ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವೆಟ್ಟಾ: ಬಾಂಬ್ ದಾಳಿ-26 ಸಾವು

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ನಗರದಲ್ಲಿ ಬುಧವಾರ ಹಿರಿಯ ಸೇನಾ ಕಮಾಂಡರ್ ಮನೆ ಮೇಲೆ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಗೆ 26 ಜನ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಸೇನಾ ಕಮಾಂಡರ್ ಪತ್ನಿ, ಇಬ್ಬರು ಮಕ್ಕಳು ಹಾಗೂ 17 ಸೈನಿಕರು ಸತ್ತಿದ್ದಾರೆ ಎನ್ನಲಾಗಿದೆ.
`ಮೊದಲಿಗೆ ಒಬ್ಬ ಆತ್ಮಹತ್ಯಾ ದಾಳಿಕೋರ ಸುಮಾರು 90 ಕೆ.ಜಿ.ಯಷ್ಟು ತೂಕದ ಸ್ಫೋಟಕಗಳನ್ನು ತುಂಬಿದ್ದ ಕಾರಿನಲ್ಲಿ ಸೇನಾಧಿಕಾರಿಯ ಬಂಗಲೆಯ ಆವರಣ ಪ್ರವೇಶಿಸಿದ. ಕಾರಿನಿಂದ ಕೆಳಗಿಳಿದು ಗುಂಡಿನ ದಾಳಿ ನಡೆಸಿ ನಂತರ ತನ್ನನ್ನೇ ತಾನು ಸ್ಫೋಟಿಸಿಕೊಂಡ. ಇದೇ ವೇಳೆ ಮತ್ತೊಂದು ದಾರಿಯಿಂದ ಒಳ ನುಸುಳಿದ ಇನ್ನೊಬ್ಬ ದಾಳಿಕೋರ ಮನೆಯೊಳಗೆ ತನ್ನನ್ನು ಸ್ಫೋಟಿಸಿಕೊಂಡ~  ಎಂದು ಪ್ರತ್ಯಕ್ಷದರ್ಶಿಗಳನ್ನು ಆಧರಿಸಿ ಟಿ.ವಿ.ಚಾನೆಲ್‌ಗಳು ವರದಿ ಮಾಡಿವೆ. ಸ್ಫೋಟಕ್ಕೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.
ಇಡೀ ನಗರವನ್ನು ಈಗ ಸೇನೆ ಮತ್ತು ಅರೆಸೇನಾ ಪಡೆಗಳು ಸುತ್ತುವರಿದಿವೆ ಎಂದು ವರದಿಗಳು ತಿಳಿಸಿವೆ.
ಪಾಕ್ ರಕ್ಷಣಾ ಪಡೆಗಳು ಅಲ್‌ಖೈದಾ ಸಂಘಟನೆಯ ಹಿರಿಯ ಮುಖಂಡ ಮೌರಿತಾನಿ ಹಾಗೂ ಇತರೆ ಪ್ರಮುಖ ಉಗ್ರರನ್ನು ಬಂಧಿಸಿದ ಒಂದೇ ದಿನದಲ್ಲಿ ಸೇನಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದು ಗಮನಾರ್ಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT