ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಗೆ ನಕಾರ, ಪಟ್ಟು ಬಿಡದ ಭಾರತ

Last Updated 20 ಡಿಸೆಂಬರ್ 2013, 9:21 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್ಎಸ್/ಪಿಟಿಐ): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಪ್ರಕರಣದಲ್ಲಿ ನಮ್ಮ ಬೇಡಿಕೆಯನ್ನು ತಿರಸ್ಕರಿಸುವ ಮೂಲಕ ಅಮೆರಿಕ ಅಪಹಾಸ್ಯ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ, ಅವರಿಂದ ತಪ್ಪಾಗಿದೆ ಅದಕ್ಕಾಗಿ ಅವರು ಕ್ಷಮೆಯಾಚಿಸಲೇ ಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್ ನಾಥ್ ಶುಕ್ರವಾರ ತಿಳಿಸಿದ್ದಾರೆ.

ದೇವಯಾನಿ ಪ್ರಕರಣ ಕುರಿತು ಬೇಷರತ್ತಾಗಿ ಕ್ಷಮೆಯಾಚಿಸಲು ಮತ್ತು  ಮೊಕದ್ದಮೆ ಕೈಬಿಡಬೇಕೆಂಬ ಭಾರತದ ಬೇಡಿಕೆಯನ್ನು ಅಮೆರಿಕ ತಿರಸ್ಕರಿಸಿದ ಬೆನ್ನಲ್ಲೇ ಕಮಲ್ ನಾಥ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ದೇವಯಾನಿ ಪ್ರಕರಣ ಭಾರತದ ವಿಷಯ ಎಂದು ಸುಮ್ಮನಿರದೆ ಪ್ರತಿಯೊಬ್ಬರೂ ಅಮೆರಿಕದ ವರ್ತನೆ ವಿರುದ್ಧ ಧ್ವನಿ ಎತ್ತಬೇಕು ಎಂದಿದ್ದಾರೆ. 

ಪ್ರಕರಣದ ಕುರಿತು ವಿಷಾದ ವ್ಯಕ್ತಪಡಿಸುವುದಕ್ಕೂ ಅವರ ಮೇಲಿನ ಆರೋಪಗಳನ್ನು ಕೈಬಿಡುವುದಕ್ಕೂ ಬಹಳ ವ್ಯತ್ಯಾಸವಿದೆ. ದೇವಯಾನಿ ಅವರ ಮೇಲಿನ ಮೊಕದ್ದಮೆ ಕೈಬಿಟ್ಟು ಕ್ಷಮಾಪಣೆ ಕೇಳಲಾಗದು ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಅಲ್ಲದೆ ಇಂತಹ ಆರೋಪಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅಮೆರಿಕದ ರಾಜ್ಯ ಇಲಾಖೆ ವಕ್ತಾರೆ ಮೆರಿ ಶರ್ಫ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT