ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೋತ್ಸವ: ಮಂಗಳೂರು ಚಾಂಪಿಯನ್

Last Updated 1 ಜೂನ್ 2011, 9:35 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಮಾನ ನಿಲ್ದಾಣ ವಜ್ರಮಹೋತ್ಸವ ಸಮಿತಿಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಭಾನುವಾರ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ ತುಳುಜಾನಪದ ಕ್ರೀಡೋತ್ಸವದಲ್ಲಿ ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗದಲ್ಲಿ ಮಂಗಳೂರು ತಾಲ್ಲೂಕು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.

ಪುರುಷರ ವಿಭಾಗದಲ್ಲಿ ಮಂಗಳೂರು ತಾಲ್ಲೂಕು 12 ಅಂಕ ಪಡೆದುಕೊಂಡರೆ, ಮಹಿಳೆಯರ ವಿಭಾಗದಲ್ಲಿ ಅದೇ ತಂಡ 9 ಅಂಕ ಪಡದುಕೊಂಡಿದೆ. 11 ಅಂಕ ಪಡೆದ ಪುತ್ತೂರು ತಾಲ್ಲೂಕು ಪುರುಷರ ವಿಭಾಗದಲ್ಲಿ ಹಾಗೂ 6 ಅಂಕ ಪಡೆದ ಬಂಟ್ವಾಳ ತಾಲ್ಲೂಕು ಮಹಿಳೆಯರ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು.

ಸ್ಪರ್ಧೆಯ ಇತರ ಫಲಿತಾಂಶ ವಿವರ:
ಪುರುಷರ ವಿಭಾಗ: ಲಗೋರಿ:ಎನ್.ಚಾಲೆಂಜರ್ಸ್ ಮುಂಡಾಜೆ ಬೆಳ್ತಂಗಡಿ (ಪ್ರಥಮ), ಎಸ್.ಬಿ.ಎಂ ಬಟ್ಟಡ್ಕ ಪುತ್ತೂರು (ದ್ವಿತೀಯ), ಮಜೂರು ಕಾಪು (ತೃತೀಯ)

ಕುಟ್ಟಿದೊಣ್ಣೆ: ಸತೀಶ್ ಬಳಗ ಪುತ್ತೂರು (ಪ್ರಥಮ), ಮಜೂರು ಕಾಪು (ದ್ವಿತೀಯ) ಸಿದ್ದಿವಿನಾಯಕ ಮಂಗಳುರು (ತೃತೀಯ)

ಹಗ್ಗಜಗ್ಗಾಟ: ಶಕ್ತಿಭಾರತ್ ಮಂಗಳೂರು (ಪ್ರಥಮ) ಚೆನ್ನಕೇಶವ ಬಳಗ ಪುತ್ತೂರು (ದ್ವಿತೀಯ) ಪ್ರಿಯಾ ಬೆಳ್ತಂಗಡಿ (ತೃತೀಯ)

ಶಕ್ತಿಕಲ್ಲು: ದಿವಾಕರ ಚೌಟ ಮಂಗಳೂರು (ಪ್ರಥಮ), ಉದಯ ಎಂ.ಎಸ್ ಮೂಡುಬಿದಿರೆ(ದ್ವಿತೀಯ),ಆರ್ಥರ್ ಮಂಗಳೂರು (ತೃತೀಯ)

ಮಹಿಳೆಯರ ವಿಭಾಗ:

ಜುಬಿಲಿ: ತುಳು ಅಪ್ಪೆ ಜೋಕುಲು ಕಾಸರಗೋಡು (ಪ್ರಥಮ), ಚಂಪಾ ಬಳಗ (ದ್ವಿತೀಯ), ತುಳು ಅಪ್ಪೆ ಜೋಕುಲು ಬಿ.(ತೃತೀಯ), ಚೆನ್ನಮಣೆ:ತಿಲಕ ಸುಳ್ಯ (ಪ್ರಥಮ), ವೀಣಾ ಭಟ್(ದ್ವಿತೀಯ), ಮೀನಾಕ್ಷಿ ಬಂಟ್ವಾಳ (ತೃತೀಯ)

ಟೊಂಕ:ಜಯಶ್ರೀ ಬಳಗ ಕೇಪು ಬಂಟ್ವಾಳ (ಪ್ರಥಮ), ಜ್ಯೋತಿ ಬಳಗ ಪೆರ್ಡೂರು (ದ್ವಿತೀಯ), ಪ್ರೀತಿ ಬಳಗ ಮಂಗಳೂರು (ತೃತೀಯ)

ಕಲ್ಲಾಟ: ಪುಷ್ಪಾ ಶಶಿಧರ್ ಉಡುಪಿ(ಪ್ರಥಮ), ವನಿತಾ ಶ್ರೀದೇವಿ ಕಾರ್ಕಳ(ಪ್ರಥಮ)ಶಾಂತಿ ನಾಯಕ್ ಉಡುಪಿ((ತೃತೀಯ)

ಹಗ್ಗಜಗ್ಗಾಟ: ನ್ಯಾಶನಲ್ ಹೆಲ್ತ್ ಲೀಗ್ ಮಂಗಳೂರು (ಪ್ರಥಮ), ನ್ಯೂ ಜನತಾ ಬಾಬುಗುಡ್ಡೆ ಮಂಗಳೂರು(ದ್ವಿತೀಯ), ಪ್ರೇಮಾ ತಂಡ ಪುತ್ತೂರು(ತೃತೀಯ)ವಿಜೇತರಿಗೆ ಜಿಲ್ಲಾಧಿಕಾರಿ ಡಾ.ಚೆನ್ನಪ್ಪ ಗೌಡ ಬಹುಮಾನ ವಿತರಿಸಿದರು. ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಯಶೋವರ್ಮ, ಮಾಜಿ ಸಚಿವ ಅಮರನಾಥ್ ಶೆಟ್ಟಿ, ವಾಮನ ನಂದಾವರ, ತೇಜೋಮಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕು ಯೋಜನಾಧಿಕಾರಿ ಪುರಂದರ, ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT