ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಯಾಚಿಸಿದ ಉಲ್ಫಾ ನಾಯಕ ಚೇಟಿಯಾ

Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ತನ್ನ ಹಿಂದಿನ ಎಲ್ಲಾ ಅಪರಾಧಗಳನ್ನು ಮನ್ನಿಸಿ ಅಸ್ಸಾಂ ಜನರು ತನಗೆ ಕ್ಷಮೆ ನೀಡಬೇಕೆಂದು ಉಲ್ಫಾ ಸಂಘಟನೆಯ ಹಿರಿಯ ನಾಯಕ ಅನೂಪ್ ಚೇಟಿಯಾ ಸೋಮವಾರ ಕೋರಿದ್ದಾನೆ. ಅಲ್ಲದೆ, ‘ಶಾಂತಿ ಮಾತುಕತೆಗೆ ನಾನು ಸಿದ್ಧನಿದ್ದೇನೆ’ ಎಂದೂ ಎರಡು ದಶಕಗಳಿಂದ ಬಾಂಗ್ಲಾದೇಶದಲ್ಲಿ ತಲೆಮರಿಸಿಕೊಂಡಿದ್ದ ಚೇಟಿಯಾ ಹೇಳಿದ್ದಾನೆ.

ಎರಡು ಟಾಡಾ ಪ್ರಕರಣಗಳ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ಹೊರಬಂದ ನಂತರ ಮಾತನಾಡಿದ ಚೇಟಿಯಾ, ‘ನಮ್ಮಿಂದಾಗಿ ಜೀವ ಕಳೆದುಕೊಂಡ ಅಮಾಯಕ ಜನರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ ಮತ್ತು ಅವರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾನೆ.

‘ಶಾಂತಿ ಮಾತುಕತೆಗೆ ನಾನು ಬರುವುದಿಲ್ಲ ಎಂದೇ ಅನೇಕರು ಭಾವಿಸಿದ್ದಾರೆ. ಅಲ್ಲದೆ ನಾನು ಮತ್ತೆ ತಲೆಮರೆಸಿಕೊಳ್ಳಬಹುದು ಎಂದೂ ಕೆಲವರು ತಿಳಿದಿದ್ದಾರೆ. ಆದರೆ ಶಾಂತಿ ಮಾತುಕತೆಗೆ ನಾನು ಸಿದ್ಧನಿದ್ದೇನೆ’ ಎಂದು ಚೇತಿಯಾ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT