ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೈನಾ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಸೈನಾ ನೆಹ್ವಾಲ್ ಸೋಲ್‌ನಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ 21-14, 21-10ರಲ್ಲಿ ಚೈನೀಸ್ ತೈಪಿಯಾದ ಶಾವೊ ಚೇ ಚೆಂಗ್ ಅವರನ್ನು ಮಣಿಸಿದರು. ಈ ಹೋರಾಟ 36 ನಿಮಿಷಗಳ ಕಾಲ ನಡೆಯಿತು.

ನಾಲ್ಕನೇ ಶ್ರೇಯಾಂಕ ಹೊಂದಿರುವ ಹೈದರಾಬಾದ್‌ನ ಆಟಗಾರ್ತಿ ಸೈನಾ ಮೊದಲ ಗೇಮ್‌ನಲ್ಲಿ 14-4ರಲ್ಲಿ ಮುನ್ನಡೆ ಹೊಂದಿದ್ದರು. ಆರಂಭದ ಆಟವನ್ನು ಅವರು ಕೊನೆಯವರೆಗೂ ಉಳಿಸಿಕೊಂಡರು.

ಎರಡನೇ ಗೇಮ್‌ನ ಪ್ರಾರಂಭದಲ್ಲಿ 0-3ರಲ್ಲಿ ಹಿನ್ನಡೆಯಲ್ಲಿದ್ದರು. ನಂತರ ಸತತ ನಾಲ್ಕು ಪಾಯಿಂಟ್ ಗಳಿಸಿ ಮುನ್ನಡೆಯನ್ನು 7-3ಕ್ಕೆ ಹೆಚ್ಚಿಸಿಕೊಂಡರು. ಇದಕ್ಕೆ ತಿರುಗೇಟು ನೀಡಿದ ಎದುರಾಳಿ ಆಟಗಾರ್ತಿ ಚೆಂಗ್ ಸಹ ನಾಲ್ಕು ಪಾಯಿಂಟ್ ಗಳಿಸಿ 7-7ರಲ್ಲಿ ಸಮಬಲ ಸಾಧಿಸಿದರು. ನಂತರ ಈ 11-7ರಲ್ಲಿ ಮುನ್ನಡೆ ಸಾಧಿಸಿದರು.

ಜ್ವಾಲಾ-ಅಶ್ವಿನಿ ಜೋಡಿಗೆ ನಿರಾಸೆ: ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು. ಈ ಜೋಡಿ 10-21, 17-21 ರಲ್ಲಿ ಅಗ್ರ ಶ್ರೇಯಾಂಕದ ಚೀನಾದ ವಾಂಗ್-ಯಾಂಗ್ ಯು ಜೋಡಿ ಎದುರು ಪರಭಾವಗೊಂಡಿತು. ಈ ಪಂದ್ಯವು 34 ನಿಮಿಷದಲ್ಲಿ ಅಂತ್ಯ ಕಂಡಿತು.

ಎಂಟರ ಘಟ್ಟಕ್ಕೆ ಜ್ವಾಲಾ-ದಿಜು: ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗೂ ವಿ. ದಿಜು ಜೋಡಿ ಎಂಟರ ಘಟ್ಟ ಪ್ರವೇಶಿಸಿತು. ಈ ಜೋಡಿ 21-7, 10-21, 21-16ರಲ್ಲಿ ದಕ್ಷಿಣ ಕೊರಿಯಾದ ಸಂಗ್ ಹುಯನ್ ಕೊ-ಹುಯಿ ವನ್ ಇಮ್ ಎದುರು ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT