ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿಯಿಂದ 46,000 ಮೆ.ವಾ ವಿದ್ಯುತ್‌ ನಿರೀಕ್ಷೆ

ಖರೀದಿ ಒಪ್ಪಂದ: ರಾಜ್ಯಗಳಿಗೆ ಸಿಂಧಿಯಾ ಕಿವಿಮಾತು
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಮುಂದಿನ ಐದು ವರ್ಷಗಳಲ್ಲಿ ಖಾಸಗಿ ಕ್ಷೇತ್ರದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆಗುವ ನಿರೀಕ್ಷೆ ಇದ್ದು, ವಿದು್ಯತ್‌ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಒಪ್ಪಂದಗಳನ್ನೇ ಮಾಡಿಕೊಂಡಿಲ್ಲ ಎಂದು ಕೇಂದ್ರ ಇಂಧನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

2017–22ನೇ ಸಾಲಿನ 13ನೇ ಪಂಚವಾರ್ಷಿಕ ಯೋಜನೆಯಲ್ಲಿ ಖಾಸಗಿ ಕ್ಷೇತ್ರದಿಂದಲೇ ಒಟ್ಟು 46 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಆಗುವ ಅಂದಾಜಿದೆ. ಇದರಲ್ಲಿ 25 ಸಾವಿರ ಮೆಗಾವಾಟ್‌ ಖರೀದಿಗೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಇನ್ನಷ್ಟೇ ಒಪ್ಪಂದಗಳು ಆಗಬೇಕಿದೆ ಎಂದು ಇಲ್ಲಿ ಹೇಳಿದರು.

ವಿವಿಧ ರಾಜ್ಯಗಳ ಇಂಧನ ಖಾತೆ ಸಚಿವರ ಜತೆ ಮಂಗಳವಾರ ಸಭೆ ನಡೆಸಿ ವಿದ್ಯುತ್‌ ಕೊರತೆ, ಗ್ರಾಮೀಣ ವಿದ್ಯುದೀಕರಣ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿದ್ಯುತ್‌ ಉತ್ಪಾದಿಸುವ ಕಂಪೆನಿಗಳು ಮುಂಚಿತವಾಗಿಯೇ ಖರೀದಿದಾರರ (ರಾಜ್ಯಗಳ) ಜತೆ ಒಪ್ಪಂದ ಮಾಡಿಕೊಳ್ಳಬೇಕಾದ್ದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅನಿಲ ಆಧಾರಿತ ವಿದ್ಯುತ್‌ ಉತ್ಪಾದನೆ ವಿಭಾಗದ ಘಟಕಗಳಲ್ಲಿ 19 ಸಾವಿರ ಮೆಗಾವಾಟ್‌ನಷ್ಟು  ಶೇ 24ರಷ್ಟು ಪ್ಲಾಂಟ್‌ ಲೋಡ್ ಫ್ಯಾಕ್ಟರ್ (ಪಿಎಲ್‌ಎಫ್‌)ನಲ್ಲಿ ಕೆಲಸ ನಿರ್ವಹಿ ಸುತ್ತಿವೆ. ಅನಿಲ ಸರಬರಾಜು ಸಮಸ್ಯೆ ಕಾರಣ ಎಂಟು ಸಾವಿರ ಮೆಗಾವಾಟ್‌ ಉತ್ಪಾದನೆ ಸ್ಥಗಿತ ಗೊಂಡಿದೆ. ಮುಂದಿನ ಮೂರು ವರ್ಷ ಗಳಲ್ಲಿ ದಿನಕ್ಕೆ 1.20 ಕೋಟಿ ಸ್ಟಾಂಡರ್ಡ್‌ ಘನ ಮೀಟರ್‌ (ಎಂಎಂ ಎಸ್‌ಸಿ ಎಂಡಿ)ಗಳಷ್ಟು ಲೆಕ್ಕದಲ್ಲಿ ನೈಸರ್ಗಿಕ ಅನಿಲವನ್ನು ವಿದ್ಯುತ್‌ ಉತ್ಪಾದನಾ ಕ್ಷೇತ್ರಕ್ಕೆ ಒದಗಿಸಲಾಗುವುದು ಎಂದರು.

ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆಯನ್ನು 27 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದ್ದು, 9 ರಾಜ್ಯಗಳ ಸಾಧನೆ ಅತ್ಯುತ್ತಮವಾಗಿದೆ. 9 ರಾಜ್ಯಗಳಲ್ಲಿನ ಯೋಜನೆ ಜಾರಿ ಸಮಾಧಾನಕರವಾಗಿದೆ, ಉಳಿದ 9 ರಾಜ್ಯಗಳಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT