ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ತತ್ವ ರಾಜಕೀಯಕ್ಕೆ ಅವಶ್ಯಕ

Last Updated 3 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಮೂಡಿಗೆರೆ: ದೇಶವನ್ನು  ಪ್ರಗತಿಯತ್ತ ಕೊಂಡೊಯ್ಯಲು ಮಹಾತ್ಮ ಗಾಂಧೀಜಿ ಅವರ ತತ್ವಗಳು ಅವಶ್ಯಕ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಜೀವನಾಡಿಯಾದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕು ಎಂದು ಗಾಂಧೀಜಿ ಕನಸು ಕಂಡಿದ್ದರು. ಆದರೆ ಇಂದು ಬಹಳಷ್ಟು ಗ್ರಾಮಗಳು ಅಭಿವೃದ್ಧಿ ಹೊಂದಿಲ್ಲ. ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ಆದರ್ಶ ಬದುಕಿನ ಬಗ್ಗೆ ತಿಳಿಸ ಬೇಕು. ಸಮಾಜದಲ್ಲಿ ದಿನ ನಿತ್ಯ ನಡೆಯುವ ಸತ್ಯ, ಅಹಿಂಸೆಯ ಘಟನೆಗಳನ್ನು ವಿವರಿಸಿ ಅವುಗಳತ್ತ ಒಲವು ಮೂಡಸಬೇಕು ಎಂದರು.

ಸಾಹಿತಿ ಹಳೆಕೋಟೆ ರಮೇಶ್ ಮಾತನಾಡಿ, ಪ್ರಾಮಾಣಿಕತೆ ಎಂಬುದು ಸರ್ಕಾರಿ ಕಚೇರಿಗಳಲ್ಲಿ ಮಾಯವಾಗುತ್ತಿರುವುದು ಈ ದೇಶದ ದುರಂತ ಗಾಂಧಿವಾದಿ  ಡಿ.ಬಿ. ಸುಬ್ಬೇಗೌಡ ಮಾತನಾಡಿ ಸ್ವಾತಂತ್ರ್ಯ ಬಂದಾಗ ದೇಶದ ಅಭಿವೃದ್ಧಿಗಾಗಿ ಹಲ ವಾರು ವ್ಯಕ್ತಿಗಳು ತಮ್ಮ  ಜೀವನವನ್ನೆ ಮುಡು ಪಾಗಿಟ್ಟಿದ್ದರು.
ಅದ್ದರಿಂದಲೇ ಇಂದು ವೈವಿಧ್ಯಮಯ ಭಾರತಸಹಬಾಳ್ವೆಯ ತತ್ವದಲ್ಲಿ ಒಂದು ಗೂಡಿಸಲಾಗಿದೆ ಎಂದರು. 

ಸಮಾರಂಭದಲಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲತಾಲಕ್ಷ್ಮಣ್, ತಾಪಂ ಸದಸ್ಯ ಸಬ್ಲಿ ದೇವರಾಜು, ತಹಶೀಲ್ದಾರ್ ಮಂಜುನಾಥ್, ಉಪ ತಹಶೀಲ್ದಾರ್ ಮುನೀರ್, ರಕ್ಷಣಾ ವೇದಿಕೆಯ ಪ್ರಸನ್ನ, ಅಧಿಕಾರಿಗಳಾದ ನಾರಾಯಣ ಮಲ್ಯ, ಸುದರ್ಶನ್, ಗಂಗಾಧರ್, ವಿವಿಧ ಸಂಘಟನೆಯ ಪದಾಧಿಕಾರಿಗಳಾದ ರಮೇಶ್ ಆಚಾರ್ಯ, ಅಣ್ಣಾನಾಯಕ್, ಮುಂತಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT