ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನ್ ನಾರಂಗ್‌ಗೆ ಖೇಲ್ ರತ್ನ

Last Updated 18 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ನೀಡುವ ಅರ್ಜುನ ಪ್ರಶಸ್ತಿಯ ಸಂಖ್ಯೆಯನ್ನು ಈ ವರ್ಷ ಹೆಚ್ಚಿಸಲಾಗಿದ್ದು, ಕಬಡ್ಡಿ ಆಟಗಾರ್ತಿ ಕರ್ನಾಟಕದ ತೇಜಸ್ವಿನಿ ಬಾಯಿ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್ ಗೌಡ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ಶೂಟರ್ ಗಗನ್ ನಾರಂಗ್‌ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿದೆ. ಪ್ರತಿ ವರ್ಷ 15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ವರ್ಷ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಲಾಗಿದೆ.
 
ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಉತ್ತಮ ಸಾಧನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಸ್ತಿಗಾಗಿ 19 ಜನರ ಪಟ್ಟಿಯನ್ನು ಕೇಂದ್ರಕ್ಕೆ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು ಎಂದು ಕ್ರೀಡಾ ಸಚಿವರು ಗುರುವಾರ ತಿಳಿಸಿದರು. ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಶಸ್ತಿಗೆ ಆಯ್ಕೆಯಾದವರು: ರಾಜೀವ್ ಗಾಂಧಿ ಖೇಲ್ ರತ್ನ: ಗಗನ್ ನಾರಂಗ್ (ಶೂಟಿಂಗ್). ಧ್ಯಾನ್‌ಚಂದ್ ಪ್ರಶಸ್ತಿ: ಶಬ್ಬೀರ್ ಅಲಿ (ಫುಟ್‌ಬಾಲ್), ಸುಶೀಲ್ ಕೊಯ್ಲಿ (ಈಜು) ಮತ್ತು ರಾಜ್ ಕುಮಾರ್ (ಕುಸ್ತಿ).

ಅರ್ಜುನ ಪ್ರಶಸ್ತಿ: ಜಹೀರ್ ಖಾನ್ (ಕ್ರಿಕೆಟ್), ರಾಹುಲ್ ಬ್ಯಾನರ್ಜಿ (ಆರ್ಚರಿ), ಪ್ರೀಜಾ ಶ್ರೀಧರನ್ (ಅಥ್ಲೆಟಿಕ್ಸ್), ಜ್ವಾಲಾ ಗುಟ್ಟಾ (ಬ್ಯಾಡ್ಮಿಂಟನ್), ಸುರಂಜಯ್ ಸಿಂಗ್ (ಬಾಕ್ಸಿಂಗ್), ಸುನಿಲ್ ಚೆಟ್ರಿ (ಫುಟ್‌ಬಾಲ್), ರಾಜ್ಪಾಲ್ ಸಿಂಗ್ (ಹಾಕಿ), ರಾಕೇಶ್ ಕುಮಾರ್ (ಕಬಡ್ಡಿ), ತೇಜಸ್ವಿನಿ ಸಾವಂತ್ (ಶೂಟಿಂಗ್), ವರ್ಧಮಾನ್ ಖಾಡೆ (ಈಜು), ಆಶೀಶ್ ಕುಮಾರ್ (ಜಿಮ್ನಾಷ್ಟಿಕ್), ತೇಜಸ್ವಿನಿ ಬಾಯಿ (ಕಬಡ್ಡಿ), ಸೋಮದೇವ್ ದೇವವರ್ಮನ್ (ಟೆನಿಸ್), ರವೀಂದರ್ ಸಿಂಗ್ (ಕುಸ್ತಿ), ರವಿ ಕುಮಾರ್ (ವೇಟ್ ಲಿಫ್ಟಿಂಗ್), ವಿಕಾಸ್ ಗೌಡ (ಅಥ್ಲೆಟಿಕ್ಸ್), ಸಂಧ್ಯಾ ರಾಣಿ (ವುಶೂ), ಪ್ರಶಾಂತ್ ಕರ್ಮಕರ್ (ಈಜು), ಸಂಜಯ್ ಕುಮಾರ್ (ವಾಲಿಬಾಲ್).

ದ್ರೋಣಾಚಾರ್ಯ ಪ್ರಶಸ್ತಿ: ಇನುಕುರ್ತಿ ವೆಂಕಟೇಶ್ವರ ರಾವ್ (ಬಾಕ್ಸಿಂಗ್), ದೇವಿಂದರ್ ಕುಮಾರ್ ರಾಠೋರ್ (ಜಿಮ್ನಾಷ್ಟಿಕ್), ರಾಂಪಾಲ್ (ಜಿಮ್ನಾಷ್ಟಿಕ್), ಕುಂತಲ್ ರಾಯ್ (ಅಥ್ಲೆಟಿಕ್ಸ್), ಹಾಗೂ ರಾಜೀಂದರ್ ಸಿಂಗ್ (ಹಾಕಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT