ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ಟಿಯನ್‌ಗೆ ಜೀವ ಬೆದರಿಕೆ ಕರೆ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): `ನಿನ್ನ ಹೆಸರಲ್ಲಿ ಬುಲೆಟ್ ಸಿದ್ಧವಾಗಿದೆ...' ಇದು ಆಸ್ಟ್ರೇಲಿಯಾದ ರೇಡಿಯೊ ನಿಲಯದ ನಿರೂಪಕ ಮೈಕೆಲ್ ಕ್ರಿಸ್ಟಿಯನ್‌ಗೆ ಬಂದ ಜೀವ ಬೆದರಿಕೆ ಕರೆ.

`ಕಿಂಗ್ ಎಡ್ವರ್ಡ್ -7' ಆಸ್ಪತ್ರೆಗೆ ಕೀಟಲೆ ಕರೆ ಮಾಡಿದ ಹಿನ್ನೆಲೆಯಲ್ಲಿ ರೇಡಿಯೊ ನಿರೂಪಕ ಕ್ರಿಸ್ಟಿಯನ್‌ಗೆ `ನಿನ್ನ ಹೆಸರಿನಲ್ಲಿ ಒಂದಷ್ಟು ಬುಲೆಟ್‌ಗಳನ್ನು ಸಿದ್ಧಮಾಡಿದ್ದೇವೆ' ಎಂಬ ಬೆದರಿಕೆ ಕರೆಯೊಂದು ಬಂದಿದೆ. ಕ್ರಿಸ್ಟಿಯಾನ್‌ಗೆ ಬಂದ ಈ ಬೆದರಿಕೆ ಕರೆಯ ಮೂಲ ದಕ್ಷಿಣ ಆಸ್ಟ್ರೇಲಿಯಾಕ್ಕೆ ಸೇರಿದ್ದಾಗಿದೆ. ಆದರೆ, ಈ ಕರೆ ರೇಡಿಯೊ ನಿಲಯಕ್ಕೆ ಬರದೇ ಬೇರೆಡೆ  ರವಾನೆಯಾಗಿದೆ. ರೇಡಿಯೊ ನಿಲಯಕ್ಕೆ ಬಂದ ಬೆದರಿಕೆ ಕರೆಗಳಲ್ಲಿ ಒಂದು ಕರೆ ಮಾತ್ರ ಕ್ರಿಸ್ಟಿಯಾನ್ ಅವರನ್ನೇ ಗುರಿಯಾಗಿಸಿದೆ.

ಈ ನಡುವೆ, ಸದರ್ನ್ ಕ್ರಾಸ್ ಆಸ್ಟೀರಿಯೊದಲ್ಲಿರುವ ವ್ಯವಸ್ಥಾಪಕರು, 2 ಡೇ ಎಫ್‌ಎಂ ರೇಡಿಯೊ ನಿಲಯದ ರಕ್ಷಣೆಗಾಗಿ  ರಕ್ಷಣಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ರೇಡಿಯೊ ನಿಲಯದ ಹತ್ತು ಹಿರಿಯ ಸಿಬ್ಬಂದಿ ಒಂದು ವಾರಕ್ಕೆ 75 ಸಾವಿರ ಆಸ್ಟ್ರೇಲಿಯಾ ಡಾಲರ್ ಹಣ ತೆತ್ತು ಅಂಗರಕ್ಷಕರನ್ನು  ನೇಮಿಸಿಕೊಂಡಿದ್ದಾರೆ. ಹನ್ನೆರಡು ಸಿಬ್ಬಂದಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT