ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರಪಥದಲ್ಲಿ 5000 ಕೋಟಿ ಗ್ರಹಗಳು...

Last Updated 21 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

 ಲಂಡನ್ (ಪಿಟಿಐ): ಅಂತರಿಕ್ಷದಲ್ಲಿ ನಡೆದ ಪ್ರಪ್ರಥಮ ತಾರಾಗಣತಿಯು ನಮ್ಮ ಕ್ಷೀರಪಥದಲ್ಲಿ ಏನಿಲ್ಲವೆಂದರೂ 5000 ಕೋಟಿ ಗ್ರಹಗಳು ಇರಬಹುದೆಂದು ಅಂದಾಜಿಸಿದೆ.

ಈ ಪೈಕಿ 50 ಕೋಟಿ ಗ್ರಹಗಳು ಅತಿ ಉಷ್ಣತೆಯೂ ಇಲ್ಲದ, ಅತಿ ಶೀತಲವೂ ಅಲ್ಲದ, ಜೀವಿಗಳ ಅಸ್ತಿತ್ವ ಇರಬಹುದಾದ ಗೋಲ್ಡಿಲಾಕ್ಸ್ ವಲಯದಲ್ಲಿವೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಎರಡು ವರ್ಷಗಳ ಹಿಂದೆ 4400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಾಸಾ ಕೈಗೆತ್ತಿಕೊಂಡ  ಯೋಜನೆಯಡಿ ಈ ತಾರಾಗಣತಿ ನಡೆಯುತ್ತಿದ್ದು ಇದಕ್ಕಾಗಿ ಕೆಪ್ಲರ್ ದೂರದರ್ಶಕದ ನೆರವು ಪಡೆಯಲಾಗಿದೆ.

ರಾತ್ರಿ ವೇಳೆ ಗೋಚರಿಸುವ ಆಗಸದ ನಾಲ್ಕು ನೂರರಲ್ಲಿ ಒಂದು ಭಾಗವನ್ನು ಆಯ್ದುಕೊಂಡು ಅಧ್ಯಯನ ನಡೆಸಿ ಅದರ ಲೆಕ್ಕದ ಆಧಾರದಲ್ಲಿ ಕ್ಷೀರಪಥದಲ್ಲಿ ಇರಬಹುದಾದ ಗ್ರಹಗಳ ಸಂಖ್ಯೆಯನ್ನು ಊಹಿಸಲಾಗಿದೆ.

ಭೂಮಿ ಹಾಗೂ ತಾನು ಸುತ್ತುತ್ತಿರುವ ನಕ್ಷತ್ರದ ಮಧ್ಯೆ ಹಾದುಹೋಗುವ ಗ್ರಹಗಳನ್ನು ಕೆಪ್ಲರ್ ದೂರದರ್ಶಕ ಪತ್ತೆ ಹಚ್ಚುತ್ತದೆ.
ಬಾಹ್ಯಾಕಾಶದ ಪ್ರತಿ ಎರಡು ತಾರೆಗಳ ಪೈಕಿ ಒಂದು ತಾರೆ ಗ್ರಹವನ್ನು ಹೊಂದಿದ್ದರೆ, ಪ್ರತಿ 200 ನಕ್ಷತ್ರಗಳಲ್ಲಿ ಒಂದು ನಕ್ಷತ್ರ ಜೀವಪೋಷಕ ವಲಯದಲ್ಲಿ ಗ್ರಹವನ್ನು ಹೊಂದಿದೆ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಕೆಪ್ಲರ್ ಸೈನ್ಸ್ ಮುಖ್ಯಸ್ಥ ವಿಲಿಯಮ್ ಬೊರುಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT