ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಯಾಚಿಸಿದ ಅಮೆರಿಕ ಗಾಯಕ

ದೇವಯಾನಿ ಬಂಧನ ಪ್ರಕರಣ
Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಪ್ರಕರಣದಲ್ಲಿ ಅಮೆರಿಕ ಕ್ಷಮೆಯಾಚಿಸುವುದೇ ಇಲ್ಲ ಎಂದು ಒಂದೆಡೆ ಹೇಳುತ್ತಿದ್ದರೆ ಮತ್ತೊಂದೆಡೆ ಅಮೆರಿಕದ ಚರ್ಚ್‌ನ ಸಂಗೀತ ತಂಡದ ಹಾಡುಗಾರರೊಬ್ಬರು ಈ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಕೊನೆಯಲ್ಲಿ ದೇವಯಾನಿ ಅವರ ಬಂಧನ ಉಭಯ ದೇಶಗಳ ನಡುವಣ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಅಮೆರಿಕದ ಫಿಲಡೆಲ್ಪಿಯಾದ ಖ್ಯಾತ ಹಾಡುಗಾರ ಸ್ಟೀವನ್‌ ಎಂ.ಫಿಷರ್‌ ನವದೆಹಲಿಯ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಶನಿವಾರ ಎರಡು ಗಂಟೆಗಳ ಸಂಗೀತ ಕಛೇರಿ ನಡೆಸಿ ಕೊಟ್ಟರು. ಕಿಕ್ಕಿರಿದು ತುಂಬಿದ್ದ ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿ, ‘ಭಾರತದ ರಾಜತಾಂತ್ರಿಕ ಅಧಿಕಾರಿಯ ಬಂಧನ ಅವಮಾನಕರ. ಇಂತಹ ಘಟನೆ ನಡೆದುದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದರು.

ದೇವಯಾನಿ ಬಂಧನದ ನಂತರ ಅಮೆರಿಕ ವಿರೋಧಿ ಭಾವನೆ ಸೃಷ್ಟಿಯಾಗಿರುವ ಕಾರಣ ಭಾರತಕ್ಕೆ ಈ ಸಂದರ್ಭದಲ್ಲಿ ಭೇಟಿ ನೀಡುವುದು ಸೂಕ್ತವಲ್ಲ ಎಂದು ತಂಡಕ್ಕೆ ಸಲಹೆ ನೀಡಲಾಗಿತ್ತು. ಆದರೂ, ಭಾರತ ಪ್ರವಾಸದ ವೇಳೆ ಅಮೆರಿಕದ ಗೀತೆಗಳನ್ನು ಹಾಡದಂತೆ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT