ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಾಶಕ ಖರೀದಿಯಲ್ಲಿ ಎಚ್ಚರ ಅಗತ್ಯ

Last Updated 10 ಮೇ 2012, 19:30 IST
ಅಕ್ಷರ ಗಾತ್ರ

ಹಾಸನ: `ರೈತರು ಆಲೂಗೆಡ್ಡೆ ಬೆಳೆಗೆ ಸಿಂಪಡಣೆ ಮಾಡಲು ಕ್ರಿಮಿನಾಶಕ ಖರೀದಿಸುವ ಮುನ್ನ ತಾವು ಖರೀದಿಸುವ ಔಷಧದಲ್ಲಿ ಪಾದರಸದ ಅಂಶ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು~ ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ.ರಾವಲ್ ಸಲಹೆ ನೀಡಿದರು.

ಅರಕಲಗೂಡು ಪೊಟ್ಯಾಟೋ ಕ್ಲಬ್ ವತಿಯಿಂದ ಗುರುವಾರ ನಗರದ ಆದಿಚುಂಚನಗಿರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಆಲೂಗೆಡ್ಡೆ ಬೆಳೆಯುವ ರೈತರು ಹಾಗೂ ವಿಜ್ಞಾನಿಗಳ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಉತ್ತಮ ಫಸಲು ಬರಬೇಕೆಂಬ ಒಂದೇ ಉದ್ದೇಶದಿಂದ ರೈತರು ಏನನ್ನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಇದರ ವ್ಯತಿರಿಕ್ತ ಪರಿಣಾಮ ಇಡೀ ಮಾನವ ಜನಾಂಗದ ಮೇಲೆ ಆಗುತ್ತದೆ. ಸಿಂಪಡಣೆಗೆ ಬಳಸುವ ಅನೇಕ ಔಷಧಗಳಲ್ಲಿ ಪಾದರಸದಂಥ ವಿಷಕಾರಿ ಅಂಶಗಳು ಇರುತ್ತವೆ. ಇದು ರೈತರಿಗೆ ತಿಳಿದಿರುವುದಿಲ್ಲ. ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬುದನ್ನು ರೈತರು ವಿಜ್ಞಾನಿಗಳಿಂದ ಕೇಳಿ ತಿಳಿದುಕೊಳ್ಳಬೇಕು~ ಎಂದರು.

ಯುರೋಪ್ ರಾಷ್ಟ್ರಗಳಲ್ಲಿ ಪ್ರತಿ ಎಕರೆಗೆ ಸುಮಾರು 20 ಟನ್ ಆಲೂಗೆಡ್ಡೆ ಬೆಳೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಇದರ ಪ್ರಮಾಣ 4ರಿಂದ 5ಟನ್ ಮಾತ್ರ ಇದೆ. ಇಳುವರಿ ಈ ಪ್ರಮಾಣದಲ್ಲಿ ಕಡಿಮೆಯಾಗಲು ಇಲ್ಲಿನ ಹವಮಾನ ಒಂದು ಕಾರಣವಾದರೆ, ಆಲೂ ಬಿತ್ತನೆ ಹಾಗೂ ನಂತರದ ಬೇಸಾಯ ಕ್ರಮದಲ್ಲಿ ರೈತರು ಈಗಲೂ ಹಳೆಯ ಪದ್ಧತಿ ಅನುಸರಿಸುತ್ತಿರುವುದು ಇನ್ನೊಂದು ಕಾರಣ. ಇದರ ಜತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಂಗಮಾರಿ ರೋಗವೂ ಕಾಣಿಸಿಕೊಂಡು ಇಳುವರಿ ತುಂಬ ಕಡಿಮೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT