ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಾಸಿಕ್‌ ಚೆಸ್‌ ಟೂರ್ನಿ: ಅಭಿಜಿತ್‌ ಗುಪ್ತಾಗೆ ನಿರಾಸೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ಅಭಿಜಿತ್‌ ಗುಪ್ತಾ ಇಲ್ಲಿ ನಡೆಯುತ್ತಿರುವ ಲಂಡನ್‌ ಕ್ಲಾಸಿಕ್ ಚೆಸ್‌ ಟೂರ್ನಿಯ ಓಪನ್‌ ವಿಭಾಗದಲ್ಲಿ ಸೋಲು ಕಂಡಿದ್ದು ಏಳನೇ ಸ್ಥಾನ ಪಡೆದಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಅಭಿಜಿತ್‌ ನಾರ್ವೆಯ ಜಾನ್ ಲುಡ್ವಿಗ್‌ ಹ್ಯಾಮರ್‌ ಎದುರು ಪರಾಭವಗೊಂಡರು. ಭಾರತದ ತಾನಿಯಾ ಸಚದೇವ್‌, ಇಶಾ ಕಾರ್ವಾಡೆ ಕೂಡ ನಿರಾಸೆ ಮೂಡಿಸಿದರು.

ಈ ಟೂರ್ನಿಯ ಪ್ರೀಮಿಯರ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT