಪ್ಪಂದ ನೆರವಾಗಲಿದೆ~ ಎಂದರು.

ಕೆಎಸ್‌ಸಿಎನ ಎಲ್ಲಾ ಕ್ರಿಕೆಟ್ ಚಟುವಟಿಕೆಗಳಿಗೆ ಡೆಲ್ ನೆರವು ನೀಡಲಿದ್ದು, ಈ ಒಪ್ಪಂದ ಆರಂಭದಲ್ಲಿ ಒಂದು ವರ್ಷದ ಅವಧಿಯದ್ದಾಗಿರುತ್ತದೆ. ರಾಜ್ಯ ತಂಡವನ್ನು ಪ್ರತಿನಿಧಿಸುವ ತಂಡಗಳ ಪೋಷಾಕಿನ ಮೇಲೆ ಡೆಲ್ ಲಾಂಛನವಿರಲಿದೆ.
 
ನವೆಂಬರ್ 3ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯಿಂದಲೇ ಈ ಒಪ್ಪಂದ ಜಾರಿಗೆ ಬರಲಿದೆ. ಇದು 1.5 ಕೋಟಿ ರೂ. ಒಪ್ಪಂದ ಎಂಬುದು ತಿಳಿದು ಬಂದಿದೆ. ಕೆಎಸ್‌ಸಿಎ ಆಯೋಜಿಸುವ ಶಾಲಾ ಹಾಗೂ ಲೀಗ್ ಕ್ರಿಕೆಟ್‌ಗೆ ಈ ಒಪ್ಪಂದ ಅನ್ವಯಿಸುತ್ತದೆ.

`ತಂತ್ರಜ್ಞಾನದ ನೆರವು ಇಲ್ಲದಿದ್ದರೆ ಈಗ ಬದುಕುವುದೇ ಕಷ್ಟ ಎನಿಸಿದೆ. ಅದಕ್ಕೆ ಕ್ರಿಕೆಟ್ ಹೊರತಲ್ಲ. ನನ್ನ ಕ್ರಿಕೆಟ್ ಜೀವನದ ಆರಂಭದ ದಿನಗಳಿಂದಲೇ ನಾನು ತಂತ್ರಜ್ಞಾನದ ಬಗ್ಗೆ ಒಲವು ಹೊಂದಿದ್ದೆ. ಈ ಒಪ್ಪಂದ ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನೆರವು ನೀಡಲಿದೆ~ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು.
ಎಸ್‌ಬಿಎಂ ಡೆಲ್ ಇಂಡಿಯಾ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಕೃಷ್ಣಕುಮಾರ್ ಹಾಗೂ ರಣಜಿ ತಂಡದ ಎಲ್ಲಾ ಆಟಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT