ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: ಗಮನ ಸೆಳೆದ ನೃತ್ಯ

Last Updated 28 ಜನವರಿ 2012, 10:20 IST
ಅಕ್ಷರ ಗಾತ್ರ

ಬಾಣಾವರ: ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾರಮೇಶ್ ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮಸುಂದರ್, ಗ್ರಾ.ಪಂ.ಸದಸ್ಯ ಬಿ.ಸಿ.ಮಂಜುನಾಥ, ಕಾರ್ಯದರ್ಶಿ ಶಾರದಮ್ಮ ಇದ್ದರು.
 
ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ
ಅರಸೀಕೆರೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 63ನೇ ವರ್ಷದ ಗಣರಾಜ್ಯೋತ್ಸವವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮಾಡಾಳು; ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಗೌರಮ್ಮ ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಕಮ್ಮ ಧ್ವಜಾರೋಹಣ ನೆರವೇರಿಸಿದರು.
ಸದಸ್ಯರಾದ ಎಂ.ಪ್ರಕಾಶಮೂರ್ತಿ, ಓಂಕಾರಮೂರ್ತಿ, ಮಾತನಾಡಿದರು. ಉಪಾಧ್ಯಕ್ಷ ಬಸವರಾಜು, ಶಿವಮ್ಮ, ಎಸ್.ಡಿ.ಎಂಸಿ ಸದಸ್ಯರಾದ ಎಂ.ಆರ್. ತಿಮ್ಮಯ್ಯ, ಲೋಕೇಶ್, ಶಿವಪ್ಪ, ಎಂ. ರಂಗಪ್ಪ, ಎಂ.ಎಸ್. ಮೂಡ್ಲಪ್ಪ, ರಂಗನಾಥ್, ಪತ್ರಕರ್ತ ಎಂ.ಡಿ. ಸೋಮಶೇಖರ್ ಉಪಸ್ಥಿತರಿದ್ದರು.

ಸ್ವರ್ಣಗೌರಿ ಪ್ರೌಢಶಾಲೆ: ಸ್ವರ್ಣಗೌರಿ ಪ್ರೌಢಶಾಲೆಯ ಆವರಣದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಎಸ್.ವಿ ಸ್ವಾಮಿ ಗಣರಾಜ್ಯೋತ್ಸವ ಧ್ವಜಾರೋಹಣ ವನ್ನು ನೆರವೇರಿಸಿ ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಣ್ಣ ಗ್ರಾ.ಪಂ ಸದಸ್ಯರಾದ ಅನ್ನಪೂರ್ಣಮ್ಮ,ಮಂಜಮ್ಮ, ಚಿಕ್ಕಮ್ಮ, ಗಂಗಮ್ಮ ರಾಜಾಚಾರ್, ಉಪಸ್ಥಿತರಿದ್ದರು.

ಕಿತ್ತನಕೆರೆ: ಇಲ್ಲಿನ ಜಗದ್ಗುರು ಕೋಡಿಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶು ಪಾಲ ಕೆ.ಎಂ. ನಾಗರಾಜು ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.  

ಕಣಕಟ್ಟೆ: ಇಲ್ಲಿನ ವಿದ್ಯಾರಣ್ಯ ಕಾಲೇಜಿನಲ್ಲಿ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರಣ್ಯ ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಕೆ.ಎ. ನಾಗೇಶ್ವರರಾವ್ ಧ್ವಜಾರೋಹಣ ನೆರವೇರಿಸಿದರು. ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಎ. ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿ ಸಿದ್ದರು. ಸಮಾರಣಭದ ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

ಹಿರೀಸಾದರಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಗ್ರಾಮದ ಮುಖಂಡ ದಯಾನಂದ ನೆರವೇರಿಸಿದರು. ಪ್ರತಿ ವರ್ಷ ನಡೆಯುವ 7ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ 1500 ರೂ ಹಾಗೂ 1000 ರೂಪಾಯಿ ನಗದು ಹಾಗೂ ಪ್ರತಿಭಾ ಪುರಸ್ಕಾರವನ್ನು ಗ್ರಾಮದ ನಿವೃತ್ತ ಶಿಕ್ಷಕ ಬಿ. ಶಿವನಂಜಪ್ಪ ನೀಡಿದರು. ಗ್ರಾ.ಪಂ ಸದಸ್ಯೆ ಯಶೋಧಮ್ಮ, ಮುಖಂಡ ಎಚ್.ಪಿ. ರಮೇಶ್ ಮುಖ್ಯ ಶಿಕ್ಷಕ ಕೆ.ಎಂ. ಶಿವಮೂರ್ತಿ ಉಪಸ್ಥಿತರಿದ್ದರು.

ಅದ್ದೂರಿಯಾಗಿ ನಡೆದ ಗಣರಾಜ್ಯೋತ್ಸವ
ಚನ್ನರಾಯಪಟ್ಟಣ:
ಪಟ್ಟಣದ ವಿವಿಧೆಡೆ ಗಣರಾಜ್ಯೋತ್ಸವವನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.
ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆಯ ಸಿಎಸ್‌ಆರ್ ಚಟುವಟಿಕೆಯಡಿ ಏರ್ಪಡಿಸಿದ್ದ ಸಮಾರಂಭದಲ್ಲಿ `ವೃದ್ಧಾಶ್ರಮದ ಫಲಾನುಭವಿಗಳಿಗೆ ಟಿ.ವಿ ಹಾಗೂ ಹೊದಿಕೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಶ್ರೀನಾಥ್ ಮಾತನಾಡಿದರು.

ಮಾನವ ಸಂಪನ್ಮೂಲ ಇಲಾಖೆಯ ಮುಖ್ಯ ಪ್ರಬಂಧಕ ಚಂದ್ರಕಾಂತ್, ಕಾರ್ಖಾನೆಯ ಪರಿಶಿಷ್ಟಜಾತಿ, ವರ್ಗದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಸಂಘಟನಾ ಕಾರ್ಯದರ್ಶಿ ಕಬಿಲಿನ್, ಗಾಯತ್ರಿ  ಶ್ರೀನಾಥ್, ಜಿ.ಪಂ. ಸದಸ್ಯ ಎಂ.ಎ. ರಂಗಸ್ವಾಮಿ, ಎಂ.ಸಿ. ರಮೇಶ್ ಹಾಜರ್ದ್ದಿದರು.

ಜ್ಞಾನ ಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಭೂಪಟ ರಚಿಸುವ ಮೂಲಕ  ವಿದ್ಯಾರ್ಥಿಗಳು `ಭಾರತದ ದರ್ಶನ~ ಮಾಡಿಸಿದರು.

ತರಗತಿಯಲ್ಲಿ ಪಂಚಾಯಿತಿಕಟ್ಟೆ, ಸಂಸತ್ತು, ಹೈಕೋರ್ಟ್ ನಿರ್ಮಿಸಿ ಕಲಾಪಗಳನ್ನು ನಡೆಯುವ ಬಗೆಯನ್ನು ತಿಳಿಸಿಕೊಡಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಕೆ. ನಾಗೇಶ್, ಧ್ವಜಾರೋಹಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಭಾರತಿ ನಾಗೇಶ್, ಪ್ರಾಚಾರ್ಯ ಸುಜಾಪಿಲಿಫ್ ಹಾಜರಿದ್ದರು. ಇಲ್ಲಿನ ರಿಕ್ರಿಯೇಷನ್ ಕ್ಲಬ್‌ವತಿಯಿಂದ 17 ಗಣ್ಯರಿಗೆ ಸನ್ಮಾನಿಸಲಾಯಿತು.

ಡಾ.ಎನ್.ಬಿ. ನಂಜಪ್ಪ ( ಮಾಜಿ ಶಾಸಕ), ಎಚ್.ಎಂ. ನಾಗಪ್ಪ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ), ಎನ್.ಬಿ. ರಾಮಯ್ಯ, (ನಿವೃತ್ತ ಶಿಕ್ಷಕ), ಬಿ.ಕೆ. ಕೆಂಪೇಗೌಡ, ಸಿ.ವಿ. ಗಂಟಯ್ಯ, ಜಿ. ರಾಮಣ್ಣ ( ಗುತ್ತಿಗೆದಾರ), ಎನ್.ಟಿ. ರಾಜಪ್ಪ, ಎಂ.ಡಿ. ಕಿಟ್ಟಪ್ಪ, ಸಿ.ಎಲ್. ಮಹಮದ್ ಇಸ್ಮಾಯಿಲ್, ಸಿ.ಆರ್. ಶ್ರೀನಿವಾಸ್, ಕೆ.ಎಸ್. ಶಿವಪ್ಪ, ಬಿ.ಟಿ. ರಾಜಣ್ಣ (ಕೃಷಿಕರು), ಸಿ.ಆರ್. ಜಗದೀಶ್ (ವ್ಯಾಪಾರಿ), ಕೆ.ಎಸ್. ಕೃಷ್ಣೇಗೌಡ (ಎಚ್‌ಎಸ್‌ಎಸ್‌ಕೆ ಮಾಜಿ ಅಧ್ಯಕ್ಷ), ಕೆ.ಎನ್. ವಾಸು (ನಿವೃತ್ತ ಶಿಕ್ಷಣಾಧಿಕಾರಿ), ಜಿ.ಎ. ಕೃಷ್ಣಯ್ಯಂಗಾರ್ (ಪಶು ವೈದ್ಯ), ಬಿ. ಲಕ್ಷ್ಮೇಗೌಡ ( ನಿವೃತ್ತ ಸರ್ಕಾರಿ ನೌಕರ) ಅವರನ್ನು ಸನ್ಮಾನಿಸಲಾಯಿತು.

ಶಾಸಕ ಸಿ.ಎಸ್. ಪುಟ್ಟೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷೆ ಗೀತ ಅವಿನಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಗೋಪಾಲಸ್ವಾಮಿ, ಎಪಿಎಂಸಿ ಅಧ್ಯಕ್ಷ ಕೆ.ಬಿ. ಉದಯಕುಮಾರ್ ಹಾಜರಿದ್ದರು.

ಪಟೇಲ್ ಮಂಜುನಾಥ್ ಸ್ವಾಗತಿಸಿದರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಪ್ರೊ.ಎನ್. ಸೋಮಸುಂದರ, ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ.ಕೆ. ರಘು, ಶೇಖರೇಗೌಡ, ನಾಸಿರಬಾನು, ಉಪ ಪ್ರಾಚಾರ್ಯ ಕೆ. ಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT