ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಂಬಿಕಾ ಮುಕ್ತಿ ಕ್ಷೇತ್ರದ ಸ್ಮಾರಕ ಲೋಕಾರ್ಪಣೆ

Last Updated 15 ಜನವರಿ 2012, 10:20 IST
ಅಕ್ಷರ ಗಾತ್ರ

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ನದಿ ತೀರದಲ್ಲಿ ನಿರ್ಮಿಸಿರುವ ಜಗಜ್ಯೋತಿ ಬಸವೇಶ್ವರರ ಪತ್ನಿ ಗಂಗಾಂಬಿಕಾ ಮುಕ್ತಿ ಕ್ಷೇತ್ರದ ಸುಂದರ ಸ್ಮಾರಕ ಭವನ ಶನಿವಾರ ಲೋಕಾರ್ಪಣೆಗೊಂಡಿತು.

ಗಂಗಾಂಬಿಕಾ ಐಕ್ಯವಾದ ಐತಿಹಾಸಿಕ ಸ್ಥಳವನ್ನು ರಾಜ್ಯ ಸರ್ಕಾರವು 5.20 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದೆ. ಕೂಡಲ ಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪದ ಮಾದರಿಯಲ್ಲಿ ನಿರ್ಮಿಸಿ ರುವ ಈ ಸ್ಮಾರಕ ಭವನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿರುವ ಗಂಗಾಂಬಿಕಾ ಸ್ಮಾರಕದ ಉದ್ಘಾಟನೆಗೆ ಮುನ್ನ ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರನ್ನು ಸ್ವಾಗತಿಸಿ ದರು. ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು.

ಸ್ಮಾರಕ ಭವನವನ್ನು ಉದ್ಘಾಟಿಸಿದ ಬಳಿಕ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸೀಮಿಮಠದ ಫಾಲಾಕ್ಷ ದೇವರು, ಸಂಸದ ಸುರೇಶ ಅಂಗಡಿ, ಶಾಸಕ ಸುರೇಶ ಮಾರಿಹಾಳ ಸೇರಿದಂತೆ ಹಲವು ಗಣ್ಯರು ಗಂಗಾಂಬಿಕಾ ಸಮಾಧಿಯ ದರ್ಶನ ಪಡೆದರು.

ಬಳಿಕ ನಡೆದ ಸಾಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, “ಬಸವಣ್ಣನ ಪತ್ನಿ ಗಂಗಾಂಬಿಕಾ ನೀಡಿದ ಕೊಡುಗೆ ಇಡೀ ಮಹಿಳಾ ಕುಲಕ್ಕೇ ಮಾದರಿಯಾಗಿದೆ. ಬಸವಣ್ಣನವರು 9 ಶತಮಾನಗಳ ಹಿಂದೆ ಕಲ್ಯಾಣ ಕ್ರಾಂತಿಯ ಮೂಲಕ ಮಹಿಳಾ ಸಮಾನ ತೆಗಾಗಿ ಹೋರಾಟ ನಡೆಸಿರುವುದರ ಫಲವಾಗಿಯೇ ಇಂದು ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಲಭಿಸಿದ್ದು, ಮುಂಬರುವ ದಿನಗಳಲ್ಲಿ ಸಂಸತ್‌ನಲ್ಲಿ ಸಮಾನ ಅವಕಾಶ ಲಭಿಸಲಿದೆ” ಎಂದು ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT