ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನಲ್ಲಿ ಮತ್ತೆ ಕ್ರಿಕೆಟ್ ಜ್ವರ ಶುರು

Last Updated 2 ಜನವರಿ 2012, 7:55 IST
ಅಕ್ಷರ ಗಾತ್ರ

ಗದಗ: 26 ದಿನಗಳ ಕಾಲ ಗದಗ ನಗರದ ಜನತೆಗೆ ಭರಪೂರ ಮನರಂಜನೆ ನೀಡಿ ಗಲ್ಲಿಗಳಲ್ಲಿ ಹುದಗಿರುವ ಕ್ರಿಕೆಟ್ ಪ್ರತಿಭೆಗಳ ಅನಾವರಣೆಗೆ ವೇದಿಕೆ ಕಲ್ಪಿಸಿದ್ದ ಜಿಸಿಎಲ್ ಕ್ರಿಕೆಟ್ ಪಂದ್ಯಾವಳಿ ಮುಗಿಯುತ್ತಿದ್ದಂತೆ ಇದೀಗ ಟಿ-10 ಕ್ರಿಕೆಟ್‌ನೊಂದಿಗೆ ಹೊಡಿ ಮಗ್ ಹೊಡಿ ಎನ್ನುವ ಘೋಷಣೆಯಿಂದ ಯಂಗ್ ಇಂಡಿಯಾ ಪರಿವಾರದ ಕ್ರಿಕೆಟ್ ಜ್ವರ ಜಿಲ್ಲೆಯ ಎಲ್ಲೆಡೆ ಶುರುವಾಗಿದೆ.

ಸಧ್ಯ ಡಿ. 28 ರಿಂದ ನಗರದ ಎಎಸ್‌ಎಸ್ ಕಾಲೇಜಿನ ಮೈದಾನದಲ್ಲಿ ಟಿ-10 ಕ್ರಿಕೆಟ್ ಪಂದ್ಯಾವಳಿ ಆರಂಭವಾಗಿದೆ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದ ಕ್ರಿಡಾಪಟುಗಳು ಇದರಲ್ಲಿ ಭಾಗವಹಿಸಿದ್ದಾರೆ. ಅವಳಿ ನಗರದ ಜನತೆಗೆ ಇದೊಂದು ಕ್ರಿಕೆಟ್ ಹಬ್ಬವಾಗಿಯೇ ಪರಿಣಮಿಸಿದೆ.

ಜಾಲಿ ಕಂಟಿಗಳಿಂದ ತುಂಬಿದ್ದ ಮೈದಾನವನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕ್ರಿಕೆಟ್ ಮೈದಾನವನ್ನಾಗಿ ರೂಪಿಸಲಾಗಿದೆ. ಇದಕ್ಕಾಗಿ ಯಂಗ್ ಇಂಡಿಯಾ ಪರಿವಾರದ ಸದಸ್ಯರು ಹಗಲಿರಳು ಶ್ರಮಿಸಿ ಒಂದು ರೂಪ ನೀಡಿದ್ದಾರೆ. ಯುವ ಕ್ರೀಡಾಪಟುಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಈ ಪಂದ್ಯಾವಳಿಗೆ ಗದಗ ಜಿಲ್ಲೆ ಸೇರಿದಂತೆ ನೆರೆಯ ಬೆಳಗಾವಿ, ಬಾಗಲಕೋಟೆ, ಇಲಕಲ್, ರಾಯಭಾಗ, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರ ಜಿಲ್ಲೆಗಳಿಂದ ಒಟ್ಟು 136 ತಂಡಗಳು ಭಾಗವಹಿಸಿವೆ.

10 ಓವರ್‌ಗಳನ್ನು ಈ ಪಂದ್ಯ ಹೊಂದಿದೆ. ಪ್ರತಿದಿನ 5 ಪಂದ್ಯಗಳು ನಡೆಯುತ್ತಿದ್ದು, 10 ತಂಡಗಳು ಭಾಗವಹಿಸುತ್ತಿವೆ. ಒಂದು ತಂಡಕ್ಕೆ ಪಂದ್ಯದಲ್ಲಿ ಪ್ರವೇಶಿಸಲು ಶುಲ್ಕ 2ಸಾವಿರ ರೂಪಾಯಿ ಇತ್ತು. ಆದರೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ `ಅವ್ವ~ ಸೇವಾ  ಟ್ರಸ್ಟ್ ವತಿಯಿಂದ ಶೇ. 50ರಷ್ಟು ಹಾಗೂ ಕಾಲೇಜಿನ 15 ತಂಡಗಳ ಪ್ರವೇಶ ಫೀ ಯನ್ನು ಭರಿಸಲಾಗಿದೆ.

ಗದಗ ತಾಲ್ಲೂಕಿನ 102 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಆ ಎಲ್ಲ ತಂಡದ ಆಟಗಾರಿಗೆ ಟಿ-ಶರ್ಟ್‌ಗಳನ್ನು ಯಂಗ್ ಇಂಡಿಯಾ ಪರಿವಾರದಿಂದ ನೀಡಲಾಗಿದೆ.

ಟಿ-10 ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 1 ಲಕ್ಷ ರೂಪಾಯಿ ಹಾಗೂ ಕಪ್, ದ್ವಿತೀಯ 50 ಸಾವಿರ ರೂಪಾಯಿ ಹಾಗೂ ಕಪ್, ಸರಣಿ ಶ್ರೇಷ್ಠ 5 ಸಾವಿರ ರೂಪಾಯಿ ಬಹುಮಾನವನ್ನು ಹೊಂದಿದೆ. ಅಷ್ಟೇ ಅಲ್ಲದೆ ಉತ್ತಮ ಪ್ರದರ್ಶನ ತೋರುವ ತಂಡಗಳಿಗೆ ವಿಶೇಷ ಪ್ರಶಸ್ತಿಗಳನ್ನು ಕೂಡಾ ನೀಡಲಾಗುತ್ತದೆ.

ಎಂಟು ಜನ ಅಂಪೈರ್, ನಾಲ್ವರು ಸ್ಕೋರಿಂಗ್, ರೆಕಾರ್ಡ್ ಮೆಂಟೇ ನಿಂಗ್‌ಗಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಭಾನುವಾರ ನಡೆದ 14 ವರ್ಷದೊಳಗಿನ ಕ್ರಿಕೆಟ್ ಪಂದ್ಯವು ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿತು. ಜ. 26 ರಂದು ಟಿ-10 ಫೈನಲ್ ಪಂದ್ಯ ನಡೆಯಲಿದೆ.

ಯಂಗ್ ಇಂಡಿಯಾ ಪರಿವಾರದ 12 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಟಿ-10 ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿ ಸಲಾಗಿದೆ. ಈಪಂದ್ಯಗಳಿಂದ ಸ್ಥಳೀಯ ಮಟ್ಟದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿದಂತಾಗುತ್ತದೆ.

ಬೇರೆ ಬೇರೆ ಜಿಲ್ಲೆಯ ಕ್ರೀಡಾ ಪಟುಗಳ ಆಟಗಳ ವೀಕ್ಷಣೆ ಯಿಂದ ಇಲ್ಲಿನ ಯುವಕರು ಸ್ಪೂರ್ತಿ ಪಡೆಯಲು ಸಾಧ್ಯ ವಾಗುತ್ತದೆ ಎಂದು ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ವೆಂಕನಗೌಡ ಗೋವಿಂದಗೌಡರ  ಈ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT