ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಉತ್ಸವದಲ್ಲಿ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: ಶನಿವಾರ ಕುಂಕುಮ ಅಲಂಕಾರ, ಭಾನುವಾರ ಶ್ರೀಗಂಧದ ಅಲಂಕಾರ, ಸೋಮವಾರ ವೆಂಕಟೇಶ್ವರ ಸ್ವಾಮಿಗೆ ಅಲಂಕಾರ. ಸ್ಥಳ: ನಂ.45, 2ನೇ ಮುಖ್ಯ ರಸ್ತೆ, ಅರಮನೆ ನಗರ.

ಶ್ರೀಬನಗಿರಿ ವರಸಿದ್ಧಿ ವಿನಾಯಕ ಮಂಡಳಿ ಟ್ರಸ್ಟ್: ಶನಿವಾರ ಬೆಳಿಗ್ಗೆ 7.30ಕ್ಕೆ ಪಂಚಾಮೃತ ಅಭಿಷೇಕ, 9.30ಕ್ಕೆ 108 ಮೋದಕ ಗಣಹೋಮ, ಪೂರ್ಣಾಹುತಿ, ಮಹಾಮಂಗಳಾರತಿ. ಸಂಜೆ 7ಕ್ಕೆ ರಾಜಬೀದಿ ಉತ್ಸವ, ಗಣೇಶ ವಿಸರ್ಜನೆ. ಸ್ಥಳ: 100 ಅಡಿ ರಸ್ತೆ, ಬನಶಂಕರಿ 3ನೇ  ಹಂತ.

ಸನಾತನ ಭಕ್ತ ಮಂಡಲಿ ಟ್ರಸ್ಟ್: ಶನಿವಾರ ಬೆಳ್ಗಿಗೆ 7ಕ್ಕೆ ವಿಶೇಷ ಪೂಜೆ. ಸಂಜೆ 6ಕ್ಕೆ ಎಂ.ಪ್ರಫುಲ್ಲ ಗುರುರಾಜರಾವ್ ಮತ್ತು ವಿ.ಎಂ ನಾಗರಾಜ್ ಅವರಿಂದ `ವಿವರಣ ಸಹಿತ ಭಜನೆ~. ಭಾನುವಾರ ಬೆಳಿಗ್ಗೆ 8.30ಕ್ಕೆ ಗಣಹೋಮ. ಸಂಜೆ 6ಕ್ಕೆ ರಾಗಿಣಿ ಸಂಗೀತ ವಿದ್ಯಾಲಯ ತಂಡದಿಂದ ನೃತ್ಯರೂಪಕ. ಸೋಮವಾರ ಬೆಳಿಗ್ಗೆ ವಿಶೇಷ ಪೂಜೆ. ಸಂಜೆ 6ಕ್ಕೆ ವಿಶೇಷ ಸತ್ಸಂಗ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ.ಸ್ಥಳ: ನಂ.1/2,ಕಾರ್ಡ್ ರಸ್ತೆ, ವಿಜಯ ನಗರ.

ಶ್ರೀ ಗಣೇಶ ಮಂದಿರ:  ಶನಿವಾರ ಸಂಜೆ 7ಕ್ಕೆ ಬಿ.ಎಂ.ಅರ್ಜುನ್ ಶ್ರೀ ವತ್ಸ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಭಾನುವಾರ ಬೆಳಿಗ್ಗೆ 10ಕ್ಕೆ ಮಹಾಗಣಪತಿ ಸಹಸ್ರಮೋದಕ ಹೋಮ. ಸಂಜೆ 7ಕ್ಕೆ ಭಾನುಮತಿ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ. ಸೋಮವಾರ ಸಂಜೆ 7ಕ್ಕೆ  ಸಾಯಿ ಆಧ್ಯಾತ್ಮಿಕ ಕೇಂದ್ರದಿಂದ  ಭಜನೆ. ಸ್ಥಳ: ತ್ಯಾಗರಾಜನಗರ.

ಶ್ರೀ ಲೇಕ್ ವ್ಯೆ ಗಣಪತಿ: ಶನಿವಾರ ಬೆಳಿಗ್ಗೆ 8ಕ್ಕೆ ರುದ್ರ ಹೋಮ, ಸಂಜೆ 6ಕ್ಕೆ ಮಹಾಸುದರ್ಶನ ಹೋಮ. ಭಾನುವಾರ ಬೆಳಿಗ್ಗೆ ಮಹಾಚಂಡಿಕಾ ಹೋಮ. ಸಂಜೆ 6ಕ್ಕೆ ಕಲ್ಯಾಣೋತ್ಸವ. ಸ್ಥಳ: ಟ್ಯಾಂಕ್ ರಸ್ತೆ, ಹಲಸೂರು ಕೆರೆ ಬಳಿ.

ಶ್ರೀವಿನಾಯಕ ಸೇವಾ ಸಮಿತಿ: ಶನಿವಾರ ಬೆಳಿಗ್ಗೆ ವಿಶೇಷ ಪೂಜೆ. ಸಂಜೆ 7ಕ್ಕೆ ಸುಮಾ ರಾಜೇಶ್ ಮತ್ತು ತಂಡದವರಿಂದ ನೃತ್ಯ ರೂಪಕ. ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ. ಸಂಜೆ 7ಕ್ಕೆ ನಾಟ್ಯಾಂಜಲಿ ಮತ್ತು ಸೂರ್ಯ ಆರ್ಟ್ಸ್ ಇಂಟರ್‌ನ್ಯಾಷನಲ್ ಅರ್ಪಿಸುವ `ದೇವಿ ವೈಭವ ನೃತ್ಯರೂಪಕ~. ಸೋಮವಾರ ಬೆಳಿಗ್ಗೆ ವಿಶೇಷ ಪೂಜೆ. ಸಂಜೆ 7ಕ್ಕೆ ಅಶೋಕ್ ಕುಮಾರ್ ಅವರಿಂದ ನಾಟ್ಯಾಂಜಲಿ ರೂಪಕ. ಸ್ಥಳ: 7ನೇ ಬಿ ಮುಖ್ಯ ರಸ್ತೆ, ಜಯನಗರ 4ನೇ ಬಡಾವಣೆ.

ವಿದ್ಯಾಗಣಪತಿ ಸೇವಾ ಟ್ರಸ್ಟ್: ಶನಿವಾರ ಸಂಸಾರ ತಂಡದವರಿಂದ `ಶ್ರೀ ಕೃಷ್ಣ ಸಂಧಾನ~ ನಾಟಕ. ಭಾನುವಾರ ಸಂಜೆ 7ಕ್ಕೆ ಕೆ.ವಿ.ರವಿಚಂದ್ರ ನಿರ್ದೇಶನದಲ್ಲಿ ಶ್ರೀಕರ ಮೆಲೋಡಿ ಮ್ಯೂಸಿಕ್ ತಂಡದಿಂದ ವಾದ್ಯಗೋಷ್ಠಿ. ಸೋಮವಾರ ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ. ಸಂಜೆ 6ಕ್ಕೆ ಜಾನಪದ ವಾದ್ಯಗೋಷ್ಠಿಯೊಂದಿಗೆ ಗಣಪತಿ ಮೆರವಣಿಗೆ  ಮತ್ತು ವಿಸರ್ಜನೆ. ಸ್ಥಳ: 6ನೇ ವಿಭಾಗ, ರಾಜಾಜಿನಗರ.

ವರಸಿದ್ಧಿ ವಿನಾಯಕ ದೇವಾಲಯ: ಶನಿವಾರ ಬೆಳಿಗ್ಗೆ ವಿಶೇಷ ಪೂಜೆ. ದೀಪಾ ಕಾಮತ್ ಅವರ ವಿದ್ಯಾರ್ಥಿಗಳಿಂದ ನಾಟ್ಯ ವೈವಿಧ್ಯ. ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ. ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ. ಸಂಜೆ 6.30ಕ್ಕೆ ಆನಂದ ಮಾದಲಗೆರೆ ಮತ್ತು ತಂಡದಿಂದ ಸುಗಮ ಸಂಗೀತ. ಸೋಮವಾರ ಬೆಳಿಗ್ಗೆ ಪಂಚಾಮೃತಪೂರ್ವಕ ರುದ್ರಾಭಿಷೇಕ. ಸಂಜೆ 6ಕ್ಕೆ ವಿಸರ್ಜನಾ ಪೂಜೆ. ಸ್ಥಳ: ಕೆನರಾ ಬ್ಯಾಂಕ್ ಕಾಲೋನಿ, ನಾಗರಬಾವಿ ರಸ್ತೆ.

ಶ್ರೀ ಶಕ್ತಿ ಗಣಪತಿ ಸೇವಾ ಮಂಡಳಿ: ಶನಿವಾರ ಬೆಳಿಗ್ಗೆ 9ಕ್ಕೆ ಸುದರ್ಶನ ಹೋಮ, ಮಧ್ಯಾಹ್ನ 12ಕ್ಕೆಮಹಾಹೋಮ. ಸಂಜೆ 6.30ಕ್ಕೆ ರಮಣ ಮಹರ್ಷಿ ಅಕಾಡೆಮಿಯ ಅಂಧ ವಿದ್ಯಾರ್ಥಿಗಳಿಂದ ನೃತ್ಯರೂಪಕ. ಭಾನುವಾರ ಏಕಾದಶವಾರ ರುದ್ರಾಭಿಷೇಕ. ಸಂಜೆ 6.30ಕ್ಕೆ ಆಯ್ದ ರಾಜಬೀದಿಗಳಲ್ಲಿ ಶಕ್ತಿ ಗಣಪತಿಯ ಮೆರವಣಿಗೆ, ಅನಂತರ ವಿಸರ್ಜನೆ. ಸ್ಥಳ: ಶಕ್ತಿ ನಗರ, 2ನೇ ಮೇನ್ ಬನಶಂಕರಿ 3ನೇ ಹಂತ 2ನೇ ಘಟ್ಟ.
 
ವಿನಾಯಕ ಚೌತಿ ಮಹೋತ್ಸವ ಸಮಿತಿ: ಶನಿವಾರ ಬೆಳಿಗ್ಗೆ 9ಕ್ಕೆ ಸತ್ಯನಾರಾಯಣ ಪೂಜೆ. ಸಂಜೆ 7ಕ್ಕೆ ರಚನಾ ಮುರಳೀಧರ್ ಮತ್ತು ತಂಡದಿಂದ ಲಘು ಸಂಗೀತ. ಭಾನುವಾರ ವಿನಾಯಕ ಸ್ವಾಮಿಯ ವಿಸರ್ಜನೆ. ಸ್ಥಳ: ಕನ್ನಡ ಸಹೃದಯರ ಪ್ರತಿಷ್ಠಾನ, 58ನೇ ಅಡ್ಡ ರಸ್ತೆ, ರಾಜಾಜಿನಗರ.

ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘ: ಶನಿವಾರ ಪ್ರೀತಿ ಸುಂದರರಾಜನ್ ಮತ್ತು ಶಿಷ್ಯರಿಂದ ಭರತನಾಟ್ಯ. ಭಾನುವಾರ ಪರೋಮಿತ ಡೇ ಮತ್ತು ನಿಶಾದ್ ಮತಂಗೆ ಅವರಿಂದ ಹಿಂದುಸ್ತಾನಿ ಯುಗಳ ಗಾಯನ. ಸೋಮವಾರ ಬಿವಿಎಸ್ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ. ಸ್ಥಳ: ನಂ.35 ಎನ್‌ಎಸ್ ಅಯ್ಯಂಗಾರ್ ರಸ್ತೆ, ಶೇಷಾದ್ರಿಪುರ.

ಭಗವಾನ್ ಅರ್ಕ ಮಹಾಗಣಪತಿ ದೇವಸ್ಥಾನ ಟ್ರಸ್ಟ್: ಶನಿವಾರ ಅರ್ಕ ಮಹಾಗಣಪತಿ ಮತ್ತು ಬಗಳಾಂಬದೇವಿಗೆ ಹಾಗೂ ಆಂಜನೇಯ, ಸುಬ್ರಹ್ಮಣ್ಯ ದೇವರಿಗೆ ಚಂದನ ಅಲಂಕಾರ ಭಾನುವಾರ ವಿಶೇಷ ಪೂಜೆ. ಸೋಮವಾರ ವಿಶೇಷ ಪೂಜೆ. ಸ್ಥಳ: ಕೆಂಪೇಗೌಡ ರಸ್ತೆ, ಗಾಂಧಿ ನಗರ.

ವಿದ್ಯಾಗಣಪತಿ ಸೇವಾ ಸಮಿತಿ: ಶನಿವಾರ ವಿಜಯ್ ಶಿವ ಮತ್ತು ತಂಡದಿಂದ ಸಂಗೀತ. ಭಾನುವಾರ ಮಂಡ್ಯ ಎಂ.ಆರ್.ಗುರುರಾಜ ದಾಸ ಮತ್ತು ತಂಡದಿಂದ ಹರಿಕಥೆ. ಸೋಮವಾರ ಅಭಿಷೇಕ್ ರಘುರಾಮ್ ಮತ್ತು ತಂಡದಿಂದ ಸಂಗೀತ. ಸ್ಥಳ: ಬುಲ್‌ಟೆಂಪಲ್ ರಸ್ತೆ ಬಸವನಗುಡಿ.

ವಿನಾಯಕ ಮಿತ್ರ ಮಂಡಳಿ: ಶನಿವಾರ ಬೆಳಿಗ್ಗೆ ವಿಶೇಷ ಪೂಜೆ. ಮಧ್ಯಾಹ್ನ 12.30ಕ್ಕೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 1.30ಕ್ಕೆ ಸಂಗೀತ ಸ್ಪರ್ಧೆ, ಸಂಜೆ 6.30ಕ್ಕೆ ನೃತ್ಯ ಸಿಂಚನಾ (ನಿರ್ದೇಶನ: ಶುಭಾ ಧನಂಜಯ್), ಭಾನುವಾರ ಬೆಳಿಗ್ಗೆ ವಿನಾಯಕ ಪೂಜೆ. ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆ  ಮತ್ತು ವಿಸರ್ಜನೆ. ಸ್ಥಳ: 1ನೇ ಎ ಮೇನ್, ವಿನಾಯಕ ಮಿತ್ರ ಮಂಡಳಿ ರಸ್ತೆ, 8ನೇ ಬ್ಲಾಕ್ ಜಯನಗರ.

ನೇತಾಜಿ ನಾಗರಿಕರ ಜಾಗೃತಿ ವೇದಿಕೆ: ಶನಿವಾರ ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ. ಸಂಜೆ 6ಕ್ಕೆ ಮುಖ್ಯ ಬೀದಿಗಳಲ್ಲಿ ಗಣೇಶನ ಮೆರವಣಿಗೆ. ಸ್ಥಳ: ನೇತಾಜಿ ವೃತ್ತ, ಸುಶೀಲ ನಾಯ್ಡು ಕಲ್ಯಾಣ ಮಂಟಪ, ಜೆ.ಎಸ್.ನಗರ, ನಂದಿನಿ ಬಡಾವಣೆ.

ಕೋದಂಡರಾಮ ದೇವಸ್ಥಾನ ಸಮಿತಿ: ಶನಿವಾರ ವೀಳ್ಯದೆಲೆ ಅಲಂಕಾರ, ಭಾನುವಾರ ಪಂಚರಂಗಿ ಅಲಂಕಾರ, ಸೋಮವಾರ ಸಬ್ಬಕ್ಕಿ ಅಲಂಕಾರ. ಸ್ಥಳ: ನಂ.30 ಶ್ರೀರಾಮ ಮಂದಿರ ರಸ್ತೆ, ಸಂಪಂಗಿರಾಮನಗರ.

 ವಿದ್ಯಾಗಣಪತಿ ಯೂತ್ ಗ್ರೂಪ್: ಶನಿವಾರ ಬೆಳಿಗ್ಗೆ 10ಕ್ಕೆ ಪೂಜೆ. ಸಂಜೆ 7ಕ್ಕೆ ಕಲಾಕಾರ್ ಶ್ರೀನಿವಾಸ್ ತಂಡದ ವಾದ್ಯಗೋಷ್ಠಿ. ಭಾನುವಾರ ಬೆಳಿಗ್ಗೆ 10ಕ್ಕೆ ವಿಶೇಷ ಪೂಜೆ. 11ಕ್ಕೆ ರಂಗೋಲಿ ಸ್ಪರ್ಧೆ. ಸಂಜೆ 6ಕ್ಕೆ ಬಹುಮಾನ ವಿತರಣೆ. ಗಣಪತಿ ವಿಸರ್ಜನೆ.    ಸ್ಥಳ: ನಂ.47, 48,49 ಮತ್ತು 50ನೇ ಅಡ್ಡ ರಸ್ತೆ, 17ನೇ ಮುಖ್ಯ ರಸ್ತೆ, 3ನೇ ವಿಭಾಗ, ರಾಜಾಜಿನಗರ.

ಶ್ರೀ ವಿನಾಯಕ ಸೇವಾ ಸಮಿತಿ: ಶನಿವಾರ ಪ್ರೊ.ಅ.ರಾ.ಮಿತ್ರ ಅವರಿಂದ ವಿಶೇಷ ಉಪನ್ಯಾಸ. ಭಾನುವಾರ ಕಾಸರವಳ್ಳಿ ಸಹೋದರಿಯರಿಂದ ಗಾಯನ. ಸೋಮವಾರ ಡಿ.ಬಾಲಕೃಷ್ಣ ಅವರಿಂದ ವೀಣಾ ವಾದನ. ಎಚ್.ಎಸ್.ಸುಧೀಂದ್ರ (ಮೃದಂಗ), ದಯಾನಂದ ಮೋಹಿತೆ (ಘಟ). ಸ್ಥಳ: ಜೆ.ಪಿ.ನಗರ 8ನೇ ಹಂತ. ನಿತ್ಯ ಸಂಜೆ 6.

ಸರ್ವಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ: ಸರ್ವ ಸಿದ್ಧಿ ವಿನಾಯಕ ಸ್ವಾಮಿಯ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ಬೆಳಿಗ್ಗೆ ವಿಶೇಷ ಪೂಜೆ. ಭಾನುವಾರ ಬೆಳಿಗ್ಗೆ ಮಹಾಗಣಪತಿ ಅಷ್ಟ ದ್ರವ್ಯ ಹೋಮ, ಮಹಾಭಿಷೇಕ, ವಿಶೇಷ ಅಲಂಕಾರ. ಸ್ಥಳ: ಪೈಪ್ ಲೈನ್, ಶ್ರೀನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT