ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ ಕಾರ್ಯಕ್ರಮಗಳು

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶ್ರೀ ಕ್ಷೇತ್ರ ವರಸಿದ್ಧಿ ವಿನಾಯಕ ದೇವಸ್ಥಾನ: ಅರಕೆರೆ, ಮೈಕೋ ಬಡಾವಣೆ. ಶನಿವಾರ ಬೆಳಿಗ್ಗೆ ಹೆಸರುಕಾಳು ಮತ್ತು ಕಡಲೆಕಾಳು ಅಲಂಕಾರ. ಭಾನುವಾರ ಬೆಳಿಗ್ಗೆ ವಿಭೂತಿ ಅಲಂಕಾರ.

ಅಖಿಲ ಕರ್ನಾಟಕ ಡಾ. ಸುಭಾಷ್‌ ಭರಣಿ ಅಭಿಮಾನಿಗಳ ಸಂಘ, ಶ್ರೀ ವಿದ್ಯಾಗಣಪತಿ ಯುವಕರ ಸಂಘ: 6ನೇ ‘ಎ’ ಮುಖ್ಯರಸ್ತೆ, ‘ಡಿ’ ಬ್ಲಾಕ್‌, 2ನೇ ಹಂತ, ರಾಜಾಜಿನಗರ. ಶನಿವಾರ ಮಹಾಗಣಪತಿ ಪೂಜೆ, ಸಂಜೆ 6.30ಕ್ಕೆ ಹಾರ್ಟ್‌ ಬೀಟ್ಸ್‌ ವಾದ್ಯಗೋಷ್ಠಿ ತಂಡದವರಿಂದ ಭಾವಗೀತೆ, ಜನಪದಗೀತೆ ಹಾಗೂ ಚಲನಚಿತ್ರಗೀತೆ ಮತ್ತು ಗೊಂಬೆ ಕುಣಿತ. ಭಾನುವಾರ ಬೆಳಿಗ್ಗೆ ಮಹಾಗಣಪತಿ ಪೂಜೆ ಹಾಗೂ ಸಂಜೆ ಮುತ್ತಿನ ಪಲ್ಲಕ್ಕಿ ಮೆರವಣಿಗೆ ಹಾಗೂ ಮಹಾಗಣಪತಿಯ ವಿಸರ್ಜನೆ.

ನಿರಂತರ ಸೇವಾ ಸಂಸ್ಥೆ: 8ನೇ ಅಡ್ಡರಸ್ತೆ, ನರಸಿಂಹರಾಜ ಕಾಲೊನಿ. ಶನಿವಾರ ಸಂಜೆ 6.30ಕ್ಕೆ ಗುರುರಾಜ್‌ ಹೊಸಕೋಟೆ ಅವರಿಂದ ಜನಪದ ಗೀತೆಗಳು. ಭಾನುವಾರ ಸಂಜೆ 6.30ಕ್ಕೆ ಶ್ರೀ ಶಕ್ತಿ ವಿನಾಯಕನಿಗೆ ಮಹಾಮಂಗಳಾರತಿ, ದೀಪಾಲಂಕಾರದೊಂದಿಗೆ ವಿಶೇಷ ಮೆರವಣಿಗೆ ಮತ್ತು ವಿಸರ್ಜನೆ.

ಶ್ರೀ ಭುವನೇಶ್ವರಿ ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘ: ಡಾ.ರಾಜ್‌ ವೃತ್ತ ಕೆಂಗೇರಿ. ಶನಿವಾರ ಸಂಜೆ 4ಕ್ಕೆ ಕೆಂಗೇರಿಯ ರಾಜಬೀದಿಗಳಲ್ಲಿ ನಗರ ದೇವತೆ ಅಣ್ಣಮ್ಮ ದೇವಿಯ ಮೆರವಣಿಗೆ. ಭಾನುವಾರ ಬೆಳಿಗ್ಗೆ 11ಕ್ಕೆ ಡಾ.ರಾಜ್‌ ಅಭಿಮಾನಿಗಳ ಸಂಘ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರೋತ್ಥಾನ ಪರಿಷತ್ತು ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ. ಸ್ಥಳ: ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪ.

ಶ್ರೀ ಬಾಲಗಣಪತಿ ಯುವಕರ ಸಂಘ: ಸತ್ಯನಾರಾಯಣ ಬಡಾವಣೆ, ಬಸವೇಶ್ವರನಗರ. ಶನಿವಾರ ಸಂಜೆ 6.30ಕ್ಕೆ ಗಾಯಕ ಚಿಂತನ್‌ ವಿಕಾಸ್‌ ಮತ್ತು ತಂಡದವರಿಂದ ಜನಪದ ಕಾರ್ಯಕ್ರಮ ಮತ್ತು ನೃತ್ಯಸಂಜೆ. ಭಾನುವಾರ 11ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ಸಂಜೆ 4ಕ್ಕೆ ವಿನಾಯಕನ ಮೆರವಣಿಗೆ.

ವರಪ್ರದ ಮಿತ್ರ ಮಂಡಳಿ: ನಂ.44, 3ನೇ ಮುಖ್ಯರಸ್ತೆ, ಶ್ರೀಕಂಠೇಶ್ವರನಗರ, ಮಹಾಲಕ್ಷ್ಮೀ ಲೇಔಟ್‌ ಬಸ್‌ ನಿಲ್ದಾಣದ ಹತ್ತಿರ. ಶನಿವಾರ ಬೆಳಿಗ್ಗೆ 8ಕ್ಕೆ ಮಂಡಳಿಯ ವತಿಯಿಂದ ಸಹಸ್ರ ಮೋದಕ ಗಣಹೋಮ, ಸಂಜೆ 6ಕ್ಕೆ ಜೂನಿಯರ್‌ ಡಾ. ರಾಜ್‌ಕುಮಾರ್‌ ಖ್ಯಾತಿಯ ಗಂಗೋತ್ರಿ ರಂಗಸ್ವಾಮಿ ಅವರಿಂದ ಡಾ.ಪಿ.ಬಿ. ಶ್ರೀನಿವಾಸ್‌ ಸ್ಮರಣಾರ್ಥ ‘ಗಾನ ನಮನ’ ಹಾಗೂ ವಾದ್ಯಗೋಷ್ಠಿ. ಭಾನುವಾರ ಬೆಳಿಗ್ಗೆ 10.30ಕ್ಕೆ ಶ್ರೀ ವಿನಾಯಕನ ಪೂಜೆ, ಮಹಾಮಂಗಳಾರತಿ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಫನ್‌ ಗೇಮ್ಸ್‌, ಹಿರಿಯರಿಗಾಗಿ ಹಲವು ಆಟೋಟ ಸ್ಪರ್ಧೆ. ಸಂಜೆ 6ಕ್ಕೆ ಶ್ರೀ ವಿನಾಯಕನ ಪೂಜೆ, ಮಹಾಮಂಗಳಾರತಿ, ಗಣೇಶ ಮೂರ್ತಿಯ ವಿಸರ್ಜನೆ.

ಕರ್ನಾಟಕ ಕಲಾದರ್ಶಿನಿ: ಶ್ರೀ ವರಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‌ ಬಡಾವಣೆ, 5ನೇ ಮುಖ್ಯರಸ್ತೆ, ಅರೆಕೆರೆ, ಮೈಕೋ ಲೇಔಟ್‌. ಶನಿವಾರ ಬಾಲಕಲಾವಿದರಿಂದ ‘ಶಮಂತೋಪಾಖ್ಯಾನ’ ಯಕ್ಷಗಾನ ಪ್ರದರ್ಶನ. ಸಂಜೆ 6.30. ಭಾನುವಾರ ಶ್ರೀ ಗಣೇಶ ಸೇವಾ ಸಮಿತಿ, ಭುವನಗಿರಿ, ಬಾಣಸವಾಡಿ. ಮಹಿಳಾ ಕಲಾವಿದರಿಂದ ‘ಕೃಷ್ಣಾರ್ಜುನ ಕಾಳಗ’. ಸಂಜೆ 6.30. 

ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘ: ಸಂಘದ ಸಭಾಂಗಣ, ಶೇಷಾದ್ರಿಪುರ. ಶನಿವಾರ ಸಂಜೆ 6ಕ್ಕೆ ಯೋಗಾಭ್ಯಾಸ, ಧ್ಯಾನ ಚಕ್ರಗಳು.
ಶ್ರೀ ವರಸಿದ್ಧಿ ವಿನಾಯಕ ಗೆಳೆಯರ ಬಳಗ: ರಾಘವೇಂದ್ರ ಕಾಲೊನಿ, ಚಾಮರಾಜಪೇಟೆ. ಶನಿವಾರ ಬೆಳಿಗ್ಗೆ 9ಕ್ಕೆ ಶ್ರೀ ಮಹಾಗಣಪತಿ ಹೋಮ, 9.30ಕ್ಕೆ ಉಚಿತ ನೇತ್ರ ತಪಾಸಣಾ ಶಿಬಿರ, 10ಕ್ಕೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಂಜೆ 4.30ಕ್ಕೆ ವಿಶೇಷ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕಾಲೊನಿಯ ಮುಖ್ಯಬೀದಿಯಲ್ಲಿ ಮೆರವಣಿಗೆ ನಂತರ ಶ್ರೀ ಮಹಾಗಣಪತಿಯ ವಿಸರ್ಜನೆ.

ವಿದ್ಯಾ ಗಣಪತಿ ಸೇವಾ ಸಮಿತಿ: ದೊಡ್ಡ ಗಣಪತಿ ದೇವಸ್ಥಾನ, ಬುಲ್‌ಟೆಂಪಲ್‌ ರಸ್ತೆ. ಶನಿವಾರ ಮೈಸೂರು ರಾಮಚಂದ್ರ ಮತ್ತು ಸಂಗಡಿಗರಿಂದ ದೇವರನಾಮ. ಭಾನುವಾರ  ಎಸ್‌.ಶಂಕರ್‌ ಮತ್ತು ಸಂಗಡಿಗರಿಂದ ಹಾಡುಗಾರಿಕೆ. ಸಂಜೆ 6.45.

ಶ್ರೀ ವಿಘ್ನೇಶ್ವರ ದೇವಸ್ಥಾನ: 26ನೇ ಮುಖ್ಯರಸ್ತೆ, ಬಿ.ಟಿ.ಎಂ.ಬಡಾವಣೆ 2ನೇ ಹಂತ. ಶನಿವಾರ ಸುದರ್ಶನ ಆಂಜನೇಯ ಹೋಮ, ಭಾನುವಾರ ಸ್ಮರಣ ಸಂಚಿಕೆ ಬಿಡುಗಡೆ ಸಮಾರೋಪ. ಬೆಳಿಗ್ಗೆ 10.

ಕಣಿಯರ ಸೇವಾ ಸಮಾಜ: 2ನೇ ಮುಖ್ಯರಸ್ತೆ, ಕಣಿಯರ ಕಾಲೊನಿ, ಚಾಮರಾಜಪೇಟೆ. ಶನಿವಾರ ಸಂಜೆ 6.30ಕ್ಕೆ ಶ್ರೀ ಶಿವಮಲ್ಲು ಮತ್ತು ಕುಟುಂಬದವರಿಂದ ಭಕ್ತಿಗೀತೆಗಳ ಗಾಯನ. ಭಾನುವಾರ ಸಂಜೆ 4ಕ್ಕೆ ಮುತ್ತಿನ ಮಂಟಪದಲ್ಲಿ ನಗರೋತ್ಸವ.

ವರವೆಂಕಟ ಕೋದಂಡ ರಾಮಭದ್ರ ಕ್ಷೇತ್ರ: ಈಜೀಪುರ. ಶನಿವಾರ ಬೆಳಿಗ್ಗೆ 9ಕ್ಕೆ ಪೂಜೆ, ಮಹಾಮಂಗಳಾರತಿ, ಸಂಜೆ 7ಕ್ಕೆ ಪಾರ್ಥಸಾರಥಿ ಮತ್ತು ಡಾ. ಸದಾನಂದ ತಂಡದವರಿಂದ ಕರ್ನಾಟಕ ಸಂಗೀತ. ಭಾನುವಾರ ಬೆಳಿಗ್ಗೆ 9ಕ್ಕೆ ಪೂಜೆ, ಸಂಜೆ 7ಕ್ಕೆ ಹೂವಿನ ಪಲ್ಲಕ್ಕಿಯಲ್ಲಿ ವಿವಿಧ ವಾದ್ಯಗಳೊಂದಿಗೆ ಗಣಪತಿ ಮೂರ್ತಿಯ ವಿಸರ್ಜನೆ.

ವಿನಾಯಕ ಸೇವಾ ಸಮಿತಿ: 7ನೇ ‘ಬಿ’ ಮುಖ್ಯರಸ್ತೆ, ಜಯನಗರ 4ನೇ ಬಡಾವಣೆ. ಶನಿವಾರ ಬೆಳಿಗ್ಗೆ 7ಕ್ಕೆ ಶ್ರೀ ಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ, ಸಂಜೆ 7ಕ್ಕೆ ಸ್ಫೂರ್ತಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯೋಲ್ಲಾಸ, ಭರತನಾಟ್ಯ. ಭಾನುವಾರ ಬೆಳಿಗ್ಗೆ 7ಕ್ಕೆ ಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ, ಸಂಜೆ 6.10ಕ್ಕೆ ಬಿ.ಎಲ್‌. ಚನ್ನೇಗೌಡ ಅವರಿಗೆ ಸನ್ಮಾನ. ಸಂಜೆ 7ಕ್ಕೆ ಸಪ್ತಸ್ವರ ಆರ್ಟ್ಸ್‌ ಮತ್ತು ಕ್ರಿಯೇಷನ್ಸ್‌ ಅವರಿಂದ ನೃತ್ಯ ನಾಟಕ.

ನಿರ್ಮಾಣ ಶೆಲ್ಟರ್ಸ್: ಪುರಂದರ ಮಂಟಪ, ನಿಸರ್ಗ ಬಡಾವಣೆ, ಬನ್ನೇರುಘಟ್ಟ. ಶನಿವಾರ ಸಂಜೆ 6.30ಕ್ಕೆ ಮಹಾಗಣಪತಿ ಪೂಜೆ, ಮಹಾಮಂಗಳಾರತಿ, ಮೆರವಣಿಗೆಯೊಂದಿಗೆ ಗಣಪತಿಯ ವಿಸರ್ಜನೆ.

ಸ್ವಸ್ತಿಕ್‌ ಯುವಕರ ಸಂಘ: ಆಟದ ಮೈದಾನ, ಮಿಲ್ಕ್‌ ಕಾಲೊನಿ, ರಾಜಾಜಿನಗರ 2ನೇ ಹಂತ. ಶನಿವಾರ ಬೆಳಿಗ್ಗೆ 10.48ಕ್ಕೆ ನವಗ್ರಹ ಹೋಮ, ಪೂರ್ಣಾಹುತಿ. ಅತಿಥಿ– ಮುಖ್ಯಮಂತ್ರಿ ಸಿದ್ದರಾಮಯ್ಯ. ಸಂಜೆ 7ಕ್ಕೆ ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕರಿಂದ ಸಂಗೀತ ರಸಸಂಜೆ. ಭಾನುವಾರ ಬೆಳಿಗ್ಗೆ 9.50ಕ್ಕೆ ಮೃತ್ಯುಂಜಯ ಹೋಮ. ಸಂಜೆ 7ಕ್ಕೆ ‘ಲಿಟಲ್‌ ಚಾಮ್ಸ್‌’ ಸಂಗೀತ ಕಾರ್ಯಕ್ರಮ.

ಶ್ರೀ ವಿನಾಯಕ ಬಳಗ: 3ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ನ್ಯಾಯಾಂಗ ಬಡಾವಣೆ. ಶನಿವಾರ ಬೆಳಿಗ್ಗೆ 7.30ಕ್ಕೆ ಗಣಪತಿ ನಿತ್ಯಪೂಜೆ, ಸಂಜೆ 6.30ಕ್ಕೆ ‘ಆಲ್‌ ದಿ ಬೆಸ್ಟ್‌’ ನಗೆ ನಾಟಕ ಪ್ರದರ್ಶನ. ನಿರ್ದೇಶನ– ಯಶವಂತ ಸರದೇಶಪಾಂಡೆ. ಭಾನುವಾರ ಬೆಳಿಗ್ಗೆ 7.30ಕ್ಕೆ ಗಣಪತಿ ಪೂಜೆ, ಮಧ್ಯಾಹ್ನ 2ಕ್ಕೆ ಮೆರವಣಿಗೆ, ಸಂಜೆ ವಿಸರ್ಜನೆ.

ಶ್ರೀ ವಿದ್ಯಾಗಣಪತಿ ಭಕ್ತ ಮಂಡಳಿ: ಜೂಗನಹಳ್ಳಿ, ರಾಜಾಜಿನಗರ. ಶನಿವಾರ ಸಂಜೆ 7ಕ್ಕೆ ವಾಸು ಮತ್ತು ತಂಡದವರಿಂದ ನೃತ್ಯ. ಭಾನುವಾರ ಸಂಜೆ 7ಕ್ಕೆ ಬಾಲು ಮತ್ತು ತಂಡದವರಿಂದ ‘ವಾದ್ಯಗೋಷ್ಠಿ’.

ಕುಮಾರಪಾರ್ಕ್‌ ಯೂತ್ಸ್‌ ಅಸೋಸಿಯೇಷನ್‌: ಮಕ್ಕಳ ಆಟದ ಮೈದಾನ, ಕುಮಾರಪಾರ್ಕ್‌. ಶನಿವಾರ ಸಂಜೆ 7ಕ್ಕೆ ನಟರಾಜ್‌ ಎಂಟರ್‌ಟೇನರ್ಸ್‌ ತಂಡದವರೊಂದಿಗೆ ಗಾಯಕಿ ಚೈತ್ರಾ ಹಾಗೂ ಗಾಯಕ ದೀಪಕ್‌ ದೊಡ್ಡೇರ ಅವರಿಂದ ಸಂಗೀತ ವೈಭವ. ಭಾನುವಾರ ಮಧ್ಯಾಹ್ನ 3ಕ್ಕೆ ದೀಪಾಲಂಕೃತ ಹೂವಿನ ಪಲ್ಲಕ್ಕಿಯೊಂದಿಗೆ ಶ್ರೀ ವಿದ್ಯಾಗಣಪತಿಯ ಮೆರವಣಿಗೆ ಹಾಗೂ ವಿಸರ್ಜನೆ.

ಲಕ್ಕಸಂದ್ರ ಶ್ರೀ ವಿನಾಯಕ ಗೆಳೆಯರ ಬಳಗ: ನಂ.26, 8ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಲಕ್ಕಸಂದ್ರ. ಶನಿವಾರ ಸಂಜೆ 6.30ಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ–ನಟಿ, ಹಿನ್ನೆಲೆ ಗಾಯಕರು ಹಾಗೂ ಹಾಸ್ಯ ಕಲಾವಿದರಿಂದ ರಸಸಂಜೆ ಕಾರ್ಯಕ್ರಮ. ಭಾನುವಾರ ಸಂಜೆ 3ಕ್ಕೆ ಶ್ರೀ ವಿನಾಯಕ ಮೂರ್ತಿಯ ಮೆರವಣಿಗೆ ಮತ್ತು ವಿಸರ್ಜನೆ.

ಹೊಯ್ಸಳ ಕರ್ನಾಟಕ ಸಂಘ: 3ನೇ ಅಡ್ಡರಸ್ತೆ, ಹೊಂಬೇಗೌಡನಗರ. ಶನಿವಾರ ಸಂಜೆ 4ಕ್ಕೆ ವಿಶೇಷಪೂಜೆ. ಅತಿಥಿಗಳು: ಶಾಸಕ ರವಿಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ಸಿ.ಕೆ. ರಾಮಮೂರ್ತಿ. ಅಧ್ಯಕ್ಷತೆ: ಸಂಘದ ಅಧ್ಯಕ್ಷ ಟಿ.ಎಲ್‌. ಚಂದ್ರಶೇಖರಯ್ಯ. ಸುಚೇತನಾ ರಂಗಸ್ವಾಮಿ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸಂಜೆ 6.30ಕ್ಕೆ ಮಹಾಮಂಗಳಾರತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT