ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾತ್ರಿಗಳಿಂದ ಬಾಹ್ಯಾಕಾಶ ನಡಿಗೆ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಕೇಪ್ ಕೆನೆವರಾಲ್ (ಎಪಿ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಭಾಗದಲ್ಲಿ ಸುಮಾರು ಐದು ಗಂಟೆ ಕಾಲ ಬಾಹ್ಯಾಕಾಶ ನಡಿಗೆ ನಡೆಸಿದ ರಷ್ಯದ ಇಬ್ಬರು ವ್ಯೋಮಯಾನಿಗಳು ನಿಲ್ದಾಣದ ಹೊರಭಾಗದಲ್ಲಿ ಯಶಸ್ವಿಯಾಗಿ ಕ್ಯಾಮರಾ ಮತ್ತು ಪ್ರಾಯೋಗಿಕ ರೇಡಿಯೋ ಅಳವಡಿಸಿದರು.

ವ್ಯೋಮಯಾನಿಗಳಾದ ಡಿಮಿಟ್ರಿ ಕೊಂಡ್ರಟ್‌ಯೇವ್ ಮತ್ತು ಒಲೆಗ್ ಸ್ಕ್ರಿಪೋಚ್ಕಾ ಅವರು ರೇಡಿಯೊ ಆಂಟೆನಾ ಅಳವಡಿಸಿ ಅದಕ್ಕೆ ಕೇಬಲ್‌ಗಳನ್ನು ಜೋಡಿಸಿದರು.ಜತೆಗೆ ಕೆಲವು ಹಳೆಯ ವೈಜ್ಞಾನಿಕ ಪ್ರಯೋಗಗಳನ್ನೂ ನಡೆಸಿದರು. ಅವರು ಎಷ್ಟು ಚಾಕಚಕ್ಯತೆಯಿಂದ ಹಾಗೂ ವೇಗವಾಗಿ ಈ ಕೆಲಸವನ್ನು ಮಾಡಿ ಮುಗಿಸಿದ್ದರೆಂದರೆ ನಿಗದಿತ ಅವಧಿಗಿಂತ ಇನ್ನೂ ಒಂದು ಗಂಟೆ ಮೊದಲೇ ಅವರ ಕೆಲಸ ಮುಗಿದು ಹೋಗಿತ್ತು.

ಈ ಇಬ್ಬರ ಸಾಹಸ ಕಾರ್ಯಗಳನ್ನು ಅವರ ಇತರ ನಾಲ್ವರು ಸಹವರ್ತಿಗಳು ಬಾಹ್ಯಾಕಾಶ ನಿಲ್ದಾಣದ ಒಳಗಿನಿಂದ ನೋಡುತ್ತಿದ್ದರು. ಅವರಲ್ಲಿ ಇಬ್ಬರು ಅಮೆರಿಕ ಹಾಗೂ ತಲಾ ಒಬ್ಬರು ರಷ್ಯ ಮತ್ತು ಇಟಲಿಯ ವ್ಯೋಮಯಾನಿಗಳಾಗಿದ್ದಾರೆ. ’ನಾಸಾ’ ಗಗನಯಾತ್ರಿ ಸ್ಕಾಟ್ ಕೆಲ್ಲಿ ಈ ತಂಡದ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT