ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರ ಉತ್ಪಾದನೆ ಹೆಚ್ಚಳ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬೇಡಿಕೆ ಮತ್ತು ಬೆಲೆ ಏರಿಕೆಯಿಂದ ಭಾರತದ ಒಟ್ಟಾರೆ ಕ್ಷೀರ ಉತ್ಪಾದನೆ ಪ್ರಸಕ್ತ ವರ್ಷ ಶೇ 5 ರಷ್ಟು ಹೆಚ್ಚಲಿದ್ದು, 12.90 ಕೋಟಿ ಟನ್‌ಗಳಷ್ಟಾಗಲಿದೆ ಎಂದು ಅಮೆರಿಕ ಕೃಷಿ ಇಲಾಖೆ (ಯುಎಸ್‌ಡಿಎ) ಅಂದಾಜಿಸಿದೆ.

ಕಳೆದ ವರ್ಷ 12.30 ಕೋಟಿ ಟನ್ ಹಾಲು ಉತ್ಪಾದನೆ ಆಗಿತ್ತು. ಪ್ರಸಕ್ತ ವರ್ಷ ಮುಂಗಾರು ಉತ್ತಮವಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲವಾಗಿದೆ. ಇನ್ನೊಂದೆಡೆ ಹಾಲಿನ ದರವೂ ಹೆಚ್ಚಿದ್ದು ಹಸುಗಳ ಒಡೆಯರಿಗೆ ವರಮಾನ ಹೆಚ್ಚಿದೆ ಎಂದು `ಯುಎಸ್‌ಡಿಎ~ ವರದಿ ತಿಳಿಸಿದೆ.

ಹಾಲಿನ ಪುಡಿ(ಕೆನೆ ರಹಿತ) ರಫ್ತು ಮೇಲೆ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ಕೊಬ್ಬು ರಹಿತ ಹಾಲಿನ ಉತ್ಪನ್ನಗಳ ಸಂಗ್ರಹವೂ ಹೆಚ್ಚಿದೆ. ಹಾಲಿನ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಫೆಬ್ರುವರಿಯಲ್ಲಿ ಸರ್ಕಾರ ಹಾಲಿನ ಪುಡಿ ರಫ್ತು ಮೇಲೆ ನಿಷೇಧ ಹೇರಿತ್ತು. 2012ರ ಜೂನ್‌ನಿಂದ ನಿಷೇಧ ತೆಗೆದು ಹಾಕಲಾಗಿದೆ.

`ಕಡಿಮೆ ಖರ್ಚು ಕಡಿಮೆ ಉತ್ಪಾದನೆ~ ಡೈರಿ ನೀತಿಯನ್ನು ಭಾರತ ಅನುಸರಿಸುತ್ತಿರುವುದರಿಂದ ಇತರೆ ದೇಶಗಳಿಗೆ ಹೋಲಿಸಿದರೆ ಹಾಲಿನ ಉತ್ಪಾದನೆ  ಪ್ರಮಾಣ ಇಲ್ಲಿ ಕನಿಷ್ಠ ಮಟ್ಟದಲ್ಲಿದೆ.  ಆದರೂ, ಪ್ರಸಕ್ತ ವರ್ಷ ಬೆಣ್ಣೆ ಉತ್ಪಾದನೆ 45.30 ಲಕ್ಷ ಟನ್ ಆಗಬಹುದು. ಸದ್ಯ ಒಟ್ಟಾರೆ ಜಾಗತಿಕ ಕ್ಷೀರ ಉತ್ಪಾದನೆಗೆ ಭಾರತದ ಕೊಡುಗೆ ಶೇ 17ರಷ್ಟಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT