ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ ತಾಲ್ಲೂಕಿನ ಶಾಲೆಗಳಿಗೆ ಇಂದು ರಜೆ

ಕಣಕುಂಬಿಯಲ್ಲಿ 15.4 ಸೆಂ.ಮೀ. ಮಳೆ
Last Updated 2 ಆಗಸ್ಟ್ 2013, 9:54 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಎರಡು ದಿನಗಳಿಂದ ಖಾನಾಪುರ ತಾಲ್ಲೂಕಿನಲ್ಲಿ ಭಾರಿ ಪ್ರಮಾ ಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶುಕ್ರವಾರ (ಆಗಸ್ಟ್ 2) ರಜೆ ಘೋಷಿಸ ಲಾಗಿದೆ.

ಮಲಪ್ರಭಾ ನದಿಯ ಉಗಮ ಸ್ಥಾನವಾದ ಕಣಕುಂಬಿ ಪ್ರದೇಶದಲ್ಲಿ 154 ಮಿ.ಮೀ. ಮಳೆಯಾಗಿದ್ದು, ಸವದತ್ತಿಯ ನವಿಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯಕ್ಕೆ ಗುರುವಾರ 11,610 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಖಾನಾಪುರ ತಾಲ್ಲೂಕಿನಲ್ಲಿ ಗುರು ವಾರ ದಿನವಿಡಿ ಉತ್ತಮವಾಗಿ ಮಳೆ ಸುರಿಯುತ್ತಿದೆ. ಶುಕ್ರವಾರವೂ ಮಳೆಯಾ ಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಖಾನಾಪುರ ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಿದ್ದಾರೆ.

ಮಲಪ್ರಭಾ ನದಿಯ ನೀರಿನ ಮಟ್ಟದ ಗಣನೀಯವಾಗಿ ಹೆಚ್ಚಿದ್ದು, ಪಟ್ಟಣದ ಸಮೀಪದ ಹಳೆ ಸೇತುವೆ ಮುಳುಗಡೆ ಯಾಗಿದೆ. ಅಲಾತ್ರಿ ಹಳ್ಳಿ ತುಂಬಿ ಹರಿದಿ ರುವುದರಿಂದ ಸಿಂಧನೂರು- ಹೆಮ್ಮಡಗಾ ರಾಜ್ಯ ಹೆದ್ದಾರಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಮಲಪ್ರಭಾ ನದಿ ನೀರು ಸೇತುವೆ ಮೇಲೆ ಹರಿದಿ ರುವುದರಿಂದ ದೇವಾಚಿಹಟ್ಟಿ- ತೊರಾಳಿ ನಡುವಿನ ಸಂಪರ್ಕ ಕಡಿತ ಗೊಂಡಿದೆ.

ಕುಂಬಾರ ಹಳ್ಳ ಉಕ್ಕಿ ಹರಿದಿದ್ದರಿಂದ ಖಾನಾಪುರ- ಅಸೋಗ ನಡುವೆ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ ತಾಲ್ಲೂಕಿನ ಪೀರನವಾಡಿ ಬಳಿ ರಸ್ತೆಯ ಮೇಲೆ ನೀರು ತುಂಬಿ ಹರಿದಿದ್ದರಿಂದ ಕೆಲಕಾಲ ಬೆಳಗಾವಿ- ಖಾನಾಪುರ ಸಂಪರ್ಕ ಸ್ಥಗಿತಗೊಂಡಿತ್ತು. ದಿನವಿಡಿ ಮಳೆ ಸುರಿಯುತ್ತಿದ್ದರಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ.

35 ಮನೆ ಕುಸಿತ: ಅತಿವೃಷ್ಟಿ ಯಿಂದಾಗಿ ಬೆಳಗಾವಿ ತಾಲ್ಲೂಕಿನಲ್ಲಿ 14 ಮನೆ, ಹುಕ್ಕೇರಿ ತಾಲ್ಲೂಕಿನಲ್ಲಿ 20 ಮನೆ, ರಾಯಬಾಗ ತಾಲ್ಲೂಕಿನಲ್ಲಿ 1 ಮನೆ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಒಟ್ಟು 35 ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಅಂದಾಜು 3.92 ಲಕ್ಷ ಹಾನಿ ಸಂಭವಿಸಿದೆ.

ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆ ಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕಣ ಕುಂಬಿಯಲ್ಲಿ 154 ಮಿ.ಮೀ, ಖಾನಾ ಪುರ ಪಟ್ಟಣದಲ್ಲಿ 60.6 ಮಿ.ಮೀ, ಲೋಂಡಾದಲ್ಲಿ 104.6 ಮಿ.ಮೀ, ಗುಂಜಿಯಲ್ಲಿ 100.2 ಮಿ.ಮೀ, ನಾಗರ ಗಾಳಿ 101.2 ಮಿ.ಮೀ, ಜಾಂಬೋಟಿ 63.4 ಮಿ.ಮೀ, ಬೀಡಿ 45 ಮಿ.ಮೀ, ಅಸೋಗಾದಲ್ಲಿ 46.8 ಮಿ.ಮೀ, ಕಕ್ಕೇರಿ 31.4 ಮಿ.ಮೀ. ಮಳೆ ವರದಿಯಾಗಿದೆ.

ಬೆಳಗಾವಿ ತಾಲ್ಲೂಕಿನಲ್ಲಿ ಬೆಳಿಗ್ಗೆ ಯಿಂದ ಮಳೆಯು ಬಿಟ್ಟು ಬಿಟ್ಟು ಸುರಿ ಯತೊಡಗಿತ್ತು. ಆಗಾಗ ಬಿರುಸಿನಿಂದ ಮಳೆ ಸುರಿದಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಪ್ರಯಾಸ ಪಡುವಂತಾಗಿತ್ತು.

ಬೆಳಗಾವಿ ನಗರದಲ್ಲಿ 44 ಮಿ.ಮೀ, ಸಂತಿಬಸ್ತವಾಡ 53.7 ಮಿ.ಮೀ, ದೇಸೂ ರಿನಲ್ಲಿ 45.8 ಮಿ.ಮೀ, ಉಚಗಾಂವದಲ್ಲಿ 34 ಮಿ.ಮೀ. ಮಳೆಯಾಗಿದೆ. ಬೈಲ ಹೊಂಗಲದಲ್ಲಿ 19.8 ಮಿ.ಮೀ, ಚಿಕ್ಕೋಡಿಯಲ್ಲಿ 5.7 ಮಿ.ಮೀ, ಗೋಕಾ ಕದಲ್ಲಿ 2.5 ಮಿ.ಮೀ, ಹುಕ್ಕೇರಿ 2.6 ಮಿ.ಮೀ, ರಾಯಬಾಗ 1.2 ಮಿ.ಮೀ, ರಾಮದುರ್ಗ 1 ಮಿ.ಮೀ, ಸವದತ್ತಿ ಯಲ್ಲಿ 9 ಮಿ.ಮೀ. ಮಳೆ ದಾಖಲಾಗಿದೆ.

ಚಿಕ್ಕೋಡಿ ವರದಿ
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದೆರೆಡು ದಿನಗಳಿಂದ ಮತ್ತೇ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಆದರೂ, ಮಹಾರಾಷ್ಟ್ರದಿಂದ ಕಡಿವೆು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ತಾಲ್ಲೂಕಿನ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಸುಮಾರು 3 ಅಡಿಯಷ್ಟು ಇಳಿಕೆ ಕಂಡುಬಂದಿದೆ.

ದೂಧಗಂಗಾ ನದಿ ಹರಿವಿನಲ್ಲೂ ಇಳಿಕೆಯಾಗಿರುವ ಪರಿಣಾಮವಾಗಿ ಯಕ್ಸಂಬಾ-ದಾನವಾಡ ಗ್ರಾಮಗಳ ಮಧ್ಯೆದ ಸೇತುವೆ ಮೇಲೆ ಹರಿಯುತ್ತಿದ್ದ ನೀರು ಕೊಂಚ ಕಡಿಮೆಯಾಗಿದ್ದು, ವಾಹನ ಮತ್ತು ಜನಸಂಚಾರ ಆರಂಭ ಗೊಂಡಿದೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ ಹರಿದು ಬುಧವಾರ ಹರಿದು ಬರುತ್ತಿದ್ದ ಒಟ್ಟು  1.78 ಲಕ್ಷ ಕ್ಯೂಸೆಕ್ ನೀರಿನ ಪ್ರಮಾಣ 1,69 ಲಕ್ಷ ಕ್ಯೂಸೆಕ್‌ಗೆ ತಗ್ಗಿದೆ.

ಮಹಾ ರಾಷ್ಟ್ರದ ಕೊಯ್ನಾ ಜಲಾ ಶಯದಿಂದ 24,788 ಕ್ಯೂಸೆಕ್, ದೂಧಗಂಗಾ ದಿಂದ 27,196 ಕ್ಯೂಸೆಕ್ ಹಾಗೂ ರಾಜಾಪುರದಿಂದ ಹರಿದು ಬರುವ  1,42,762 ಕ್ಯೂಸೆಕ್ ಸೇರಿ ದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,69,958 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾ ಶಯದಿಂದ ಬುಧವಾರ 12 ಕ್ರಸ್ಟ್‌ಗೇಟ್‌ಗಳ ಮೂಲಕ 2,18,700 ಕ್ಯೂಸಕ್ ನೀರನ್ನು ಹೊರಬಿಡಲಾ ಗುತ್ತಿದೆ.

ತಾಲ್ಲೂಕಿನಲ್ಲಿ ವೇದಗಂಗಾ ನದಿಯ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ದೂಧಗಂಗಾ ನದಿಯ ಸದಲಗಾ-ಬೋರಗಾಂವ, ಕಾರದಗಾ-ಭೋಜ, ಮಲಿಕವಾಡ- ದತ್ತವಾಡ ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಇನ್ನೂ ಜಲಾವೃತವಾ ಗಿಯೇ ಇವೆ.

ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ದಲ್ಲಿ ಗುರುವಾರವೂ ಏರಿಕೆ ದಾಖಲಾ ಗಿದೆ. ಕೊಯ್ನಾದಲ್ಲಿ 148ಮಿ.ಮೀ, ನವಜಾ: 180ಮಿ.ಮೀ, ಮಹಾ ಬಳೇಶ್ವರ: 199ಮಿ.ಮೀ, ವಾರಣಾ: 103ಮಿ.ಮೀ, ಮತ್ತು ಕೊಲ್ಹಾಪುರ: 16ಮಿ.ಮೀ. ತಾಲ್ಲೂಕಿನ ್ಲಚಿಕ್ಕೋಡಿ ಯಲ್ಲಿ 7.4ಮಿ.ಮೀ,  ನಾಗರ ಮುನ್ನೋಳಿ: 7.4ಮಿ.ಮೀ, ಸದಲಗಾ: 7.2 ಮಿ.ಮೀ, ಗಳತಗಾ: 8.0ಮಿ.ಮೀ,  ನಿಪ್ಪಾಣಿ: 23.2ಮಿ.ಮೀ, ಜೋಡಟ್ಟಿ: 2.4 ಮಿ.ಮೀ ಮತ್ತು ಸೌಂದಲಗಾ: 5.2ಮಿ.ಮೀ ಮಳೆ ದಾಖಲಾಗಿದೆ.

ಮಳೆ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಸೇತುವೆಗಳ ಗುರುವಾರದ ನೀರಿನ ಮಟ್ಟ: ಕಲ್ಲೋಳ: 533.10ಮೀ (ಅಪಾಯದ ಮಟ್ಟ: 538.00), ಅಂಕಲಿ: 532.50(ಅಪಾಯದ ಮಟ್ಟ: 537.00ಮಿ), ಸದಲಗಾ: 535.500 (ಅಪಾಯದ ಮಟ್ಟ: 538.00) ಕುಡಚಿ: 530.25 (ಅಪಾಯದ ಮಟ್ಟ529.00).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT