ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಎಲ್ಲ ಪ್ರದೇಶಗಳ ಅಭಿವೃದ್ಧಿ

Last Updated 21 ಫೆಬ್ರುವರಿ 2011, 20:15 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಕ್ಷೇತ್ರದ ಎಲ್ಲ ಪ್ರದೇಶಗಳನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದು ಶಾಸಕ ಎಂ.ಸತೀಶ್‌ರೆಡ್ಡಿ ತಿಳಿಸಿದರು. ಕ್ಷೇತ್ರ ವ್ಯಾಪ್ತಿಯ ಬಿಳೇಕಹಳ್ಳಿ ವಾರ್ಡ್‌ನ ವಿಜಯಬ್ಯಾಂಕ್ ಕಾಲೋನಿ ಮತ್ತು ಮುಲ್ಕಿಸುಂದರ್‌ರಾಮ್‌ಶೆಟ್ಟಿ ನಗರದಲ್ಲಿ ಶುಕ್ರವಾರ ಡಾಂಬರೀಕರಣ-ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರುಮಾತನಾಡಿದರು.

ವಿಶೇಷ ಅನುದಾನ ಯೋಜನೆಯಡಿಯಲ್ಲಿ ರೂ 6.26 ಕೋಟಿ ವೆಚ್ಚದಲ್ಲಿ ಸುಮಾರು 7 ಕಿ.ಮೀ ನಷ್ಟು ರಸ್ತೆಯನ್ನು ಡಾಂಬರೀಕರಣ ಮಾಡಿ, ಪಾದಚಾರಿ ರಸ್ತೆ ನಿರ್ಮಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಪಾಲಿಕೆ ಸದಸ್ಯೆ ರೂಪಾ ರಮೇಶ್ ಮಾತನಾಡಿ, ವಾರ್ಡ್‌ನಲ್ಲಿನ ಎಲ್ಲಾ ರಸ್ತೆಗಳನ್ನು ಮುಂದಿನ ಮಳೆಗಾಲದ ವೇಳೆಗೆ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.

ಭೂ ಸೇನಾ ನಿಗಮದ ಸಹಾಯಕ ನಿರ್ದೇಶಕ ಶಿವಕುಮಾರ್, ಬಿಬಿಎಂಪಿ ಬೊಮ್ಮನಹಳ್ಳಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ್, ಸಹಾಯಕ ಎಂಜಿನಿಯರ್ ರಂಗನಾಥ್, ನಗರಸಭಾ ಮಾಜಿ ಸದಸ್ಯ ಯಲ್ಲಪ್ಪ, ಬಿಜೆಪಿ ಮುಖಂಡರಾದ ಬಿ.ವೈ.ರಮೇಶ್, ವಾರ್ಡ್ ಬಿಜೆಪಿ ಅಧ್ಯಕ್ಷ ಬಿ.ಟಿ.ಸುಬ್ರಮ್ಮಣಿ, ಮುಖಂಡರಾದ ಮುನಿನಾಗಪ್ಪ, ಮುಕುಂದ, ಮಂಜುನಾಥ್, ಕಾರ್ತಿಕ್ ಮತ್ತು ಸ್ಥಳೀಯ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಭುಜಂಗಶೆಟ್ಟಿ, ಉಪಾಧ್ಯಕ್ಷ ರಮಾಕಾಂತ್ ಶೆಟ್ಟಿ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT