ನ್ಯೂಯಾರ್ಕ್ (ಪಿಟಿಐ): ಕುಡಿಯುವ ನೀರು ಶುದ್ಧಗೊಳಿಸಲು ಬಳಸುವ ಕ್ಲೋರಿನ್, ಆಹಾರದ ಅಲರ್ಜಿ ಉಂಟು ಮಾಡಬಹುದು !
ನೀರನ್ನು ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಂದ ಮುಕ್ತಗೊಳಿಸಲು ಹಾಕಿದ ಕ್ಲೋರಿನ್‌ನಿಂದ ಉತ್ಪತ್ತಿಯಾದ `ಡೈಕ್ಲೋರೋಫಿನಾಲ್'ಗಳಿಗೆ ತೆರೆದುಕೊಂಡ ವ್ಯಕ್ತಿಗಳು ಆಹಾರ ಅಲರ್ಜಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ.
`ಡೈಕ್ಲೋರೋಫಿನಾಲ್ ಹೆಚ್ಚು ಮಟ್ಟದಲ್ಲಿ ಹೊಂದಿರುವ ಕೀಟನಾಶಕಗಳು ಮನುಷ್ಯರ ಆಹಾರ ಅಲರ್ಜಿ ನಿರೋಧಕ ಸಾಮರ್ಥ್ಯವನ್ನು ಕುಂಠಿತಗೊಳಿಸಬಹುದ' ಎಂದು ನ್ಯೂಯಾರ್ಕ್‌ನ ಪ್ರೊ. ಎಲಿನಾ ಜೆರ್ಶೌ ಹೇಳಿದ್ದಾರೆ.