ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ

ರಾಷ್ಟ್ರೀಯ ಸಬ್‌ ಜೂನಿಯರ್‌ ಕೊಕ್ಕೊ
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುಮಕೂರು: ಕರ್ನಾಟಕ ಬಾಲಕರ ತಂಡ  25ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕ– ಬಾಲಕಿಯರ ಕೊಕ್ಕೊ ಪಂದ್ಯಾವಳಿ ಲೀಗ್‌ ಹಂತದ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ತಲುಪಿದೆ. ಬಾಲಕಿಯರು ಹದಿನಾರರ ಘಟ್ಟ ಪ್ರವೇಶಿಸಿದರು.

ನಗರದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಶುಕ್ರವಾರ ಕರ್ನಾಟಕ ಬಾಲಕಿಯರ ತಂಡ ತೆಲಂಗಾಣ ವಿರುದ್ಧ 13– 1 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಕರ್ನಾಟಕ ತಂಡದ ಅಪೂರ್ವ 3.40 ನಿಮಿಷ ಆಟವಾಡಿದರು. ಕೆ.ಆರ್‌.ತೇಜಸ್ವಿನಿ 3.20 ನಿಮಿಷ ಆಟವಾಡಿ, ಔಟ್‌ ಆಗದೆ ಉಳಿದರು. ಕೆ.ಎಸ್‌.ಚೈತ್ರ 3 ಔಟ್‌ ಪಡೆದು, ಯಶಸ್ವಿ ಚೇಸರ್‌ ಆದರು.

ಕರ್ನಾಟಕ ಬಾಲಕರ ಸಬ್‌ಜೂನಿಯರ್‌ ತಂಡ ಬಿಹಾರ ತಂಡದ ವಿರುದ್ಧ 22–6 ಅಂಕಗಳಿಂದ ಜಯಗಳಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು. ರಾಜ್ಯ ತಂಡದ ಪ್ರಕಾಶ್‌ 3 ನಿಮಿಷ ಆಟವಾಡಿ, 3 ಔಟ್‌ ಪಡೆದರು. ಗಂಗಪ್ಪ 2 ನಿಮಿಷ ಆಟವಾಡಿ 6 ಔಟ್‌ ಪಡೆದರು. ಶಶಾಂಕ್‌ 1 ನಿಮಿಷ ಆಟವಾಡಿ, 4 ಔಟ್‌ ಪಡೆದಿದ್ದಾರೆ.

ಬಾಲಕರ ವಿಭಾಗ: ಛತ್ತೀಸ್‌ಗಡ ತಂಡ ಉತ್ತರಾಖಂಡ ವಿರುದ್ಧ 7– 1 ಅಂಕಗಳಿಂದ ಗೆಲುವು ಪಡೆಯಿತು. ಬಿಹಾರ ತಂಡ ವಿದರ್ಭ ವಿರುದ್ಧ 13–10, ಒಡಿಸ್ಸಾ ತಂಡ ಮಧ್ಯಪ್ರದೇಶ ವಿರುದ್ಧ 19–4, ತೆಲಂಗಾಣ ತಂಡ ಹರಿಯಾಣ ವಿರುದ್ಧ 11– 10, ಜಾರ್ಖಂಡ್‌ ತಂಡ ಪಂಜಾಬ್‌ ವಿರುದ್ಧ 17–5, ಆಂಧ್ರಪ್ರದೇಶ ತಂಡ ಉತ್ತರಪ್ರದೇಶ ವಿರುದ್ಧ 10–5, ತಮಿಳುನಾಡು ತಂಡ ದೆಹಲಿ ವಿರುದ್ಧ 16–5, ಕೇರಳ ತಂಡ ಕೊಲ್ಲಾಪುರ ವಿರುದ್ಧ 14–9, ಮಹಾರಾಷ್ಟ್ರ ತಂಡ ಗೋವಾ ವಿರುದ್ಧ 15–5, ರಾಜಸ್ತಾನ ತಂಡ ನಾಗಲ್ಯಾಂಡ್‌ ವಿರುದ್ಧ 12–10 ಅಂಕಗಳಿಂದ ಗೆಲುವು ಸಾಧಿಸಿದೆ.

ಬಾಲಕಿಯರ ವಿಭಾಗ: ಗೋವಾ ತಂಡ ಮಧ್ಯಪ್ರದೇಶ ವಿರುದ್ಧ 9–2, ಉತ್ತರಪ್ರದೇಶ ತಂಡ ಗುಜರಾತ್‌ ವಿರುದ್ಧ 9–4, ಕೇರಳ ತಂಡ ಆಂಧ್ರಪ್ರದೇಶ ವಿರುದ್ಧ 9–8, ಪಶ್ಚಿಮ ಬಂಗಾಳ ತಂಡ ಒಡಿಸ್ಸಾ ವಿರುದ್ಧ 18–12, ವಿದರ್ಭ ತಂಡ ದೆಹಲಿ ವಿರುದ್ಧ 9–6, ಕೊಲ್ಲಾಪುರ ತಂಡ ತ್ರಿಪುರ ವಿರುದ್ಧ 19–6, ಹರಿಯಾಣ ತಂಡ ಪಂಜಾಬ್‌ ವಿರುದ್ಧ 19–3, ಕೇರಳ ತಂಡ ಮಧ್ಯಭಾರತ ವಿರುದ್ಧ 14–3, ಬಿಹಾರ ತಂಡ ಹಿಮಾಚಲ ಪ್ರದೇಶ ವಿರುದ್ಧ 14–2 ಅಂಕಗಳಿಂದ ಗೆಲುವು ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT