ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುರ್ಷಿದ್ ಹೇಳಿಕೆ ವಿವಾದ: ಪ್ರಧಾನಿ ಹೇಳಿಕೆ ನಂತರವೇ ತೀರ್ಮಾನ?

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಾದಾತ್ಮಕ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಂಗಳವಾರ ಚುನಾವಣಾ ಆಯೋಗ ತಿಳಿಸಿದೆ.

ಆಯೋಗದ ಈ ಹೇಳಿಕೆ ನಂತರ, ತಮ್ಮ ವಿವಾದಿತ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ `ಅದೊಂದು ಮುಗಿದ ಅಧ್ಯಾಯ~ ಎಂದು ಖುರ್ಷಿದ್ ಹೇಳಿದ್ದಾರೆ.

ಈ ಹೇಳಿಕೆಯ ಬಗ್ಗೆ ಪ್ರಧಾನಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲು ಆಯೋಗ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಕಾಲದಲ್ಲಿ ನಿರ್ಧಾರ: `ಆಯೋಗವು ಇತರ ಪ್ರಮುಖ ವಿಷಯಗಳಲ್ಲಿ ಕಾರ್ಯನಿರತವಾಗಿದೆ. ಖುರ್ಷಿದ್ ಪತ್ರದ ಕುರಿತು ಸಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ~ ಎಂದು ಮುಖ್ಯ ಚುನಾ ವಣಾ  ಆಯುಕ್ತರಾದ ಎಸ್.ವೈ.ಖುರೇಶಿ ಅವರುಹೇಳಿದ್ದಾರೆ.

ಸೋಮವಾರ ತಡ ರಾತ್ರಿ ಆಯೋಗಕ್ಕೆ ಬರೆದ ಪತ್ರದಲ್ಲಿ ಖುರ್ಷಿದ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. `ಚುನಾವಣಾ ಆಯೋಗದ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ. ಇನ್ನು ಮುಂದೆ ಇಂಥ ಸನ್ನಿವೇಶ ನಿರ್ಮಾಣವಾಗದಂತೆ ನೋಡಿಕೊಳ್ಳುತ್ತೇನೆ~ ಎಂದು ತಿಳಿಸಿದ್ದರು.

`ಇದು ನಿಜಕ್ಕೂ ದುರದೃಷ್ಟಕರ. ಹೇಳಿಕೆಗಾಗಿ ನಾನು ವಿಷಾದಿಸುತ್ತೇನೆ. ಕಾನೂನು ಹಾಗೂ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವುದು ನನ್ನ ಉದ್ದೇಶವಲ್ಲ. ಆಯೋಗ ತೆಗೆದುಕೊಂಡ ಹಾಗೂ ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಗೌರವಿಸುತ್ತೇನೆ~ ಎಂದು ಅವರು ಹೇಳಿದ್ದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವಂಥ ವ್ಯಕ್ತಿಗಳು ಅದಕ್ಕೆ ತಕ್ಕುದಾಗಿ ಮಾತನಾಡಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್, ಖುರ್ಷಿದ್ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿತ್ತು.

`ಮುಸ್ಲಿಮರಲ್ಲಿ ಹೆಚ್ಚು ಹಿಂದುಳಿದಿರುವ ಉತ್ತರ ಪ್ರದೇಶದ ಪಸಮಂದ ಸಮುದಾಯದವರಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದೇನೆ. ನನ್ನ ಜೀವ ಇರುವವರೆಗೆ ಹಿಂದುಳಿದ ಮುಸ್ಲಿಂ ಸಮುದಾಯದ ಪರವಾಗಿ ಹೋರಾಡುತ್ತೇನೆ. ಚುನಾವಣಾ ಆಯೋಗ ಬೇಕಾದರೆ ನನ್ನನ್ನು ನೇಣಿಗೆ ಹಾಕಲಿ~ ಎಂದು ಖುರ್ಷಿದ್ ಚುನಾವಣಾ ರ‌್ಯಾಲಿಯಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT