ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಹೋರಾಟಕ್ಕೆ ಶರಣರೇ ಸ್ಫೂರ್ತಿ

Last Updated 3 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹ ಯೋಗದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 142ನೇ ಜಯಂತಿ ಯನ್ನು ಭಾನುವಾರ ಆಚರಿಸಲಾ ಯಿತು.ಜಿಪಂ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಚ್. ಜಿ. ಶ್ರೀವರ ಹಾಗೂ ಜಿಪಂ ಸಿಇಒ ಉಮೇಶ ಕುಸುಗಲ್ಲ ಮತ್ತಿತರ ಅಧಿ ಕಾರಿಗಳು ಮಹಾತ್ಮಾ ಗಾಂಧಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ನಂತರ ಭಾಗ್ಯವತಿ ಕೋಡಬಾಳ ಮತ್ತು ಸಂಗಡಿಗರು ಸರ್ವಧರ್ಮ ಪ್ರಾರ್ಥನೆ ಹಾಗೂ ಗಾಂಧೀಜಿಗೆ ಪ್ರಿಯವಾದ `ರಾಮಧುನ್~ `ಈಶ್ವರ ಜನತೋ~ ಭಜನೆಗಳನ್ನು ಪ್ರಸ್ತುತಪಡಿಸಿ ದರು.

ಈ ಸಂದರ್ಭದಲ್ಲಿ ನಮ್ರತಾ ಗೊಲ್ಲರ ಅವರಿಂದ ಬೈಬಲ್, ಪಲ್ಲವಿ ಗೊಲ್ಲರ ಅವರಿಂದ ಭಗವದ್ಗೀತೆ, ಬಂಕಾಪುರದ ಹೀನಾ ಕೌಸರ್ ಅವರಿಂದ ಕುರಾನ್ ಪಠಣ ಹಾಗೂ ರಾಣಿ ಡಿ.ಜಿ. ಅವರಿಂದ ಬೌದ್ಧ ಮತ್ತು ಸವಿತಾ ಡಿ.ಜಿ. ಅವರಿಂದ ಜೈನ ಧರ್ಮ ಸ್ತ್ರೋತ್ರಗಳ ಪಠಣ ನಡೆಯಿತು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ಅಪರ ಜಿಲ್ಲಾಧಿ ಕಾರಿ ಜಿ. ಜಗದೀಶ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಸನಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ. ಹನುಮಂತಪ್ಪ, ಮುಖ್ಯ ಲೆಕ್ಕಾಧಿಕಾರಿ ಕೃಷ್ಣಾ ಬುಗಟ್ಯಾಗೋಳ ಹಾಗೂ ಉಪಕಾರ್ಯದರ್ಶಿ ಎ.ಟಿ. ಜಯಕುಮಾರ ಮತ್ತು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು,ವಿವಿಧ  ಇಲಾಖೆ ಸಿಬ್ಬಂದಿ  ಪಾಲ್ಗೊಂಡಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿ, ವಂದಿಸಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ, ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿ.ಪಂ.ಅಧ್ಯಕ್ಷ ಮಂಜುನಾಥ ಕೊಣ್ಣೂರ ಅವರು ಗಾಂಧಿ ಹಾಗೂ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಾಡಹಬ್ಬದಲ್ಲಿ ಗಾಂಧಿ ಜಯಂತಿ:
ಜಿಲ್ಲಾ ಗುರುಭವನದಲ್ಲಿ ನಡೆದ ನಾಡ ಹಬ್ಬದ ಬೆಳಗಿನ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್‌ಬಹುದ್ದೂರ ಶಾಸ್ತ್ರಿ ಅವರ ಜನ್ಮ ದಿನದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.

ಸಂವಾದಕ್ಕೆ ಚಾಲನೆ ನೀಡಿದ ಶಿವಲಿಂಗೇಶ್ವರ ಡಿ.ಎಡ್. ಕಾಲೇಜಿನ ಪ್ರಾಚಾರ್ಯ ಬಿ. ಬಸವರಾಜ ಮಾತ ನಾಡಿ, ಬಸವಣ್ಣವರ ಕಾಲದಿಂದ ಸಮಾನತೆ ಮತ್ತು ಸ್ವಸ್ಥ ಸಮಾಜಕ್ಕಾಗಿ ಹೋರಾಟಗಳು ನಡೆದಿವೆ. ಗಾಂಧಿ, ಶಾಸ್ತ್ರೀ ಹಾಗೂ ಅಣ್ಣಾ ಹಜಾರೆ ಯವರ ಹೋರಾಟಗಳು ಅವುಗಳ ಮುಂದುವರೆದ ಭಾಗವಾಗಿವೆ ಎಂದು ಅಭಿಪ್ರಾಯಪಟ್ಟರು.

ಡಾ. ಶಿವಾನಂದ ಕೆಂಬಾವಿ ಮಾತ ನಾಡಿ, ಅನ್ಯಾಯದ ವಿರುದ್ಧ ಸಾತ್ವಿಕ ದಾರಿಯಿಂದ ಅಹಿಂಸಾ ಮಾರ್ಗದಲ್ಲಿ ನಡೆದಾಗ ಯಾವ ಕಾಲಕ್ಕೂ ಜಯ ಸಿಗುತ್ತದೆ ಎಂಬುದಕ್ಕೆ ಗಾಂಧಿ ಮತ್ತು ಅಣ್ಣಾಹಜಾರೆ ಉದಾಹರಣೆಯಾ ಗಿದ್ದಾರೆ ಎಂದು ಹೇಳಿದರು.

ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷರಾದ ಶಿವಬಸಪ್ಪ ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಪ್ರಕಾಶ ಜೈನ್,  ಎಸ್. ಆರ್. ಹಿರೇಮಠ, ವಿರೂಪಾಕ್ಷ ಹಾವನೂರ, ಮಾಲತೇಶ ದೇಶಪಾಂಡೆ, ಡಾ. ಮುದೇನೂರ ನಿಂಗಪ್ಪ, ಪ್ರಾ.ಆಂಜ ನಪ್ಪ, ಸಿ. ಎ. ಕೂಡಲಮಠ, ಸಿ. ಎಚ್. ಬಾರ್ಕಿ, ವಿ.ಎಂ.ಪತ್ರಿ, ಶಿವಯೋಗಿ ಮರಡೂರ, ಪರಿಮಳಾ ಜೈನ, ರೇಣುಕಾ ಗುಡಿಮನಿ, ಕೆ.ಎಂ. ಹೂಗಾರ, ರಘುನಾಥ ಬಾಣಿಕೋಲ, ಕೆ. ಎಚ್. ಹಂಚಿನಮನಿ ಮುಂತಾ ದವರು ಹಾಜರಿದ್ದರು.

ಆರ್. ಎಸ್. ಚೌಶೆಟ್ಟಿ ಸ್ವಾಗತಿಸಿ ದರು. ಕೃಷ್ಣಾ ಜವಳಿ ನಡೆಸಿದರು. ಮುಖ್ಯೋಪಾಧ್ಯಾಯ ಜೆ.ಎಸ್. ಬಣಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT