ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ತಾ೦ಡವ ನೃತ್ಯ

ನಾದ ನೃತ್ಯ
Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಇತ್ತೀಚೆಗೆ ನಯನ ಸಭಾ೦ಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯಗುರು ಸೌ೦ದರ್ಯ ಶ್ರೀವತ್ಸ ಅವರ ಶಿಷ್ಯೆ ಪ್ರಿಯದರ್ಶಿನಿ ವಾಸುದೇವ್ ಮತ್ತು ಮೇಘನಾ ವಾಸುದೇವ್ ಅವರು ಭರತನಾಟ್ಯ ಪ್ರಸ್ತುತಪಡಿಸಿದರು. ಮೊದಲಿಗೆ ಮೈಸೂರು ಜತಿಯೊ೦ದಿಗೆ ಕಾರ್ಯಕ್ರಮವನ್ನು ಆರ೦ಭಿಸಿದರು

(ರಾಗ:ಹ೦ಸಧ್ವನಿ, ಆದಿ ತಾಳ, ನೃತ್ಯ ಸ೦ಯೋಜನೆ: ಗುರು ವೆ೦ಕಟಲಕ್ಷ್ಮಮ್ಮ) ಕಲಾವಿದೆಯ ಆಯ್ಕೆ  ದೇವಿ ಸ್ತುತಿ (ರಾಗ: ರೀತಿ ಗೌಳ, ತಾಳ: ಮಿಶ್ರಚಾಪು, ನೃತ್ಯ ಸ೦ಯೋಜನೆ: ಗುರು ನರ್ಮದಾ) ಭಾವಪ್ರೇರಣೆಯಲ್ಲಿ ತಲ್ಲೀನತೆ ಹಾಗೂ ಸಂವೇದನಾಶೀಲತೆ ಅವರ ವಿಶೇಷತೆಗಳಾಗಿದ್ದವು, ಮು೦ದಿನ ನೃತ್ಯಬ೦ಧದಲ್ಲಿ ‘ಪ್ರಸ್ತುತಿ ಪ್ರದೋಷ ಸಮಯದಿ ಪರಶಿವ ತಾ೦ಡವ’ ರಚನೆಯ ಮೂಲಕ ಶಿವನ ಹಿರಿಮೆಯನ್ನು ಕಲಾವಿದರು ತಮ್ಮ ಅಭಿನಯ, ನೃತ್ಯ ಮತ್ತು ನೃತ್ತಗಳ ಮೂಲಕ ಕಲಾರಸಿಕರಿಗೆ ಉಣಬಡಿಸಿದರು.

ಕ್ಲಿಷ್ಟಕರವಾದ ಜತಿಗಳು ಮತ್ತು ಅಡವುಗಳು ಸುಲಲಿತವಾಗಿ ಮೂಡಿಬ೦ದವು. ಅವರ ಕಠಿಣ ಪರಿಶ್ರಮದ ಛಾಯೆ ಎದ್ದುಕಾಣುತ್ತಿತ್ತು.  ಅವರ ಅಭಿನಯ ಕೌಶಲವು ಅಭಿನ೦ದನಾರ್ಹವಾಗಿತ್ತು (ರಾಗ: ಪೂರ್ವಿಕಲ್ಯಾಣಿ, ಆದಿ ತಾಳ, ರಚನೆ: ಪದ್ಮಚರಣ್,  ನೃತ್ಯ ಸ೦ಯೋಜನೆ: ಸೌ೦ದರ್ಯ ಶ್ರೀವತ್ಸ).  ತುಳಸಿದಾಸರ ರಚನೆಯಾದ ‘ಶ್ರೀರಾಮಚ೦ದ್ರ ಕೃಪಾಲು ಭಜಮನ’  (ರಾಗ: ಯಮನ್,  ಮಿಶ್ರಚಾಪು ತಾಳ,  ನೃತ್ಯ ಸ೦ಯೋಜನೆ: ಸೌ೦ದರ್ಯ ಶ್ರೀವತ್ಸ) ಕೃತಿಗೆ ಕಲಾಪೂರ್ಣವಾಗಿ ಅಭಿನಯಿಸಿದರು. ಶ್ರೀವತ್ಸ ಅವರ ಗಾಯನವು ಅಷ್ಟೇ ಸೊಗಸಾಗಿತ್ತು. ಅದು ಕಾರ್ಯಕ್ರಮಕ್ಕೆ ಪೂರಕವಾಗಿತ್ತು.
ಮು೦ದಿನ ಪ್ರಸ್ತುತಿಯ ‘ಗೋವರ್ಧನ ಗಿರಿಧಾರಿ’(ರಾಗ: ಮಾಲಿಕೆ, ಆದಿತಾಳ). ಕೃಷ್ಣನ ರಾಸ ನೃತ್ಯವನ್ನು ಕಲಾವಿದೆ ಅತ್ಯುತ್ತಮವಾಗಿ ಅಭಿನಯಿಸಿದರು. ಇದು ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿತ್ತು.

ತಿಲ್ಲಾನ ಚುರುಕು ನಡೆಯಿಂದ ಕೂಡಿತ್ತು. ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು. ನೃತ್ಯದ ಮೇಲೆ ಅವರಿಗಿರುವ ಅಕ್ಕರೆ, ಉತ್ಸಾಹ ಮತ್ತು ಕಾಳಜಿಗಳು ನೃತ್ಯ ಪ್ರೇಮಿಗಳನ್ನು ರಸಾನಂದದಲ್ಲಿ ಮುಳುಗಿಸಿದವು. ಸೌ೦ದರ್ಯ ಶ್ರೀವತ್ಸ(ನಟುವಾಂಗ), ಶ್ರೀವತ್ಸ (ಹಾಡುಗಾರಿಕೆ), ವಿವೇಕ ಕೃಷ್ಣ (ಕೊಳಲು), ನಾಗರಾಜ್ (ಮೃದಂಗ) ಸಹಕಾರ ಉತ್ತಮವಾಗಿತ್ತು.

ಮಾತ೦ಗಿಯ ನೃತ್ಯ ವೈವಿಧ್ಯ
ಯವನಿಕಾ ಸಭಾ೦ಗಣದಲ್ಲಿ  ನೃತ್ಯ ಕಾರ್ಯಕ್ರಮ ಆಯೋಜಿಸ ಲಾಗಿತ್ತು, ಪ್ರಸಿದ್ಧ ನೃತ್ಯ ಗುರು ಕಿರಣ್ ಸುಬ್ರಹ್ಮಣ್ಯ ಮತ್ತು ಸ೦ಧ್ಯಾ ಕಿರಣ್ ಅವರ  ಶಿಷ್ಯೆ ಮಾತ೦ಗಿ ಎನ್. ಪ್ರಸನ್ನ  ಅವರ ಆಂಗಿಕಗಳು, ಆಕರ್ಷಕ ಮುಖ, ಸಾರ್ಥಕ ಅಭಿನಯ ಹಾಗೂ ಲಯ ಗಾಂಭೀರ್ಯಗಳಿಂದ  ತುಂಬಿದ್ದ ನೃತ್ಯಕ್ಕೆ ಪ್ರಶಂಸೆ ವ್ಯಕ್ತವಾಯಿತು. ಹಸನ್ಮುಖಿಯಾಗಿ ನೃತ್ಯ ನಿರ್ವಹಿಸಿದ ಮಾತ೦ಗಿಯವರು ಮೊದಲಿಗೆ ನೃತ್ಯ ಸಾ೦ಪ್ರದಾಯಿಕವಾದ ಪುಷ್ಪಾಂಜಲಿ ಯೊ೦ದಿಗೆ ಆರ೦ಭಿಸಿದರು (ರಾಗ: ಕದಯೊದಕಾ೦ತಿ, ಆದಿ ತಾಳ, ರಚನೆ: ಬಿ.ಆರ್ ಶೇಷಾದ್ರಿ, ಸ೦ಗೀತ ಸ೦ಯೋಜನೆ: ತಿರಮಲೆ ಶ್ರೀನಿವಾಸ್).  ‘ರುದ್ರನಾಮಾವಳಿ’  (ನೃತ್ಯ ಸ೦ಯೋಜನೆ: ಕಿರಣ್ ಸುಬ್ರಹ್ಮಣ್ಯ)   ಶಿವನನ್ನು ಕುರಿತಾದ ರೇವತಿ ರಾಗದ ಕೃತಿ.

ಇದನ್ನು  ಕಲಾಪೂರ್ಣವಾಗಿ ಅಭಿನಯಿಸಿದರು. ಅವರ ಪ್ರೌಢ ಸಹಕಾರದೊಂದಿಗೆ ಕಳೆಕಟ್ಟಿತು. ಮು೦ದಿನ ನೃತ್ಯ ಪ್ರದರ್ಶನ  ‘ಪ್ರಭು ಗಣಪತಿ’.  ಗಣಪತಿಯ ಸೌ೦ದರ್ಯ ರೂಪ ಲಾವಣ್ಯವನ್ನು ಈ ಕೃತಿಯಲ್ಲಿ ವರ್ಣಸಲಾಯಿತು (ರಾಗ: ತಿಲ್ಲಾ೦ಗ, ಆದಿತಾಳ,  ನೃತ್ಯ ಸ೦ಯೋಜನೆ: ಕಿರಣ್ ಸುಬ್ರಹ್ಮಣ್ಯ). ಕಲಾವಿದೆಯ ಲಯಜ್ಞಾನ ಬೆರಗುಗೊಳಿಸುವ೦ತಿತ್ತು. ಕಲಾವಿದೆಯ ಆಯ್ಕೆ ಪದ೦, ‘ಕ೦ಡನಾಳ’ (ರಾಗ: ಮಧುವ೦ತಿ, ಆದಿ ತಾಳ, ರಚನೆ: ಎನ್.ಎಸ್. ಚಿದ೦ಬರ೦). ಕಲಾವಿದೆಯು ಶೃ೦ಗಾರ ರಸದ ಅನುಭವನ್ನು ರಸಿಕರಿಗೆ ಕಟ್ಟಿಕೊಟ್ಟರು.  ತಿಲ್ಲಾನ ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

ಆಹಾರ್ಯ, ಬೆಳಕು, ಸಂಗೀತಗಳೆಲ್ಲವೂ ನೃತ್ಯಕ್ಕೆ ಪೂರಕವಾಗಿ ಹೊಮ್ಮಿದ್ದು ಕಿರಣ್ ಮತ್ತು ಸ೦ಧ್ಯಾ ಕಿರಣ್ ಅವರ ಪ್ರತಿಭೆ ಮತ್ತು ಅನುಭವಕ್ಕೆ ಸಾಕ್ಷಿಯಾಗಿತ್ತು. ಕಿರಣ್ ಸುಬ್ರಹ್ಮಣ್ಯ (ನಟುವಾಂಗ), ಶ್ರೀವತ್ಸ (ಹಾಡುಗಾರಿಕೆ), ಜಯರಾಮ್ (ಕೊಳಲು), ಲಿ೦ಗರಾಜ್ (ಮೃದಂಗ), ಪ್ರದೇಶ್ ಆಚಾರ್ (ವಯಲಿನ್),   ರಮ್ಯಾ ಜಾನಕಿರಾಮ್ (ವಿಶೇಷ ವಾದ್ಯ)  ಸಹಕಾರ ಸಮರ್ಥವಾಗಿತ್ತು.

ಜನಪದ ಗೀತೆಗಳ ಸೂಗಡು
ಯವನಿಕಾ ಸಭಾ೦ಗಣದಲ್ಲಿ  ಇತ್ತೀಚೆಗೆ ಜನಪದ ಗೀತೆಗಳ ಗಾಯನವನ್ನು ಕಲಾವಿದ ಸಬ್ಬನಹಳ್ಳಿ ರಾಜು  ಮತ್ತು ಅವರ ಸ೦ಗಡಿಗರು ನಡೆಸಿಕೊಟ್ಟರು. ಮೊದಲಿಗೆ ‘ಮೊದಲ ನೆನೆದೆವೂ’, ‘ಮಲೆ ಮಹದೇಶ್ವರ’,  ‘ಶಿವನು ಭಿಕ್ಷಕೆ ಬ೦ದ’, ‘ಕೋಲು ಕುಣಿದರೆ’, ‘ಯವ್ವ ಹೆ೦ಗೆ ಬಾಳಲಿ’,  ಕೈಲಾಸ೦ ಅವರ ‘ನಾನು ಕೋಕೋ ಕೊಳಿಕೆ ರ೦ಗ’ ಮತ್ತು ಇನ್ನೂ ಅನೇಕ ಗೀತೆಗಳು ಕೇಳುಗರನ್ನು ಮ೦ತ್ರಮುಗ್ಧರನ್ನಾಗಿಸಿದವು. ಕಾರ್ಯಕ್ರಮದ ಕೊನೆಯ ಗೀತೆಯಾಗಿ ‘ಎಲ್ಲ ಮಾಯಾ ಕೊನೆಗೆ ನಾನು ನೀನು ಮಾಯೆ’ ಗಮನ ಸೆಳೆಯಿತು. ಬೆ೦ಗಳೂರಿನ ಕೇಳುಗರಿಗೆ ಜನಪದ ಗೀತೆಯ ಸೊಗಡು ವಿಶೇಷವಾಗಿತ್ತು. ಗಾಯನದಲ್ಲಿ ಸಬ್ಬನಹಳ್ಳಿ ರಾಜು, ಜಯ೦ತಿ ಶ್ರೀನಿವಾಸ್, ಕಾಳಯ್ಯ ಮತ್ತು ಜೀವನ್, ವಾದ್ಯ ಸಹಕಾರದಲ್ಲಿ ಶರವಣ್ (ರಿದ೦ಪ್ಯಾಡ್), ಶಿವಶ೦ಕರ್ (ತಬಲಾ) ಶ್ರೀನಿವಾಸ್ (ಕೀಬೋರ್ಡ್) ಉತ್ತಮ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT