ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆಗೆ ಪ್ರೈಡ್ ಆಫ್ ಇಂಡಿಯಾ ಪುರಸ್ಕಾರ

Last Updated 1 ಫೆಬ್ರುವರಿ 2012, 7:05 IST
ಅಕ್ಷರ ಗಾತ್ರ

ವಾಷಿಂಗ್ಟನ್, (ಪಿಟಿಐ): ಇಲ್ಲಿಗೆ ಭೇಟಿ ನೀಡಿರುವ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಲ್ಲಿನ ಅಮೆರಿಕದ ಭಾರತೀಯ ಸಮುದಾಯ, ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅವರ ಸಮಾಜ ಸೇವೆಯನ್ನು ಗುರುತಿಸಿ, ~ಪ್ರೈಡ್ ಆಫ್ ಇಂಡಿಯಾ~ ಪುರಸ್ಕಾರ ನೀಡಿ ಗೌರವಿಸಿದೆ. 

ಇಲ್ಲಿನ ಅಮೆರಿಕನ್ ಪೆಲೋಷಿಪ್ ಕೌನ್ಸಿಲ್ (ಐಎಎಫ್ ಸಿ) ಮತ್ತು ಇಂಡಿಯಾ ಅಸೋಸಿಯೇಷನ್ ಆಫ್ ನಾರ್ಥ್ ಟೆಕ್ಸಾಸ್  (ಐಎಎನ್ ಟಿ) ಸಂಘಟನೆಗಳ ಜಂಟಿ ಆಶ್ರಯದಲ್ಲಿ ವಾರಾಂತ್ಯದಲ್ಲಿ ಡೆಲ್ಲಾಸ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ ಅವರು, ಸಾಮಾಜಿಕ ಭದ್ರತೆ, ಉದ್ಯೋಗಾವಕಾಶ, ಗಣಿ ಸುರಕ್ಷತೆ ಮೊದಲಾದ ವಿಷಯಗಳ ಬಗ್ಗೆ ವಿವರಿಸಿ, ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು ತೀವ್ರಗತಿಯಲ್ಲಿದೆ ಎಂದು ಹೇಳಿದರು. ಮಕ್ಕಳ ಶಿಕ್ಷಣದ ಬಗೆಗಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಗ್ರಾಮೀಣ ಪ್ರದೇಶದಲ್ಲಿನ ಶೈಕ್ಷಣಿಕ ಅಭಿವೃದ್ದಿ ತಮ್ಮ ಪ್ರಾಥಮಿಕ ಆದ್ಯತೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಎಎನ್ ಟಿಯ ಅದ್ಯಕ್ಷ  ಕೆ.ಶ್ರೀಧರ್ ರೆಡ್ಡಿ ಅವರು, ~ಮಹಾನ್ ದೇಶಗಳು ತಮ್ಮ ಆರ್ಥಿಕ, ಸಾಂಸ್ಖೃತಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಂದ ಜಗತ್ತಿನಲ್ಲಿ ಪ್ರಭಾವ ಬೀರಿದ್ದನ್ನು ಇತಿಹಾಸ ಗುರುತಿಸಿದೆ. ಅದರಂತೆಯೇ ಭಾರತ ಮತ್ತು ಅಮೆರಿಕಗಳು ಅಂಥ ಮಹಾನ್ ದೇಶಗಳಿಗೆ ಉದಾಹರಣೆಯಾಗಿವೆ ಎಂದು~ ಹೇಳಿದರು.  

ಐಎಎಫ್ ಸಿಯ ಟಿ ಪ್ರಸಾದ್ ಅವರು ಮಾತನಾಡಿ, ನಿಷ್ಕಳಂಕವಾದ ರಾಜಕೀಯ ಹಾಗೂ ಸಾರ್ವಜನಿಕ ಜೀವನ ನಡೆಸಿರುವ ಖರ್ಗೆ ಅವರು, ಸಮರ್ಥ ಶಾಸಕ ಹಾಗೂ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT