ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೈನಾ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚೈನೀಸ್ ತೈಪೆಯ ಶಾವೊ ಚೆಂಗ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸೈನಾ ನೆಹ್ವಾಲ್ ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-19, 21-8 ರಲ್ಲಿ ಎದುರಾಳಿಯನ್ನು ಮಣಿಸಿದರು. ಸೈನಾ 31 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು.

ವಿಶ್ವ ರ‌್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸೈನಾ ಶುಕ್ರವಾರ ನಡೆಯುವ ಎಂಟರಘಟ್ಟದ ಪಂದ್ಯದಲ್ಲಿ ಡೆನ್ಮಾರ್ಕ್‌ನ ಟಿನ್ ಬಾನ್ ಅವರ ಸವಾಲನ್ನು ಎದುರಿಸಲಿದ್ದಾರೆ. ಎರಡು ಬಾರಿಯ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಬಾನ್ ದಿನದ ಮತ್ತೊಂದು ಪಂದ್ಯದಲ್ಲಿ 21-16, 21-15 ರಲ್ಲಿ ಚೀನಾದ ಕ್ಸಿನ್ ಲಿಯು ವಿರುದ್ಧ ಜಯ ಪಡೆದರು.

ಸೈನಾ ಮತ್ತು ಚೆಂಗ್ ನಡುವಿನ ಪಂದ್ಯದ ವೊದಲ ಸೆಟ್‌ನಲ್ಲಿ ತಕ್ಕಮಟ್ಟಿನ ಪೈಪೋಟಿ ಕಂಡುಬಂತು. ಸೆಟ್‌ನಲ್ಲಿ ಕೊನೆಯವರೆಗೂ ಚೈನೀಸ್ ತೈಪೆಯ ಆಟಗಾರ್ತಿ ಮುನ್ನಡೆ ಪಡೆದಿದ್ದರು. ನಿರ್ಣಾಯಕ ಕ್ಷಣದಲ್ಲಿ ಭಾರತದ ಸ್ಪರ್ಧಿ ಚುರುಕಿನ ಆಟ ತೋರಿದರು.

ಆರಂಭದಲ್ಲಿ 2-6 ರಲ್ಲಿ ಹಾಗೂ ಆ ಬಳಿಕ 15-19 ರಲ್ಲಿ ಹಿನ್ನಡೆ ಅನುಭವಿಸಿದ್ದ ಸೈನಾ ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ಆದರೆ ಸತತ ಆರು ಗೇಮ್‌ಗಳಲ್ಲಿ ಗೆಲುವು ಪಡೆದ ಸೆಟ್‌ನ್ನು 21-19 ರಲ್ಲಿ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ ಪೂರ್ಣ ಪ್ರಭುತ್ವ ಮೆರೆದರು. ಎದುರಾಳಿಗೆ ಮೇಲುಗೈ ಸಾಧಿಸಲು ಯಾವುದೇ ಅವಕಾಶ ನೀಡದೆ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು. ಕಳೆದ ವಾರ ನಡೆದ ಕೊರಿಯಾ ಓಪನ್ ಟೂರ್ನಿಯಲ್ಲೂ ಸೈನಾ ಎಂಟರಘಟ್ಟ ಪ್ರವೇಶಿಸಿದ್ದರು.

ಜ್ವಾಲಾ- ದಿಜುಗೆ ನಿರಾಸೆ: ಭಾರತದ ಜ್ವಾಲಾ ಗುಟ್ಟಾ ಮತ್ತು ವಿ. ದಿಜು ಜೋಡಿ ಇದೇ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿತು. ಭಾರತದ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 19-21, 23-21, 19-21 ರಲ್ಲಿ ಮಲೇಷ್ಯದ ಪೆಂಗ್ ಸೂನ್ ಚಾನ್ ಮತ್ತು ಲಿಯು ಯಿಂಗ್ ಗೊ ಎದುರು ಪರಾಭವಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT