ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧಕ ರಹಿತ ಸಕ್ಕರೆ

Last Updated 10 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ನರಗುಂದ: ‘ಮರಾಠಾ ಸಮುದಾಯದಲ್ಲಿ ಶಿಕ್ಷಣ, ಕ್ರೀಯಾಶೀಲತೆ ಸಂಘಟನಾ ಮನೋಭಾವ ಜಾಗೃತಗೊಂಡಾಗ ಮಾತ್ರ ಪ್ರಗತಿ ಸಾಧ್ಯವಿರುವುದರಿಂದ ಎಲ್ಲರೂ ಸಂಘಟಿತರಾಗುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಜ್ಯ ಘಟಕ ಅಧ್ಯಕ್ಷ ವಿ.ಎ. ರಾಣೋಜಿರಾವ್  ಸಲಹೆ ನೀಡಿದರು. ಪಟ್ಟಣದ ಅಂಭಾಭವಾನಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ನ ಜಿಲ್ಲಾಘಟಕದ ಸಭೆಯಲ್ಲಿ ಅವರು ಮಾತನಾಡಿದರು.

‘ಮರಾಠ ಜನಾಂಗವನ್ನು 2ಎಗೆ ಸೇರಿಸುವುದು ಹಾಗೂ ಶಿವಾಜಿ ಜಯಂತಿಗೆ ಸರಕಾರಿ ರಜೆ ಘೋಷಣೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಚರ್ಚಿಸಲಾಗಿದೆ. ಆದ್ದರಿಂದ ಮರಾಠ ಸಮುದಾಯದವರು ಒಗ್ಗಟ್ಟು ಪ್ರದರ್ಶಿಸುವುದು ಅವಶ್ಯವಾಗಿದೆ’ ಎಂದರು.ಪರಿಷತ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಾಸ್ಟೇಲ್ ಸೌಲಭ್ಯ, ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ಸೌಲಭ್ಯ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ  ರಾಜ್ಯಾದ್ಯಾಂತ ಕಾಲೇಜು, ಹಾಸ್ಟೇಲ್ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಂ,ಆರ್.ಕಾಳೆ ಮಾತನಾಡಿ, ‘ಜಿಲ್ಲೆಯಲ್ಲಿ ಮರಾಠ ಸಮುದಾಯವನ್ನು ಸಂಘಟಿಸುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ. ಹಿಂದುಳಿದ ಹಾಗೂ ಅನಕ್ಷರಸ್ಥರ ಉನ್ನತಿಗೆ ಎಲ್ಲರೂ ಕೈಜೋಡಿಸಬೇಕು’ ಎಂದರು. ಸಾನ್ನಿಧ್ಯ ವಹಿಸಿದ್ದ  ಶಿವಳ್ಳಿಯ ಬ್ರಹ್ಮಾನಂದ ಸ್ವಾಮೀಜಿ, ಸಿದ್ದು ದಿವಾನ, ಕೆಕೆಎಂಪಿ ಕಾರ್ಯದರ್ಶಿ ವಿ.ಬಿ.ಎನ್.ಶಿಂಧೆ ರಾಜು ರೊಖಡೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಪಟ್ಟಣದ ಉಮೇಶ ಕುಡೇನವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ  ರಾಜ್ಯ ಉಪಾಧ್ಯಕ್ಷ ಬೈನೋಜಿರಾವ್ ಮೋರೆ, ಮೋಹನ ಗ್ವಾರಿ, ರವಿ ಸಾವಂತ, ವಿಠ್ಠಲರಾವ್ ಗಾಯಕವಾಡ, ವಕೀಲ ಬಿ.ಎನ್. ಬೋಸಲೆ, ವಿಠ್ಠಲ ಶಿಂಧೆ, ಯಲ್ಲಪ್ಪ ಸಾಬಳೆ, ವಾಸುದೇವ ಭೂಸಾರೆ, ರಮೇಶ ತೋಡಕರ, ಬಸಪ್ಪ ಕಾಟಗೇರ, ಯಲ್ಲಪ್ಪ ಜಾಧವ, ರಾಯಪ್ಪ ತಹಸೀಲ್ದಾರ, ಅಶೋಕ ಉಡಕೇರಿ, ರೇವಣಪ್ಪ ಇಂಗಳೆ, ಸಂಭಾಜಿ ಧರೇಕಾರ, ಶ್ರೀಪಾದ ಸಾವಂತ, ಪರಮೇಸಪ್ಪ ಪರಬ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಗಳ ಮರಾಠ ಸಮಾಜದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಭಾಜಿರಾವ್ ಗೋಡ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಮೋಟೆ ವೈಯಕ್ತಿಕ ಗೀತೆ ಹಾಡಿದರರು, ರಾಘವೇಂದ್ರ ನಲವಡೆ ನಿರೂಪಿಸಿದರು. ಮಾರುತಿ ಭೋಸಲೆ ವಂದಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT