ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ, ರೇಷ್ಮೆ ಸೀರೆ ಪ್ರದರ್ಶನ

Last Updated 6 ಏಪ್ರಿಲ್ 2013, 19:52 IST
ಅಕ್ಷರ ಗಾತ್ರ

ಕೆ.ಆರ್.ಪುರ: ವಿವಿಧ ರಾಜ್ಯಗಳ ನೇಕಾರರಿಂದ ಇಲ್ಲಿನ ಶುಭಮೇರು ಕಲ್ಯಾಣ ಮಂಟಪದಲ್ಲಿ  ಖಾದಿ ಮತ್ತು ರೇಷ್ಮೆ ಸೀರೆಗಳ ಪ್ರದರ್ಶನ ಶನಿವಾರ ಪ್ರಾರಂಭವಾಯಿತು. `ವೀವ್ಸ್' ಸಂಸ್ಥೆ ವತಿಯಿಂದ ನಡೆದ ಈ ಪ್ರದರ್ಶನದಲ್ಲಿ ಸುಮಾರು 35 ಮಳಿಗೆಗಳಲ್ಲಿ ಖಾದಿ, ಹತ್ತಿ, ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಯಿತು.

ರೂ.200 ದರದ ಹತ್ತಿಬಟ್ಟೆಯ ಸೀರೆಯಿಂದ ರೂ.3,500  ರೇಷ್ಮೆ ಸೀರೆ ಮಾರಾಟಕ್ಕಿದ್ದವು. ಚೂಡಿದಾರ್, ಬಗೆ ಬಗೆಯ ಡ್ರೆಸ್ ಮೆಟಿರಿಯಲ್ಸ್, ಕುರ್ತಾ, ಕಸೂತಿಯಿರುವ ಸೀರೆಗಳಿದ್ದವು. ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೀರೆಗಳನ್ನು ಸಿದ್ದಪಡಿಸಿದ್ದೇವೆ.

ನೇಕಾರರು ತಯಾರಿಸಿದ ಸೀರೆಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವುದರಿಂದ ರಿಯಾಯಿತಿ ಇರುತ್ತದೆ. ಈ ಸೀರೆಗಳನ್ನು ತಯಾರಿಸಲು ಕನಿಷ್ಠ ಎರಡೂವರೆ ತಿಂಗಳು ಬೇಕಾಗಬಹುದು ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

`ವೀವ್ಸ್' ವ್ಯವಸ್ಥಾಪಕ ಎ.ವಿ.ಲಕ್ಷ್ಮಿನಾರಾಯಣ ಇತರರು ಉಪಸ್ಥಿತರಿದ್ದರು. ಬೆಳಿಗ್ಗೆ 11 ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT