ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ಮಸ್ ವಿಶೇಷ...

Last Updated 24 ಡಿಸೆಂಬರ್ 2013, 6:25 IST
ಅಕ್ಷರ ಗಾತ್ರ

176 ವರ್ಷದ ನಂಟು
ಕ್ರಿಶ್ಚಿಯನ್ ಧರ್ಮ ಒಂದು ಮುಕ್ಕಾಲು ಶತಮಾನದ ಹಿಂದೆ (1837) ತುಮಕೂರು ಜಿಲ್ಲೆಗೆ ಅಂಕುರಾರ್ಪಣೆ ಮಾಡಿತು.

ರಾಜ್ಯದ ಮೊದಲ ಚರ್ಚ್ ಹೊಂದಿರುವ ಕೀರ್ತಿ ಗುಬ್ಬಿ ಪಟ್ಟಣದ್ದು. 1848ರಲ್ಲೇ ಇಲ್ಲಿ ಸಿಎಸ್‌ಐ ಚರ್ಚ್ ಸ್ಥಾಪಿಸಲಾಗಿದೆ. ಕ್ರಿಶ್ಚಿಯನ್ ಸಮುದಾಯಕ್ಕೂ ಜಿಲ್ಲೆಗೂ ನೂರ ಎಪ್ಪತ್ತಾರು ವರ್ಷದ ನಂಟು. ಪ್ರಸ್ತುತ ಒಂಬತ್ತು ಸಿಎಸ್‌ಐ (ಪ್ರೊಟೆಸ್ಟೆಂಟ್), ಒಂದು ರೋಮನ್ ಕ್ಯಾಥೋಲಿಕ್, ಒಂದು ಮಾರ್ತೊಮಾ ಸಭೆ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಇಪ್ಪತ್ತು ಸಹಸ್ರಕ್ಕೂ ಅಧಿಕ ಸಂಖ್ಯೆಯ ಕ್ರೈಸ್ತರು ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿದ್ದಾರೆ.

ವಿಶೇಷ ವೈನ್...
ವೈನ್‌ ತಯಾರಿಕೆ ಸಹ ಕ್ರಿಸ್‌ಮಸ್‌ನ ಒಂದು ಭಾಗ. ದೊಡ್ಡ ಜಾಡಿಯೊಂದರಲ್ಲಿ ಕಪ್ಪು ದ್ರಾಕ್ಷಿ, ಜವೆ ಗೋಧಿ, ಈಸ್ಟ್, ಏಲಕ್ಕಿ, ಮೆಣಸು, ಉಪ್ಪು, ಸಕ್ಕರೆ ಮಿಶ್ರಣ ಮಾಡಿ ಭದ್ರವಾಗಿ ಮುಚ್ಚಳ ಮುಚ್ಚಿ, ಅದಕ್ಕೆ ಬಟ್ಟೆ ಕಟ್ಟಿ ಮಣ್ಣಿನೊಳಗೆ ಮುಚ್ಚಿಡುತ್ತಾರೆ.

ಕನಿಷ್ಠ 40 ದಿನವಾದರೂ ಈ ಜಾಡಿ ಮಣ್ಣಿನೊಳಗೆ ಇರುತ್ತದೆ. ಹೆಚ್ಚು ದಿನವಿದ್ದಷ್ಟು ಉತ್ಕೃಷ್ಟ ವೈನ್ ದೊರೆಯುತ್ತದೆ. ನಿಗದಿತ ದಿನ ಅದನ್ನು ತೆರೆದು ಕಳಿತಿರುವ ಮಿಶ್ರಣವನ್ನು ಫಿಲ್ಟರ್ ಮಾಡಿ ವೈನ್ ಸ್ಪಿರಿಟ್ ಬೆರೆಸಿ ಶುದ್ಧ ವೈನ್ ಸಿದ್ಧ ಗೊಳಿಸುತ್ತಾರೆ.

ಭೂರಿ ಭೋಜನ...
ಮೂರು ದಿನದಿಂದಲೇ ಹಬ್ಬದ ಅಡುಗೆ. ಹಬ್ಬದ ದಿನ ಸ್ಪೆಷಲ್ ಕೇಕ್, ಪ್ಲಂ ಕೇಕ್, ಬಿರಿಯಾನಿ, ರೋಜ್ ಕುಕ್, ಕಜ್ಜಾಯ, ಮೊಟ್ಟೆ ಕಜ್ಜಾಯ, ಸಜ್ಜಿಗೆ, ಕಲ್‌ಕಲ, ಕೋಡುಬಳೆ, ನಿಪ್ಪಟ್ಟು, ರವೆ ಉಂಡೆ, ಕಬಾಬ್, ಪಾಯಸ, ಕ್ಯಾರೆಟ್ ಹಲ್ವ, ಪೈನಾಪಲ್ ಹಲ್ವ, ಪ್ರೂಟ್ ಸಲಾಡ್... ತರಹೇವಾರಿ ಭಕ್ಷ್ಯ ಭೋಜನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT