ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖನಿಜ ವಿನಾಯಿತಿ ಅರ್ಜಿ ವಿಲೇವಾರಿಗೆ ಕೇಂದ್ರ ಸೂಚನೆ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿನ ಖನಿಜ ವಿನಾಯಿತಿ ಅರ್ಜಿಗಳ ವಿಲೇವಾರಿಗಳಲ್ಲಿನ ನಿಧಾನಗತಿಯಿಂದ ಬೇಸರಗೊಂಡಿರುವ ಕೇಂದ್ರ ಸರ್ಕಾರ, ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದೆ.

ಸದ್ಯ ವಿವಿಧ ರಾಜ್ಯಗಳಲ್ಲಿ 65,337 ಖನಿಜ ವಿನಾಯಿತಿ ಅರ್ಜಿಗಳು ವಿಲೇ ವಾರಿಯಾಗದೆ ಹಾಗೇ ಉಳಿದು­ಕೊಂಡಿವೆ ಎಂದು ಗಣಿ ಸಚಿವಾಲಯ ತಿಳಿಸಿದೆ.

ಖನಿಜ ವಿನಾಯಿತಿ ಅರ್ಜಿಗಳು ಭಾರಿ ಪ್ರಮಾಣದಲ್ಲಿ ಬಾಕಿ ಉಳಿದಿವೆ. ಇದು ಎಲ್ಲ ಖನಿಜ ಸಮೃದ್ಧಿ ರಾಜ್ಯಗಳಲ್ಲಿ ಸಾಮಾನ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ಈ ನಿಟ್ಟಿನಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ  ನಿಯಂತ್ರಣ ಕಾಯಿದೆಯಲ್ಲಿನ  ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಹೇಳಿದೆ.

ಈ ನಡುವೆ ಗಣಿ ಗುತ್ತಿಗೆಗೆ ಪರ ವಾನಗಿ ನೀಡುವುದು ಸಹ ಹಲವಾರು ಕಾರಣಗಳಿಂದ ನಿಧಾನವಾಗಿ ಸಾಗಿದೆ. ಹೊಸ ಗುತ್ತಿಗೆಗಳಿಗೆ ಪರವಾನಗಿ ನೀಡುವುದು ಅಕ್ರಮ ಗಣಿಗಾರಿಕೆಯಿಂದ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ಕಳೆದ ಹಣಕಾಸು ವರ್ಷದಲ್ಲಿ 20 ರಾಜ್ಯಗಳಲ್ಲಿ 99,000 ಅಕ್ರಮ ಗಣಿ ಪ್ರಕರಣಗಳು ವರದಿಯಾಗಿವೆ. 2011-12ರಲ್ಲಿ ಈ ಸಂಖ್ಯೆ 96,000 ಆಗಿದ್ದರೆ 2010-11 ರಲ್ಲಿ 78,000 ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT