ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಮನುದೇವ್, ಭಾಸ್ಕರ್

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಐಎಚ್ ಮನುದೇವ್ ಮತ್ತು ಬಿ. ಭಾಸ್ಕರ್ ಇಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಸ್ನೂಕರ್ ಅರ್ಹತಾ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಕೆಎಸ್‌ಬಿಎ ಹಾಲ್‌ನಲ್ಲಿ ಸೋಮವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಮನುದೇವ್ 73-40, 73-39, 48-4, 53-13 ರಲ್ಲಿ ಎಂ. ಪ್ರಭಾಕರ್ ವಿರುದ್ಧ ಗೆಲುವು ಪಡೆದರು. ಭಾಸ್ಕರ್ 63-27, 62-20, 69-10, 48-53, 70-45 ರಲ್ಲಿ ಎಂ. ರೋಹನ್ ಅವರನ್ನು ಮಣಿಸಿದರು.

ಕಮಲ್ ಚಾವ್ಲಾ 76-22, 66-48, 56-22, 60-23 ರಲ್ಲಿ ಆಂಧ್ರ ಪ್ರದೇಶದ ಜಿ. ಶ್ರೀಧರ್ ಅವರನ್ನು ಮಣಿಸಿದರೆ, ಸೌರವ್ ಕೊಠಾರಿ 70-08, 46-68, 61-31, 54-62, 85-09, 80-40 ರಲ್ಲಿ ಅರವಿಂದ್ ಸವೂರ್ ವಿರುದ್ಧ ಗೆದ್ದರು.

ಹಿರಿಯ ಆಟಗಾರ ಸವೂರ್ ಎರಡನೇ ಸುತ್ತಿನ ಪಂದ್ಯದಲ್ಲಿ  71-14 71-70 39-59 31-91 67-28 42-57 67-33 ರಲ್ಲಿ ಸುಫಿಯಾನ್ ಅಹ್ಮದ್ ಅವರನ್ನು ಮಣಿಸಿದ್ದರು. ಆದರೆ ಸೌರವ್ ವಿರುದ್ಧ ಅವರಿಗೆ ಗೆಲುವು ಒಲಿಯಲಿಲ್ಲ.

ಇತರ ಪಂದ್ಯಗಳಲ್ಲಿ ರಫತ್ ಹಬೀಬಿ  28-61, 65-20, 57-17, 57-36, 58-33 ರಲ್ಲಿ ಶೀತಲ್ ಕುಮಾರ್ ಎದುರೂ, ಪ್ರೇಮ್ ಕುಮಾರ್ 73-38, 59-41, 75-30, 58-35 ಫ್ರೇಮ್‌ಗಳಿಂದ ಎಲ್. ನಾಗರಾಜ್ ಮೇಲೂ,  ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT