ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ತತ್ವ, ಆದರ್ಶ ಪಾಲನೆ ಅಗತ್ಯ

Last Updated 3 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ಚನ್ನಗಿರಿ: ಇಡೀ ಪ್ರಪಂಚದಲ್ಲಿ ಮಹಾತ್ಮಾ ಎಂದೆನಿಸಿಕೊಂಡವರು ಗಾಂಧೀಜಿ ಅವರೊಬ್ಬರೇ. ಈ ಆದರ್ಶ ಪುರುಷರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಕಿಂಚಿತ್ತಾದರೂ ಅಳವಡಿಸಿಕೊಂಡರೆ ನಾವು ಅವರಿಗೆ ಸಲ್ಲಿಸಿದ ಗೌರವವಾಗುತ್ತದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ 144 ನೇ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ತಾಲ್ಲೂಕಿನಲ್ಲಿ ವಾಲ್ಮೀಕಿ ಸಮಾಜದ ಭವನದ ನಿರ್ಮಾಣಕ್ಕೆ ್ಙ 1 ಕೋಟಿ, ಬಾಬು ಜಗಜೀವನ್‌ರಾಂ ಅವರ ಭವನಕ್ಕೆ ್ಙ 1 ಕೋಟಿ ಹಾಗೂ ಮಿನಿ ವಿಧಾನಸೌಧದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ್ಙ 85 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಓ.ಎಸ್. ನಾಗರಾಜ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ರೆಹಮತ್ ಉಲ್ಲಾ ಖಾನ್, ಸ್ಥಾತಿ ಸಮಿತಿ ಅಧ್ಯಕ್ಷ ರಾಜು ಕರಡೇರ್, ಸದಸ್ಯರಾದ ಡಿ. ಚಿಕ್ಕಪ್ಪ, ಎಂ.ಬಿ. ರಾಜಪ್ಪ, ಕೆ.ಪಿ.ಎಂ. ಶಿವಲಿಂಗಯ್ಯ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸರೋಜಮ್ಮ, ಬಿಇಒ ಜಿ.ಆರ್. ತಿಪ್ಪೇಶಪ್ಪ ಉಪಸ್ಥಿತರಿದ್ದರು.

ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಸ್ವಾಗತಿಸಿದರು. ಸಿಡಿಪಿಒ ಎ.ಜಿ. ಶಿವಪ್ರಕಾಶ್ ವಂದಿಸಿದರು.

`ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ~
ಹೊನ್ನಾಳಿ: ಮಹಾತ್ಮಾ ಗಾಂಧಿ ಅವರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸಬಹುದಾದ ಬಹು ದೊಡ್ಡ ಶ್ರದ್ಧಾಂಜಲಿ ಎಂದು ತಾಲ್ಲೂಕು ಪಂಚಾಯ್ತಿ ಇಒ ಎಚ್. ಹುಲಿರಾಜ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ  ನಡೆದ ಮಹಾತ್ಮಾ ಗಾಂಧಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭರ್ಮಪ್ಪ ಮೈಸೂರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪ್ರಾತಃಸ್ಮರಣೀಯರ ಪೈಕಿ ಗಾಂಧಿ ಅಗ್ರಗಣ್ಯರು. ಅವರ ಸರಳ ಜೀವನ ನಮಗೆಲ್ಲಾ ದಾರಿದೀಪ ಆಗಲಿ ಎಂದರು.
ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು. ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಗಾಂಧಿ ಭಜನ್ ಹಾಡಿ ಗಮನಸೆಳೆದರು.

ರೋಗಿಗಳಿಗೆ ಬಂಪರ್!

ಹೊನ್ನಾಳಿ: ಅ. 2ರ ಮಂಗಳವಾರ ಎಲ್ಲೆಡೆ ಮಹಾತ್ಮಾ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್ ವಿತರಿಸುತ್ತವೆ.

ಪಟ್ಟಣ ಪಂಚಾಯ್ತಿ ವತಿಯಿಂದ ಮೊದಲು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್ ವಿತರಿಸಲಾಯಿತು. ನಂತರ ಪಟ್ಟಣದ ಅಬ್ದುಲ್ ಕಲಾಂ ಮುಸ್ಲಿಮ್ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್ ವಿತರಿಸಲಾಯಿತು.

ನಂತರದ ಸರದಿ ಎನ್‌ಎಸ್‌ಯುಐನದು. ಎನ್‌ಎಸ್‌ಯು ವತಿಯಿಂದ ನಡೆದ ಗಾಂಧಿ ಜಯಂತ್ಯುತ್ಸವ ಸಮಾರಂಭದ ನಂತರ ಕಾಂಗ್ರೆಸ್ ಮುಖಂಡರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್ ವಿತರಿಸಿದರು. ಇನ್ನು ಕೆಲವರು ಪತ್ರಿಕಾ ಪ್ರತಿನಿಧಿಗಳನ್ನು ಆಹ್ವಾನಿಸದೆಯೇ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್ ವಿತರಿಸಿದ್ದಾರೆ.

ಹೀಗೆ, ವಿವಿಧ ಸಂಘಟನೆಗಳ ಪ್ರಮುಖರು ನಾ ಮುಂದು, ತಾ ಮುಂದು ಎಂಬಂತೆ ಮಂಗಳವಾರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿ ಯೋಗಕ್ಷೇಮ ವಿಚಾರಿಸಿದರು. ಗಾಂಧಿ, ಶಾಸ್ತ್ರಿ ಜಯಂತಿ

ಎಬಿವಿಪಿ: ದೇಶ ಕಂಡ ಅಪ್ರತಿಮ ನಾಯಕರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಕೂಡಾ ಒಬ್ಬರು ಎಂದು ಎಬಿವಿಪಿ ಘಟಕದ ತಾಲ್ಲೂಕು ಸಂಚಾಲಕ ವಸಂತ್ ಗುಡ್ಡಜ್ಜಿ ಹೇಳಿದರು.

ಪಟ್ಟಣದಲ್ಲಿ ಎಬಿವಿಪಿ ಮತ್ತು ಜಾಗೃತ ವಿದ್ಯಾರ್ಥಿ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗಾಂಧಿ ಮತ್ತು ಶಾಸ್ತ್ರಿ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾಗೃತ ವಿದ್ಯಾರ್ಥಿ ವೇದಿಕೆ ಮುಖಂಡ ಫಜಲ್ ಅಹಮ್ಮದ್, ವಿದ್ಯಾರ್ಥಿ ಮುಖಂಡರಾದ ಶ್ರೀಧರ್, ಬಾಷಾ, ಹನುಮಂತಪ್ಪ, ಅಜಿತ್‌ಕುಮಾರ್, ಪೂಜಾ, ಹರೀಶ್, ಮಂಜುನಾಥ್ ಇದ್ದರು.

ಹಾಲು-ಹಣ್ಣು
ಹರಪನಹಳ್ಳಿ: ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಪಟ್ಟಣದ ವಾಲ್ಮೀಕಿ ನಗರದ ಯುವಕರು ಮಂಗಳವಾರ ಸ್ಥಳೀಯ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸುವ ಮೂಲಕ ಹಿರಿಯ ಚೇತನಗಳ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

ಹಿರಿಯ ಮುಖಂಡರಾದ ಪಟ್ನಾಮದ ನಾಗರಾಜ, ಹನುಮಂತಪ್ಪ, ನಿಟ್ಟೂರು ತಿಮ್ಮಣ್ಣ, ಎಚ್.ಬಿ. ಮರಿಕೆಂಚಪ್ಪ, ಜಿ. ಅಂಜಿನಪ್ಪ, ಯುವ ಮುಖಂಡರಾದ ಪಟ್ನಾಮದ ವೆಂಕಟೇಶ, ಕರಿಬಸವರಾಜ, ಗೋವಿಂದರಾಜ, ರಮೇಶ, ಹನುಮಂತಪ್ಪ, ಮಾರುತಿ, ವೀರೇಶ, ಕೃಷ್ಣ, ತಿರುಪತಿ ಪಾಲ್ಗೊಂಡಿದ್ದರು.

ಶ್ರಮದಾನ

ನ್ಯಾಮತಿ: ಗ್ರಾಮದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಗಾಂಧಿ ಜಯಂತಿ ನಿಮಿತ್ತ ವಿದ್ಯಾರ್ಥಿಗಳು ಶ್ರಮದಾನ ನಡೆಸಿದರು.

ಗ್ರಾಮದೇವತೆ ಮಾರಿಕಾಂಬ ಗದ್ದಿಗೆಯ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದು, ಹುಳ ಹುಪ್ಪಡಿಗಳ ಸಂಚಾರದಿಂದ ಸಾರ್ವಜನಿಕರು ಆತಂಕಗೊಂಡಿರುವ ಬಗ್ಗೆ  `ಪ್ರಜಾವಾಣಿ~ ಕುಂದುಕೊರತೆ ವಿಭಾಗದಲ್ಲಿ ಪ್ರಕಟಗೊಂಡಿದ್ದನ್ನು ಗಮನಿಸಿ ಈ ಸ್ಥಳವನ್ನು ಸ್ವಚ್ಚತೆಗೊಳಿಸಲು ಶ್ರಮದಾನ ನಡೆಸಲಾಯಿತು ಎಂದು ಪ್ರಾಂಶುಪಾಲ ಕೆ. ದೇವೇಂದ್ರಪ್ಪ ತಿಳಿಸಿದರು.

ಎನ್‌ಎಸ್‌ಎಸ್ ಘಟಕಾಧಿಕಾರಿ ಕೆ. ಪ್ರಶಾಂತ, ಉಪನ್ಯಾಸಕರಾದ ಗಂಗಾಧರ ನವಲೆ, ಭೀಮಪ್ಪ, ಪೂರ್ಣಾನಂದ, ಪೃಥ್ವಿ ಪರಿಸರ ಸಂಘದ ಅಧ್ಯಕ್ಷ ಆರುಂಡಿ ಹಂಪಣ್ಣ, ಸಿಡಿಸಿ ಅಧ್ಯಕ್ಷ ಎಂ. ಕೃಷ್ಣಾಚಾರ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಮುಂದೂಡಿಕೆ
ನ್ಯಾಮತಿ: ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅವರ ಸಚಿವ ಸಂಪುಟದ ಕೆಲವು ಸಚಿವರು ಅ. 8ರಂದು ನ್ಯಾಮತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬರಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ.

ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ಅ. 8ರಂದು ದೆಹಲಿಯಲ್ಲಿ ನಡೆಯಲಿರುವ ಕಾವೇರಿ ಪ್ರಾಧಿಕಾರದ ಸಭೆಗೆ ಮುಖ್ಯಮಂತ್ರಿ ತೆರಳುತ್ತಿರುವುದರಿಂದ ಗ್ರಾಮದಲ್ಲಿ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT