ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಸೆಂಟ್ ಹೊಸರುಚಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಸುಂದರವಾದ ವಾತಾವರಣ. ಬಾಗಿಲು ಪ್ರವೇಶಿಸುವ ಬಳಿ ದೀಪದ ಸ್ವಾಗತ... ಮರೆತುಹೋದ ಸಂಪ್ರದಾಯವನ್ನು ನೆನಪಿಸುವಂತೆ ಒಳಗಡೆ ಇಟ್ಟಿರುವ ಪಾತ್ರೆ ಪಗಡೆಗಳು. ಕಣ್ಣಿಗೆ ಮುದ ನೀಡುವುದರ ಜೊತೆಗೆ ಮನಸ್ಸಿಗೂ ಆನಂದ. ಇದೆಲ್ಲ ಕಂಡುಬಂದಿದ್ದು ಅರೋಮಾ ಆಫ್ ಸೌಥ್, `37 ಕ್ರೆಸೆಂಟ್ ಹೋಟೆಲ್~ನಲ್ಲಿ. 

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಎಲ್ಲ ಕಾಲಕ್ಕೂ ಸೂಕ್ತ ಎಂಬುದು ಇತ್ತೀಚಿನ ಹೋಟೆಲ್ ಉದ್ಯಮವನ್ನು ನೋಡಿದರೆ ತಿಳಿಯುವುದು. ಸ್ವಾದಿಷ್ಟವಾದ ಭೋಜನವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಅಲ್ಲಿ ಸಂಪ್ರದಾಯ, ಸಂಸ್ಕೃತಿ ಮಿಳಿತವಾದರೆ ಇನ್ನೂ ಸುಂದರವಾಗಿರುತ್ತದೆ. 37 ಕ್ರೆಸೆಂಟ್ ಹೋಟೆಲ್‌ನಲ್ಲಿ ಇದು ಲಭ್ಯ.

ದಕ್ಷಿಣ ಭಾರತದ ಆಹಾರ ಎಂದರೆ ಅದಕ್ಕೆ ಅದರದ್ದೇ ಆದ `ಮಸಾಲೆ~ಯ ಸೊಗಡಿರುತ್ತದೆ. ಘಂ ಎನ್ನುವ ಪರಿಮಳ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ. ಇಲ್ಲಿ ಕರ್ನಾಟಕ, ಆಂಧ್ರ, ಕೇರಳ, ಮತ್ತು ತಮಿಳುನಾಡಿನ ಪಾರಂಪರಿಕ ಆಹಾರಗಳನ್ನು ಒಂದೇ ಕಡೆ ಸವಿಯಬಹುದು.

ನುರಿತ ಬಾಣಸಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ನಗುಮೊಗದಿಂದ ಉಣಬಡಿಸುವವರು, ಘಂ ಎನ್ನುವ ಅಡುಗೆ ಅಮ್ಮನ ಕೈರುಚಿಯನ್ನು ಅರೆಕ್ಷಣ ನೆನಪಿಸುತ್ತದೆ. ಕರ್ನಾಟಕದ ರುಚಿ ಬೇಕೆನಿಸಿದರೆ ಜಿಂಜರ್ ಸೂಪ್ (ಶುಂಠಿ ಕಷಾಯ), ಉಡುಪಿ ಸಾಂಬಾರ್, ಮೈಸೂರು ಟೊಮೆಟೋ ರಸಂ ಜೊತೆಗೆ ಗೋಧಿ ಪಾಯಸ, ಕಾಯಿ ಹೋಳಿಗೆ ಸಹ ಬಾಯಲ್ಲಿ ನೀರೂರಿಸುತ್ತದೆ.

ಇನ್ನು ತಮಿಳುನಾಡಿನ ಪರಂಗಿಕಾಯಿ ಪಚಡಿ, ಚೆಟ್ಟಿನಾಡು ಫಿಶ್, ಸಾಂಬಾರ್, ರಸಂ, ಅಪ್ಪಲಂ, ಪಾಯಸಂ, ಕೇಸರಿ ಜೊತೆಗೆ ಆಂಧ್ರದ ಕೋಳಿಸಾರು, ಚಿತ್ತೂರು ಕೋಳಿ ಸಾರು. ಪಪ್ಪು ಸಾರು (ಬೇಳೆಯಿಂದ ತಯಾರಿಸುವ ಒಂದು ಬಗೆಯ ಸಾರು) ಪೆಸರಟ್ಟು ಕೂರ (ಹೆಸರು ಬೇಳೆಯಿಂದ ತಯಾರಿಸುವ  ತಿಂಡಿ) ರುಚಿಯಾದ ಪುಳಿಯೋಗರೆ, ನಿಮ್‌ಕಾಯಿ ರಸಂ (ಲಿಂಬೆಕಾಯಿಂದ ಮಾಡುವ ರಸಂ) ಜೊತೆಗೆ ಸಿಹಿಗಾಗಿ ಪೆಸರು ಪಪ್ಪು ಪಾಯಸಂ (ಹೆಸರು ಬೇಳೆ ಪಾಯಸ) ಸವಿಯಲು ಸಿದ್ಧ. ಕೇರಳದ ಅಡುಗೆಯೆಂದರೆ ಎಲ್ಲರಿಗೂ ಪ್ರೀತಿ. ಅದರ ರುಚಿ ನೋಡಲು ಇಲ್ಲಿಯೇ ಬರಬೇಕು.

ಹಾಲು ತುಪ್ಪದ ಮಿಶ್ರಣದಿಂದ ಮಾಡಿದ ಖೀರು ಎರಡು ಕಪ್ ತಿಂದರೂ ಮತ್ತೆ ಬೇಕೆನಿಸುವಷ್ಟು ರುಚಿಯಾಗಿತ್ತು. ಆದರೆ, ಆಂಧ್ರದ ಚಿಕನ್ ಸಾರು ಮಾತ್ರ ಒಂದು ಬಾಟಲ್ ನೀರು ಕುಡಿಸಿತ್ತು. ಜೊತೆಗೆ ತರಕಾರಿಯಿಂದ ಮಾಡಿದ ಸಲಾಡ್‌ಗೆ ಸ್ವಲ್ಪ ಉಪ್ಪು ಕಡಿಮೆ ಎನ್ನಿಸಿದರೂ ಮಾವಿನ ಮಿಡಿಯ ಉಪ್ಪಿನ ಕಾಯಿ ಆ ಕೊರತೆಯನ್ನು ನೀಗಿತ್ತು.

ನಾವು ಹೆಚ್ಚಾಗಿ ಮಣ್ಣಿನ ಪಾತ್ರೆಯಲ್ಲಿಯೇ ಅಡುಗೆ ಮಾಡುತ್ತೇವೆ. ನಮಗೆ ಜನರ ಆರೋಗ್ಯ ಮುಖ್ಯ. ಇಲ್ಲಿ ಎಲ್ಲ ಬಗೆಯ ಆಹಾರ ಸಹ ಸಿಗುತ್ತದೆ. ಭಾರತದ ತಿನಿಸುಗಳಿಗೆ ಹೊಸ ರೂಪ ಮತ್ತು ರುಚಿಯನ್ನು ನೀಡಿ ಜನರಿಗೆ ಉಣಬಡಿಸುವುದು ನಮ್ಮ ಗುರಿ ಎಂದು ಹೇಳುತ್ತಾರೆ ಜನರಲ್‌ಮ್ಯಾನೇಜರ್  ಗಿರೀಶ್.

ಶೇಷಾದ್ರಿಪುರಂನಲ್ಲಿರುವ ಈ ಐಷಾರಾಮಿ ಹೋಟೆಲ್‌ನಲ್ಲಿ ಬಫೆ ಜೊತೆಗೆ ಒಂದು ಗ್ಲಾಸ್ ವೈನ್ ಇಲ್ಲವೇ ಬಿಯರ್ ಸಹ ನೀಡುತ್ತಾರೆ. ಕರಿದ ಮೀನು, ಬೇಬಿ ಪೊಟೆಟೋ, ಕಬಾಬ್ ಪ್ರೈ, ಬೇಬಿ ಕಾರ್ನ್ ಸವಿ ಸವಿಯಲು ಇಲ್ಲಿ ಭೇಟಿ ನೀಡಿ. ಮಾಹಿತಿಗೆ:  4037 3737.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT