ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಾರಿ ಮೆಣಸು

Last Updated 22 ಜೂನ್ 2011, 19:30 IST
ಅಕ್ಷರ ಗಾತ್ರ

ಮೆಣಸಿನ ಕಾಯಿಗಳಲ್ಲಿ ಹಲವಾರು ತಳಿಗಳಿವೆ. ಕೆಲವು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿವೆ. ಮೆಣಸಿನ ಕಾಯಿ ನಿತ್ಯದ ಅಡುಗೆಯಲ್ಲಿ ಬಳಕೆಯಾಗುವ ಜನಪ್ರಿಯ ತರಕಾರಿ. ಹೀಗಾಗಿ ಮೆಣಸಿನಕಾಯಿ ಸದಾ ಬೇಡಿಕೆ ಇರುತ್ತದೆ.

ಚಿತ್ರದಲ್ಲಿ ಕಾಣುವ ಮೆಣಸಿನ ಕಾಯಿ ಗಾತ್ರದಲ್ಲಿ ತುಂಬಾ ಚಿಕ್ಕದು. ಇದಕ್ಕೆ ಲವಂಗ ಮೆಣಸು ಎಂಬ ಹೆಸರಿದೆ. ಆದರೆ ಇದು ಬಹಳ ಖಾರ. ಮಲೆನಾಡಿನಲ್ಲಿ ಇದನ್ನು `ಗಾಂಧಾರಿ ಮೆಣಸು~ ಎಂಬ ಹೆಸರಿನಿಂದ ಕರೆಯುತ್ತಾರೆ.

ಮಾಂಸಾಹಾರಿ ಖಾದ್ಯಗಳ ತಯಾರಿಕೆಯಲ್ಲಿ ಇವನ್ನು ಹೆಚ್ಚಾಗಿ ಬಳಸುತ್ತಾರೆ. ಮಲೆನಾಡಿನ ರೈತರ ಹಿತ್ತಲುಗಳಲ್ಲಿ ಈ ಮೆಣಸಿನ ಗಿಡ ಇದ್ದೇ ಇರುತ್ತದೆ. ಹೆಚ್ಚು ಖಾರವಿರುವ ಈ ಮೆಣಸನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಪ್ರಯತ್ನಗಳು ನಡೆಯುತ್ತಿಲ್ಲ.

ಈ ತಳಿಯ ಮೆಣಸಿನ ಗಿಡಗಳ ಪೋಷಣೆಗೆ ಹೆಚ್ಚು ಶ್ರಮ ಪಡಬೇಕಿಲ್ಲ. ಹಣ್ಣಾದ ಕಾಯಿಗಳು ನೆಲಕ್ಕೆ ಬಿದ್ದು ಸಹಜವಾಗಿ ಸಸಿಗಳು ಹುಟ್ಟಿಕೊಳ್ಳುತ್ತವೆ. ನಗರ ಹಾಗೂ ಪಟ್ಟಣಗಳ ಜನರು ಕುಂಡಗಳಲ್ಲಿ ಒಂದೆರಡು ಗಿಡಗಳನ್ನು ಬೆಳೆಸಿದರೂ ಸಾಕು. ನಿತ್ಯ ಐದಾರು ಕಾಯಿಗಳನ್ನು ಅಡುಗೆಯಲ್ಲಿ ಬಳಸಬಹುದು. ಮೆಣಸಿನ ಕಾಯಿ ಕೊಂಡು ತರುವ ಅಗತ್ಯ ಬೀಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT