ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ ಕಾಮಗಾರಿಗೆ ಶೀಘ್ರ ಚಾಲನೆ

Last Updated 7 ಅಕ್ಟೋಬರ್ 2011, 8:40 IST
ಅಕ್ಷರ ಗಾತ್ರ

ಹುಮನಾಬಾದ್: ಹತ್ತಿರದ ಮಾಣಿಕನಗರದಲ್ಲಿ ರೂ. 55ಲಕ್ಷದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವದು ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು. ನಗರದ ಹೈದರಾಬಾದ್ ರಸ್ತೆಯ್ಲ್ಲಲಿನ ಶಕುಂತಲಾ ಪಾಟೀಲ ವಸತಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಗುಲ್ಬರ್ಗ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ- ಬಾಲಕಿಯರ ಯೋಗಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು, ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕುಡಿಯುವ ನೀರು. ಸಂಪೂರ್ಣ ಸ್ವಚ್ಛತೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ಅದರೊಂದಿಗೆ ಎಲ್ಲಕ್ಕೂ ಮಿಗಿಲಾಗಿ ಹೈದರಾಬಾದ್ ಕರ್ನಾಟಕಕ್ಕೆ ಮಾದರಿಯಾದ ಬಸ್ ನಿಲ್ದಾಣ ಮಾತ್ರ ಅಲ್ಲದೇ ರಾಜಕೀಯ ಮೊದಲಾದ ಕ್ಷೇತ್ರಗಳಲ್ಲೂ ಈ ಕ್ಷೇತ್ರ ಇಡಿ ಜೆಲ್ಲೆಯಲ್ಲೇ ಮುಂಚೂಣಿಯಲ್ಲಿ ಇರುವ ವಿಷಯ ಪ್ರತ್ಯೆಕ ಹೇಳಬೇಕಿಲ್ಲ.

ಕ್ಷೇತ್ರಕ್ಕೆ ಒಳ್ಳೆಯ ಹೆಸರು ಬರುವುದಾದರೆ ಎಲ್ಲ ರೀತಿ ಸಹಕಾರ ನೀಡಲು ಸಿದ್ಧ ಇರುವುದಾಗಿ ಘೋಷಿಸಿದರು. ಅದೇ ಕಾರಣಕ್ಕಾಗಿ ಇಂದು ಗುಲ್ಬರ್ಗ ಯೋಗ ಸ್ಪರ್ಧೆಯನ್ನು ಶಕುಂತಲಾ ಪಾಟೀಲ ವಸತಿ ಶಾಲೆ ಕ್ರೀಡಾಂಗಣದಲ್ಲಿ ನಡೆಸುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು. ಮಕ್ಕಳ ಪ್ರದರ್ಶನ ನೋಡಿ, ಈಗ ನನಗೂ ಯೋಗ ಅಭ್ಯಾಸ ಮಾಡಬೇಕು ಅನ್ನಿಸುತ್ತಿದೆ ಅದಕ್ಕೆ ಯೋಗ ಕೂಡಿ ಬರುವುದು ಬಾಕಿ ಇದೆ ಎಂದರು. ದೈಹಿಕ
ಶಿಕ್ಷಣ ವಿಭಾಗದಲ್ಲಿ ಆಗುತ್ತಿರುವ ಸಾಧನೆ ಶಿಕ್ಷಣ ಕ್ಷೇತ್ರದಿಂದಲೂ ಆಗಬೇಕು ಎನ್ನುವ ತಮ್ಮ ನಿರೀಕ್ಷೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹುಸಿ ಆಗುವುದಕ್ಕೆ ಅವಕಶ ನೀಡಬಾರದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ ಪ್ರಸ್ತುತ ಯೋಗ ಅಭ್ಯಾಸ ಅವಶ್ಯಕತೆ ಕುರಿತು ವಿವರಿಸಿದರು. ಬೀದರ್ ಜಿಲ್ಲೆಯಲ್ಲಿ ಹುಮನಾಬಾದ್ ತಾಲ್ಲೂಕು ದೈಹಿಕ ಶಿಕ್ಷಕರು ಮಾಡಿರುವ ಸಾಧನೆಯನ್ನು ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಜ ಕಣಜಿ ಶ್ಲಾಘಿ ಸಿದರು. ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಮೆಂಗಾ, ಸದಸ್ಯ ವೀರಣ್ಣ ಪಾಟೀಲ, ಧೂಳಪ್ಪ ಸುರಂಗೆ, ಪುಸಭೆಯ ಅಧ್ಯಕ್ಷ ಪದ್ಮಾವತಿ ಶಿವಾಜಿರಾವ ಮಚಕೂರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಸ್ತಾನ ನೂರೋದ್ದೀನ್, ಶಕುಂತಲಾ ಪಾಟೀಲ ವಸತಿ ಶಾಲೆ ಅಧ್ಯಕ್ಷ ಡಾ.ಚಂದ್ರಶೇಖರ ಬಿ.ಪಾಟೀಲ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪಾಂಡುರಂಗ ಖಂಡಗೊಂಡ, ಗಜೇಂದ್ರ ಕನಕಟಕರ್, ಬಾಬುರಾವ ಟೈಗರ್, ಪ್ರಕಾಶ ಸೋನಕೇರಿ, ಮಾಜಿ ಅಧ್ಯಕ್ಷ ಶಿವರಾಜ ಗಂಗಶೆಟ್ಟಿ, ಕಾಂಗ್ರೆಸ್ ಮುಖಂಡ ಕಂಟೆಪ್ಪ ದಾನಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅನಂತರೆಡ್ಡಿ ಶಿವರಾಯ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT