ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ಯಾಳ: ಸಾಮಾಜಿಕ ಬಹಿಷ್ಕಾರ ಅಂತ್ಯ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಗದ್ಯಾಳ ಗ್ರಾಮದ ದಲಿತರಿಗೆ ಮೂರು ತಿಂಗಳಿ­ನಿಂದ ಹಾಕಿದ್ದ ಬಹಿ­ಷ್ಕಾರ­ವನ್ನು ಜಿಲ್ಲಾಧಿ­ಕಾರಿ ಮನೋಜ್‌ ಜೈನ್‌ ಮಧ್ಯಸ್ಥಿಕೆ, ಶಾಸಕ ಸಿದ್ದು ನ್ಯಾಮಗೌಡ ಉಪಸ್ಥಿತಿ­ಯಲ್ಲಿ ಶನಿವಾರ ನಡೆದ ಸಂಧಾನ ಸಭೆಯಲ್ಲಿ ಅಂತ್ಯ­ಗೊಳಿಸಲಾಯಿತು.

ಜಿಲ್ಲಾಡಳಿತ ವಿಧಿಸಿದ್ದ ಕೆಲವು ಷರತ್ತು­ಗಳನ್ನು ಒಪ್ಪಿಕೊಂಡ ದಲಿತ ಹಾಗೂ ಸವರ್ಣೀಯರ ಮುಖಂಡರು, ಪರಸ್ಪರ ಕೈಕುಲುಕಿದ ಬಳಿಕ ದೇವಸ್ಥಾನವೊಂದಕ್ಕೆ ಒಟ್ಟಿಗೆ ತೆರಳಿ ತೆಂಗಿನಕಾಯಿ ಒಡೆದರು.

ಇದಕ್ಕೂ ಮೊದಲು ದಲಿತರ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸ­ಲಾಯಿತು. ಅವುಗಳನ್ನು ಪರಿಹರಿಸುವ ಭರವಸೆ ನೀಡಲಾಯಿತು. ನಂತರ ನಡೆದ ಸವರ್ಣೀಯರ ಸಭೆಯಲ್ಲಿ ದಲಿತರು ಹೇಳಿಕೊಂಡ ಸಮಸ್ಯೆಗಳನ್ನು ತಿಳಿಸಿ, ಬಹಿ­ಷ್ಕಾರ ಹಿಂತೆಗೆತಕ್ಕೆ ಸಂಧಾನ ನಡೆಸಲಾ­ಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT