ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗೆ ಎರಡನೇ ದರ್ಜೆ:ಜಾವಗಲ್‌ ವಿಷಾದ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಕ್ರೀಡೆಗಳನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಭಿಪ್ರಾಯಪಟ್ಟರು.

‘ಟ್ರೇಡ್ ವಿಷನ್ ಇಂಡಿಯಾ’ ಸಂಸ್ಥೆಯು ಶನಿವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ‘ಹೌಸಾಟ್’ ಸಂಗೀತ ಸಿ.ಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆ­ಯ­ಬೇಕಾದರೆ ವೃತ್ತಿಯನ್ನು ಕೈಬಿಡಬೇಕಾಗು­ತ್ತದೆ. ದೇಶದಲ್ಲಿ ಇಂದಿಗೂ  ಎರಡನೇ ದರ್ಜೆಯಲ್ಲಿ ಉಳಿದಿರುವ ಕ್ರೀಡೆಯನ್ನು ಹವ್ಯಾಸವಾಗಿ ಮಾತ್ರ ಸ್ವೀಕರಿಸಲು ಸಾಧ್ಯ. ಕ್ರೀಡೆಗೆ ಪೂರಕ ವಾತಾವರಣ ಇಲ್ಲದಿರುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ಭಾರತ ತೃತೀಯ ದರ್ಜೆಯ ರಾಷ್ಟ್ರ­ವಾಗಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮಾಜಿ ಕ್ರಿಕೆಟಿಗ ಕೆ.ಎಸ್.ವಿಶ್ವನಾಥ್, ಚಿಂತಕ ಡಾ.ಗುರುರಾಜ ಕರ್ಜಗಿ ಕಾರ್ಯಕ್ರಮದ ಆಯೋಜಕರಾದ ಸತ್ಯೇಶ್.ಎನ್.ಬೆಳ್ಳೂರ್ ಕಾರ್ಯ­ಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT