ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ತಮಿಳು ಚಿತ್ರ ನಟಿ ಎಸ್.ಎನ್. ಲಕ್ಷ್ಮಿ ನಿಧನ

Last Updated 20 ಫೆಬ್ರುವರಿ 2012, 12:15 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಬಹುತೇಕ ಚಿತ್ರಗಳಲ್ಲಿ ~ತಾಯಿ~ಯ ಪಾತ್ರ ವಹಿಸಿದ್ದ ಖ್ಯಾತ ತಮಿಳು ಚಿತ್ರ ನಟಿ ಎಸ್.ಎನ್. ಲಕ್ಷ್ಮಿ ಕಳೆದ ರಾತ್ರಿ (ಭಾನುವಾರ ರಾತ್ರಿ) ಹೃದಯಾಘಾತದ ಪರಿಣಾಮವಾಗಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳ ಹಿಂದೆ ಲಕ್ಷ್ಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ನಸುಕಿನ ವೇಳೆ 1 ಗಂಟೆಗೆ ಅವರು ಅಸು ನೀಗಿದರು. ಅವರ ಪಾರ್ಥಿವ ಶರೀರವನ್ನು ಇಲ್ಲಿನ ಸಾಲಿಗ್ರಾಮದಲ್ಲಿನ ಅವರ ನಿವಾಸಕ್ಕೆ ತರಲಾಯಿತು.

ವಿರುಧನಗರ ಜಿಲ್ಲೆಯಲ್ಲಿನ ಹುಟ್ಟೂರಿನಲ್ಲಿ ಲಕ್ಷ್ಮಿ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ಲಕ್ಷ್ಮಿ ಅವರು ~ಮೈಕೆಲ್ ಮದನ ಕಾಮರಾಜ್~, ~ಮಹಾನದಿ~, ~ಕಾಧಲ ಕಾಧಲ~ ಚಿತ್ರಗಳಲ್ಲಿನ ಪಾತ್ರಗಳಿಂದ ಖ್ಯಾತರಾಗಿದ್ದರು. ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ರಜನೀಕಾಂತ್ ಮತ್ತು ಕಮಲ ಹಾಸನ್ ಮತ್ತಿತರ ಖ್ಯಾತ ನಟರೊಂದಿಗೆ ಅವರು ನಟಿಸಿದ್ದರು.

ರಾಜ್ಯ ಸರ್ಕಾರದ ಪ್ರತಿಷ್ಠಿತ  ~ಕಲೈಮಾಮನಿ~, ~ಕಲೈಸೆಲ್ವಂ~ ಮತ್ತಿತರ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಲಕ್ಷ್ಮಿ 1500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಲ್ಲದೆ, 6000ಕ್ಕೂ ಹೆಚ್ಚು ನಾಟಕಗಳಲ್ಲೂ ನಟಿಸಿದ್ದರು.

ಲಕ್ಷ್ಮಿ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂಬುದಾಗಿ ಮುಖ್ಯಮಂತ್ರಿ ಜಯಲಲಿತಾ ಶೋಕ ವ್ಯಕ್ತ ಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT