ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತದಲ್ಲಿ ಚುಕ್ಕಿಯಾಟ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗೆಳೆಯರೇ, ರೇಖಾಗಣಿತದ ಮೂಲಭೂತ ಪದಗಳಾದ ಬಿಂದು, ರೇಖೆ, ಸಮತಲ ಇವುಗಳ ಬಗ್ಗೆ ಒಂದು ದಿನ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಬಿಂದುವನ್ನು ಅತ್ಯಂತ ಚಿಕ್ಕದಾದ ಚುಕ್ಕಿಯಿಂದ ಸೂಚಿಸುವರು ಎಂದೆ.

ಆ ಅಂದಹಾಗೆ ಚುಕ್ಕಿ ಎಂದು ಕೂಡಲೇ ನೆನಪಾಯಿತು. ವಿದ್ಯಾರ್ಥಿಗಳೇ ನೀವು ಎಂದಾದರೊಮ್ಮೆ ಚುಕ್ಕಿ ಆಟ ಆಡಿರುತ್ತೀರಲ್ಲವೇ? ಖಂಡಿತವಾಗಿಯೂ ಉಪಾಧ್ಯಾಯರು ಪಾಠ ಮಾಡುವಾಗ ತರಗತಿಯಲ್ಲಿ ಚುಕ್ಕಿ ಆಟ ಆಡಬೇಡಿ. ಪಾಠದ ಕಡೆ ಲಕ್ಷ್ಯವಹಿಸಿ ಎಂದು ಹೇಳಿದೆ.

ಆಗ ತಕ್ಷಣ ಬುದ್ದಿಯಲ್ಲಿ ಬಹಳ ಚುರುಕಾದ ಲಿಖಿತನು ಸಾರ್ ಚುಕ್ಕಿಗೆ ಸಂಬಂಧಿಸಿದಂತೆ ಇಲ್ಲೊಂದು ಸಮಸ್ಯೆ ಇದೆ ಎಂದ. ಅವನ ವಿವರಣೆ ಈ ರೀತಿ ಇತ್ತು.

`ಸರ್ ಇಲ್ಲಿ ಒಟ್ಟು 9 ಚುಕ್ಕಿಗಳಿವೆ. ಈ ಒಂಭತ್ತು ಚುಕ್ಕಿಗಳನ್ನು ಬಳಸಿ 4 ರೇಖೆ ಎಳೆಯಬೇಕು. ಕೈಯನ್ನು ಮೇಲಕ್ಕೆ ಎತ್ತಬಾರದು. ಒಂದು ಸಾರಿ ಎಳೆದ ರೇಖೆ ಮೇಲೆ ಮತ್ತೆ ಹಾದುಹೋಗಬಾರದು~ ಎಂದ. ಇವನ ಈ ನಿಯಮಕ್ಕನುಸಾರವಾಗಿ 9 ಚುಕ್ಕಿಗಳನ್ನು ಬಳಸಿ 4 ರೇಖೆಯನ್ನು ಎಳೆಯಬಲ್ಲಿರಾ? ಹಾಗಾದರೇ ಈಗಲೇ ಪ್ರಯತ್ನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT