ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯ ಆರೋಪಿಗಳಿಗೆ ಅಂಟಿದ ಕೋರ್ಟ್ ಜ್ವರ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಲವಾರು ಪ್ರಕರಣಗಳಲ್ಲಿ ವಿವಿಧ ಕಾರಣಗಳಿಗೆ ನ್ಯಾಯಾಲಯಗಳಿಗೆ ಹಾಜರಾಗಬೇಕಾದ, ಉಳಿದ ದಿನಗಳಲ್ಲಿ ದೇಶದಲ್ಲೆಡೆ ನಿರುಮ್ಮಳವಾಗಿ ತಿರುಗಾಡುವ ರಾಜಕಾರಣಿಗಳಿಗೆ, ವಿಚಾರಣಾ ದಿನಾಂಕ ಸಮೀಪಿಸುತ್ತಿದ್ದಂತೆ ಜ್ವರ, ಹೃದ್ರೋಗ, ಮಧುಮೇಹ, ಅತಿಸಾರ ಇತ್ಯಾದಿಗಳು ಆವರಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆನಿಸುತ್ತಿದೆ. 

ಅನಾರೋಗ್ಯವನ್ನೇ ಆಧಾರವಾಗಿಟ್ಟುಕೊಂಡು ವಿಚಾರಣೆಯ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯುವುದು, ಜಾಮೀನು ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. 

ಇಂಥ ಪ್ರಸಂಗಗಳಿಂದಾಗಿ, ಮುಂದಿನ ದಿನಗಳಲ್ಲಿ ವೈದ್ಯಕೀಯ ಗ್ರಂಥಗಳಲ್ಲಿ  `ಕೋರ್ಟ್ ಫೀವರ್~ ಎಂಬ ಹೊಸ ಅಧ್ಯಾಯ ಸೇರಿಸಬೇಕಾದ ಪ್ರಮೇಯ ಉಂಟಾದರೂ ಅಚ್ಚರಿಯಿಲ್ಲ!

ವೈದ್ಯಸಮುದಾಯದವರು ಇಂತಹ ಪ್ರಕರಣಗಳಲ್ಲಿ ತಮ್ಮ  `ವೈದ್ಯಸಂಹಿತೆ~ಯನ್ನು ಸಂಯಮದಿಂದ, ಆತ್ಮಪೂರ್ವಕವಾಗಿ ಅಳವಡಿಸಿಕೊಂಡು ಪ್ರಮಾಣ ಪತ್ರ ನೀಡಬೇಕಾದ ಅಗತ್ಯ ಇಂದಿನದಾಗಿದೆ.  ಈ ಬಗ್ಗೆ ವೈದ್ಯವೃಂದ ಆತ್ಮಾವಲೋಕನ ಮಾಡಿಕೊಳ್ಳಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT