ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜ ಗಣತಿ ಚುರುಕು: 612 ಆನೆಗಳು ಪತ್ತೆ

Last Updated 24 ಮೇ 2012, 8:00 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 612 ಆನೆ ಗುರುತಿಸಲಾಗಿದ್ದು, ಡಿ.ಬಿ.ಕುಪ್ಪೆ ವಲಯದಲ್ಲಿ ಅತಿ ಹೆಚ್ಚು 302 ಆನೆ ಮತ್ತು ನಾಗರಹೊಳೆ ವಲಯದಲ್ಲಿ 27 ಆನೆ ಗುರುತಿಸಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ 623 ಚದರ ಕಿ.ಮಿ ವಿಸ್ತೀರ್ಣದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಗಜ ಗಣತಿ ಕಾರ್ಯದಲ್ಲಿ 612 ಆನೆಗಳು ಗುರುತಿಸಲ್ಪಟ್ಟಿದೆ ಎಂದು ನಾಗರಹೊಳೆ ವನ್ಯ ಜೀವಿ ವಿಭಾಗದ ಎ.ಸಿ.ಎಫ್. ಬೆಳ್ಳಿಯಪ್ಪ ತಿಳಿಸಿದರು.

ರಾಜ್ಯದಲ್ಲಿ ನಾಗರಹೊಳೆ ಅರಣ್ಯದಲ್ಲಿ ಅತಿ ಹೆಚ್ಚು ಆನೆ ಗೋಚರಿಸಿದ್ದು, ಮಂಗಳವಾರ ನಡೆಸಿದ ಚಟುವಟಿಕೆಯಲ್ಲಿ ಅರಣ್ಯದ ಶೇ 25 ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಯಿತು. ನಾಗರಹೊಳೆ ಅರಣ್ಯ ಸಂಪೂರ್ಣ ಸಮೀಕ್ಷೆ ನಡೆಸಲು ಕಾಲಾವಕಾಶ ಹೆಚ್ಚಾಗಿ ಬೇಕಾಗಿದೆ ಎಂದರು. ಎರಡು ದಿನಗಳಲ್ಲಿ ಅರಣ್ಯದ ಶೇ 38ರಷ್ಟು ಭಾಗದಲ್ಲಿ ಗಜ ಗಣತಿ ಯಶಸ್ವಿಯಾಗಿ ಮುಗಿಸಲಾಗಿದೆ.

ಕಳೆದ ಎರಡು ದಿನಗಳಲ್ಲಿ 147 ಇಲಾಖೆ ಸಿಬ್ಬಂದಿ ಮತ್ತು 45 ಸ್ವಯಂ ಸೇವಕರು ನಡೆಸಿದ ಗಣತಿ ಕಾರ್ಯದಲ್ಲಿ ಕಲ್ಲಹಳ್ಳ ವಲಯದಲ್ಲಿ 70 ಆನೆ, ನಾಗರಹೊಳೆ ವಲಯದಲ್ಲಿ 27, ವೀರನಹೊ–ಸಹಳ್ಳಿ ವಲಯದಲ್ಲಿ 20, ಆನೇ–ಚೌಕೂರು ವಲ–ಯದಲ್ಲಿ 64, ಮೇಟಿಕುಪ್ಪೆ ವಲಯದಲ್ಲಿ 56, ಡಿ.ಬಿ.ಕುಪ್ಪೆ ವಲಯದಲ್ಲಿ 302 ಆನೆಗಳನ್ನು ಗುರುತಿಸಲಾಗಿದೆ ಎಂದರು.

ಆನೆ ಗಣತಿ ಕಾರ್ಯಕ್ರಮದ ಮೂರನೇ ಭಾಗವಾಗಿರುವ ಹೆಜ್ಜೆ ಗುರುತಿಸುವ ಕಾರ್ಯ ಮೇ 24ರ ಗುರುವಾರ ನಡೆಯಲಿದ್ದು, ಕಾಡಿನ ವಿವಿಧ ಕೆರೆಗಳ ಬಳಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಮತ್ತು ಸ್ವಯಂ ಸೇವಕರ ತಂಡವನ್ನು ಎತ್ತರದ ಟವರ್‌ಗಳಲ್ಲಿ ಕುಳ್ಳರಿಸಿ ಹೆಜ್ಜೆ ಗುರುತಿಸುವ ಕೆಲಸ ನಡೆಯಲಿದೆ ಎಂದರು.
 ಗಣತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಕರಿಗೆ ಮತ್ತು ಇಲಾಖೆ ಸಿಬ್ಬಂದಿಗಳಿಗೆ ಇಲಾಖೆ ವತಿಯಿಂದ ಊಟ ಮತ್ತು ತಿಂಡಿ ಸರಬರಾಜು ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT