ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ರಾಯನ್‌ ಮಿನಿಥಾನ್‌

Last Updated 5 ಜನವರಿ 2014, 20:03 IST
ಅಕ್ಷರ ಗಾತ್ರ

ಯಲಹಂಕ: ಇಲ್ಲಿನ ರಾಯನ್‌ ಇಂಟರ್‌ ನ್ಯಾಷನಲ್‌ ಶಾಲೆಯ ವತಿಯಿಂದ 109ನೇ ‘ರಾಯನ್‌ ಮಿನಿಥಾನ್‌’ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ರಾಯನ್‌ ಇಂಟರ್‌ ನ್ಯಾಷನಲ್‌ ಶಾಲೆಯ ಸಂಸ್ಥಾಪನಾ ಅಧ್ಯಕ್ಷ ಡಾ.ಅಗಸ್ಟಿನ್‌ ಎಫ್‌. ಪಿಂಟೊ, ಕಳೆದ 15 ವರ್ಷಗಳಿಂದ ಈ ಸ್ಪರ್ಧೆ ತಪ್ಪದೇ ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಮೂಡಿಸಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ನೆರವು ನೀಡಲು ಈ ಸ್ಪರ್ಧೆಯಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.

ಒಟ್ಟು ಐದು ವಿಭಾಗಗಳಲ್ಲಿ 12 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗ (2 ಕಿ.ಮೀ), 14 ವರ್ಷದೊಳಗಿನ ಬಾಲಕರ (3 ಕಿ.ಮೀ) ಮತ್ತು 16 ವರ್ಷದೊಳಗಿನ ಬಾಲಕರ (4 ಕಿ.ಮೀ)ಹಾಗೂ ಬಾಲಕಿಯರ ವಿಭಾಗದಲ್ಲಿ(3 ಕಿ.ಮೀ) ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ  26 ಶಾಲೆಗಳ ಸುಮಾರು 4,500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಯನ್‌ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ನಿಯಂತ್ರಣಾಧಿಕಾರಿ ನೇತೇಶ್‌ ಶ್ರೀನಿವಾಸನ್‌, ವಾಲಿಬಾಲ್‌ ಮತ್ತು ಥ್ರೋಬಾಲ್‌ ಕ್ರೀಡೆಯ ರಾಷ್ಟ್ರೀಯ ರೆಫರಿ ಸುಂದರ್‌ರಾಜ್‌, ಕ್ರಿಕೆಟ್‌ ಆಟಗಾರರಾದ ಯರೇಗೌಡ, ಸುಧೀರ್‌, 14 ವರ್ಷದೊಳಗಿನ ರಾಷ್ಟ್ರೀಯ ಹಾಕಿ ಆಟಗಾರ ಆರ್‌.ಜೋಸೆಫ್‌ ಹಾಜರಿದ್ದರು.

ಬಹುಮಾನ: ರಾಯನ್‌ ಇಂಟರ್‌ ನ್ಯಾಷನಲ್‌ ಶಾಲೆ (ಯಲಹಂಕ) ಮೊದಲ ಬಹುಮಾನ, ರಾಯನ್‌ ಇಂಟರ್‌ ನ್ಯಾಷನಲ್‌ ಶಾಲೆ (ಕುಂದನಹಳ್ಳಿ) 2ನೇ ಹಾಗೂ ಡೆಲ್ಲಿ ಪಬ್ಲಿಕ್‌ ಶಾಲೆ 3ನೇ ಬಹುಮಾನ ಪಡೆಯಿತು.

ಯಲಹಂಕದ ರಾಯನ್‌ ಇಂಟರ್‌ ನ್ಯಾಷನಲ್‌ ಶಾಲೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಪ್ರತಿ ವಿಭಾಗದಲ್ಲಿ ವಿಜೇತರಾದ ಮೊದಲ 6 ವಿದ್ಯಾರ್ಥಿಗಳಿಗೆ 30 ಸಾವಿರ ನಗದು ಮತ್ತು ಪ್ರಶಸ್ತಿಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT