ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ರಾಜೇಶ್ ಕುಮಾರ್

ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ ಷಿಪ್‌
Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಉತ್ತಮ ಸಾಧನೆ ತೋರಿದ ದೆಹಲಿಯ ರಾಜೇಶ್ ಕುಮಾರ್ ಒಟ್ಟು 612.5 ಕೆ.ಜಿ. ಭಾರ ಎತ್ತಿ ರಾಷ್ಟ್ರೀಯ  ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನ 74 ಕೆ.ಜಿ. ವಿಭಾಗದಲ್ಲಿ ಸುಲಭವಾಗಿ ಚಿನ್ನ ಗೆದ್ದುಕೊಂಡು ಗಮನ ಸೆಳೆದರು.

ನಗರದ ರೇಣುಕಾ ಮಂದಿರದಲ್ಲಿ ನಡೆಯುತ್ತಿರುವ ಈ ಕೂಟದ ಎಡನೇ ದಿನವಾದ ಶನಿವಾರ ರಾಜೇಶ್, ಸ್ಕ್ವಾಟ್ ನಲ್ಲಿ 220 ಕೆ.ಜಿ., ಬೆಂಚ್ ಪ್ರೆಸ್ ನಲ್ಲಿ 160 ಕೆ.ಜಿ ಮತ್ತು ಡೆಡ್ ಲಿಫ್ಟ್ ನಲ್ಲಿ 232 ಕೆ.ಜಿ. ಎತ್ತಿದರು. ಅವರಿಗೆ ಎರಡನೇ ಸ್ಥಾನ ಪಡೆದ ಹರಿಯಾಣದ ಸುನೀಲ್ ಸಿಂಗ್ (ಒಟ್ಟು 497.5 ಕೆ.ಜಿ) ಮತ್ತು ಮೂರನೆಯವರಾದ  ಕರ್ನಾಟಕದ ಭೋಜರಾಜ (480 ಕೆ.ಜಿ) ಅವರಿಂದ ಹೆಚ್ಚೇನೂ ಪೈಪೋಟಿ ಎದುರಾಗಲಿಲ್ಲ.

ಬಿಹಾರದ ವಿಜಯಕುಮಾರ್‌ 66 ಕೆ.ಜಿ. ವಿಭಾಗದಲ್ಲಿ 507.5 ಕೆ.ಜಿ. ಎತ್ತಿ ಸುಲಭವಾಗಿ ಮೊದಲ ಸ್ಥಾನ ಪಡೆದರೆ, ಪೈಪೋಟಿ ಕಂಡುಬಂದ 59 ಕೆ.ಜಿ. ವಿಭಾಗದಲ್ಲಿ ಪವನ್ ಕುಮಾರ್ ಒಟ್ಟು 450 ಕೆ.ಜಿ. ಎತ್ತಿ ಮೊದಲಿಗರಾದರು. ಮಹಾರಾಷ್ಟ್ರದ ಅಮೋಲ್ ಅವಲೆ (432.5) ಮತ್ತು ಛತ್ತೀಸಗಢದ ಸುನೀಲ್ ದೇವಂಗರ್ (422.5 ಕೆ.ಜಿ) ಮೂರನೇ ಸ್ಥಾನ ಪಡೆದರು.

ಫಲಿತಾಂಶ: 59 ಕೆ.ಜಿ ಕ್ಲಾಸ್: ಪವನ್ ಕುಮಾರ್ (ಛತ್ತೀಸಗಡ, ಸ್ಕ್ವಾಟ್ 170, ಬೆಂಚ್ ಪ್ರೆಸ್ 100, ಡೆಡ್ ಲಿಫ್ಟ್ 180, ಒಟ್ಟು 450)–1, ಅಮೋಲ್ ಅವಲೆ (ಮಹಾರಾಷ್ಟ್ರ, ಒಟ್ಟು 432.5)–2, ಸುನೀಲ್ ದೇವಂಗರ್‌ (ಛತ್ತೀಸಗಡ, ಒಟ್ಟು 422.5)–3.

ಮಾಸ್ಟರ್ಸ್ 1 (40 ರಿಂದ 50 ವರ್ಷ): ಸಿದ್ದಾರ್ಥ ಮೇಧೆ (ಮಹಾರಾಷ್ಟ್ರ, ಸ್ಕ್ವಾಟ್ 135, ಬೆಂಚ್ ಪ್ರೆಸ್ 77.5, ಡೆಡ್ ಲಿಫ್ಟ್ 165, ಒಟ್ಟು 377.5)–1, ಬಿನೇಶ್ ಕುಮಾರ್ (ಛತ್ತೀಸಗಡ, ಒಟ್ಟು 285 ಕೆ.ಜಿ)–2; ಮಾಸ್ಟರ್ಸ್ 2 (50ರಿಂದ 59 ವರ್ಷ): ಎ.ಪಿ.ದೀಕ್ಷಿತ್‌ (ಮಹಾರಾಷ್ಟ್ರ, 132.5, 82.5, 150, ಒಟ್ಟು 365)–1, ಲೋಚನ್ ಕೆ.ಆರ್. ಸೋನಿ (ಛತ್ತೀಸಗಡ, ಒಟ್ಟು 185 ಕೆ.ಜಿ)–2. ಮಾಸ್ಟರ್ಸ್ 3 (60 ವರ್ಷ ಮೇಲ್ಪಟ್ಟು): ಬಸಂತಲಾಲ್ (ಛತ್ತೀಸಗಡ, 50, 40, 70, ಒಟ್ಟು 160 ಕೆ.ಜಿ)–1.

66 ಕೆ.ಜಿ ಕ್ಲಾಸ್: ವಿಜಯಕುಮಾರ್ (ಬಿಹಾರ, ಸ್ಕ್ವಾಟ್ 180, ಬೆಂಚ್ ಪ್ರೆಸ್ 127.5, ಡೆಡ್ ಲಿಫ್ಟ್ 200, ಒಟ್ಟು 507.5)–1, ಪಂಕಜ್ ತ್ಯಾಗಿ (ದೆಹಲಿ, ಒಟ್ಟು 472.5)–2, ನವೀನ್ ಕುಮಾರ್ (ದೆಹಲಿ, ಒಟ್ಟು 447.5 ಕೆ.ಜಿ)–3.

ಮಾಸ್ಟರ್ಸ್ 1: ರಾಜೇಶ್ ಕ್ಷತ್ರಿಯ (ಛತ್ತೀಸಗಡ, ಒಟ್ಟು 390 ಕೆ.ಜಿ)–1, ರಂಜಿತ್ ಸಿಂಗ್ ಥಾಕೂರ್ (ಛತ್ತೀಸಗಡ, ಒಟ್ಟು 377.5)–2; ಮಾಸ್ಟರ್ಸ್ 2: ದಿಲೀಪ್ ಕರ್ಕಡೆ (ಮಹಾರಾಷ್ಟ್ರ, ಒಟ್ಟು 332.5 ಕೆ.ಜಿ)–1, ಘೊಣ್ಣೂರ ಸಾಬ್ ನಿಯಾಝಿ (ಕರ್ನಾಟಕ, ಒಟ್ಟು 235)–2; ಮಾಸ್ಟರ್ಸ್ 3: ಬಿ.ಡಿ.ನಗರಕರ್ (ಮಹಾರಾಷ್ಟ್ರ, ಒಟ್ಟು 245 ಕೆ.ಜಿ)–1, ಎಲ್.ವಿಜಯಕುಮಾರ್ (ತಮಿಳುನಾಡು, ಒಟ್ಟು 225)–2.
74 ಕೆ.ಜಿ.ಕ್ಲಾಸ್: ರಾಜೇಶ್ ಕುಮಾರ್ (ದೆಹಲಿ, ಸ್ಕ್ವಾಟ್ 220, ಬೆಂಚ್ ಪ್ರೆಸ್ 160, ಡೆಡ್ ಲಿಫ್ಟ್ 180, ಒಟ್ಟು 612.5)–1, ಸುನೀಲ್ ಸಿಂಗ್ (ಹರಿಯಾಣ, ಒಟ್ಟು 497.5 ಕೆ.ಜಿ)–2, ಭೋಜರಾಜ ಬಿ. (ಕರ್ನಾಟಕ, ಒಟ್ಟು 480 ಕೆ.ಜಿ)–3.

ಮಾಸ್ಟರ್ಸ್ 1: ಕೃಷ್ಣಮೂರ್ತಿ (ಛತ್ತೀಸಗಡ, ಒಟ್ಟು 475 ಕೆ.ಜಿ)–1, ಸಿ.ಕೆ.ಸೆಲ್ವಿನ್ ಕುಮಾರ್ (ಮಹಾರಾಷ್ಟ್ರ, ಒಟ್ಟು 452.5)–2, ಎ.ಚಂದ್ರಪ್ಪ (ಕರ್ನಾಟಕ, ಒಟ್ಟು 440 ಕೆ.ಜಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT