ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವಿವಿಗಳ ಸ್ಥಾಪನೆಗೆ ವಿರೋಧ

Last Updated 8 ಡಿಸೆಂಬರ್ 2012, 9:25 IST
ಅಕ್ಷರ ಗಾತ್ರ

ಶಿಗ್ಗಾವಿ: ರಾಜ್ಯದಲ್ಲಿ ಹೊಸದಾಗಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪಿಸಲು ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ಶಿಕ್ಷಣ ವಿರೋಧಿ ನೀತಿ ವಿರೋಧಿಸಿ ಭಾರತ ವಿದ್ಯಾರ್ಥಿ ಫೇಡರೇಷನ್ (ಎಸ್.ಎಫ್.ಐ)  ಪಟ್ಟಣದಲ್ಲಿ  ಸರ್ಕಾರದ ಪ್ರತಿಕೃತಿ ದಹಸಿ ಪ್ರಹಿಸಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಈಗಾಗಲೇ 4 ಖಾಸಗಿ ವಿಶ್ವ ವಿದ್ಯಾಲಯಗಳನ್ನು (ಅಜಿಂ ಪ್ರೇಮ್‌ಜಿ, ಅಲೆಯನ್ಸ್) ಪ್ರಾರಂಭಿಸಲು ಅನುಮತಿ ನೀಡಿರುವ ಬೆನ್ನಲ್ಲೇ  ಮತ್ತೆ 12 ಖಾಸಗಿ ವಿ.ವಿ.ಗಳಿಗೆ ಅನುಮತಿ ನೀಡಲು ಹೊರಟಿರುವುದು ಉನ್ನತ ಶಿಕ್ಷಣದ ಖಾಸಗಿಕರಣದ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುವ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯದಲ್ಲಿ ಅಸ್ಥಿತ್ವದಲಿರ‌್ಲುವ ಸರ್ಕಾರಿ ವಿವಿಗಳು ಗಂಭೀರ ಸಮಸ್ಯೆಗಳಿಂದ ನರಳುತ್ತಿವೆ. ಮೂಲಸೌಕರ್ಯಗಳ ಕೊರತೆ, ಭ್ರಷ್ಟಾಚಾರ, ಅನುದಾನದ ಕೊರತೆ, ಪರೀಕ್ಷೆಯಲ್ಲಿ ಅವ್ಯವಹಾರಗಳು, ಬೋಧಕ ಸಿಬ್ಬಂದಿಗಳ ಕೊರತೆ, ಜಾತಿ ರಾಜಕಾರಣ ಮತ್ತು ಹಾಸ್ಟೆಲ್ ಸೌಲಭ್ಯದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ವಿಶ್ವ ವಿದ್ಯಾಲಯಗಳನ್ನು ಬಲಪಡಿಸಿ ಎಲ್ಲರಿಗೂ ಉನ್ನತ ಶಿಕ್ಷಣವನ್ನು ನೀಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ ಖಾಸಗಿಯವರಿಗೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ನೀಡಲು ಹೊರಟಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯ ಸರ್ಕಾರ ಈಗ ಅನುಮತಿ ನೀಡಲು ನಿರ್ಧರಿಸಿರುವ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಡೀಮ್ಡ (ಸ್ವಾಯತ್ತ) ಸ್ಥಾನಮಾನ ಹೊಂದಿದ್ದು, ಅನೇಕ ಅಕ್ರಮ ದಾರಿಗಳಿಂದ ಹಣ ಸಂಪಾದನೆ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣ ನೀಡುವ ಮೂಲ ಉದ್ದೆೀಶಕ್ಕಿಂತ   ಕಣ್ಣಿಗೆ ಮಣ್ಣೆರೆಚಿ ಹಣ ಮಾಡುವ ಉದ್ದೆೀಶವನ್ನೇ ಪ್ರಧಾನವಾಗಿಟ್ಟುಕೊಂಡಿವೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ವಿವಿಗಳನ್ನು ಪ್ರಾರಂಭಿಸಲು ಅವಕಾಶ ನೀಡಬಾರದು. ಬದಲಾಗಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈಬಿಟ್ಟು ಸರ್ಕಾರಿ ವಿವಿಗಳನ್ನು ಬಲಪಡಿಸಬೇ ಎಂದು   ಆಗ್ರಹಿಸಿದರು.

ರಾಜ್ಯದಲ್ಲಿ ಯಾವುದೇ ಹೊಸ ಖಾಸಗಿ ವಿವಿ.ಗಳನ್ನು ಪ್ರಾರಂಭಿಸಲು ಅನುಮತಿ ನೀಡಬಾರದು. ಈಗ   ಪ್ರಾರಂಭಿಸಲಾಗಿರುವ 4 ಖಾಸಗಿ ವಿವಿಗಳನ್ನು ಸರ್ಕಾರ ತನ್ನ ಒಡೆತನಕ್ಕೆ ತೆಗೆದುಕೊಳ್ಳಬೇಕು. ರಾಜ್ಯದಲ್ಲಿರುವ ಸರ್ಕಾರಿ ವಿವಿಗಳಿಗೆ ಹಾಗೂ ಸ್ನಾತ್ತಕೋತ್ತರ ಕೇಂದ್ರಗಳಿಗೆ  ಎಲ್ಲಾ ರೀತಿಯ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ವಿವಿಗಳಿಗೆ ಅನುದಾನ ಹೆಚ್ಚಿಸಿ ಸಕಾಲಕ್ಕೆ ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.    
                                       
ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಸ ಮಾದರ, ಕಾರ್ಯಕರ್ರಾದ ಮಂಜು ಮಾಳಾಪುರ, ಎನ್.ಎಂ. ಹುಲಗೂರ, ಮಾಬುಷಾ ವಡ್ಡರ, ಬಸುರಾಜ ವಡ್ಡರ, ಯಲ್ಲಪ್ಪ ಕೊರವರ, ವಿಜಯ ಈಳಗೇರ, ಅಜಯ ಮಾಳಗೆ, ವಿಕ್ರಮ್ ಗೌಳಿ ಕೆಂಡದಮಠ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT