ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ತತ್ವ-ಆದರ್ಶ ಪಾಲನೆಗೆ ಕರೆ

Last Updated 3 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆ ಹಾಗೂ ಆದರ್ಶಗಳ್ಲ್ಲಲಿ ಕೆಲವನ್ನಾದರೂ ಜೀವನದ್ಲ್ಲಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಯುವಪೀಳಿಗೆಗೆ ಗಾಂಧೀಜಿ ಅವರ ತತ್ವ ಆದರ್ಶ, ಅವರ ಬದುಕು, ಹೋರಾಟ ಜೀವನದ ಸಮಗ್ರ ಚಿತ್ರಣವನ್ನು ಪರಿಚಯಿಸಬೇಕಾದ ಅಗತ್ಯವಿದೆ. ಪ್ರಸ್ತುತ ಅಭಿವೃದ್ಧಿ ಮತ್ತು ತಾಂತ್ರಿಕ ಬೆಳವಣಿಗೆಯ ಈ ಸಂದರ್ಭದಲ್ಲಿ ಗಾಂಧೀಜಿ ಅವರ ಆದರ್ಶ, ತತ್ವಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ನುಡಿದರು.

ಇದೇ ಸಂದರ್ಭ ರಾಜ್ಯ ವಾರ್ತಾ ಇಲಾಖೆ ಹೊರತಂದಿರುವ `ಬಾಪು ನೆನಪು~ ಗಾಂಧಿ ವಿಶೇಷಾಂಕ ಜನಪದ ಪುಸ್ತಿಕೆ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಪ್ರಕಟಿಸಿರುವ `ಮದ್ಯಪಾನದ ವಿರುದ್ಧ ಮಹಾತ್ಮಗಾಂಧಿ~ ಪ್ರಕಟಣೆಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

ಭಜನೆ ಮತ್ತು ದೇಶಭಕ್ತಿ ಗಾಯನವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಜತೆಗೆ ಹಿಂದೂ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗ್ರಂಥಗಳ ಪ್ರಮುಖ ವಾಕ್ಯಗಳ ಸಂದೇಶ ಪಠಣ ಮಾಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ ಸ್ವಾಗತಿಸಿದರು. ಕೆ. ವೆಂಕಣ್ಣಾಚಾರ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್. ಚಿದಾನಂದಪ್ಪ, ಪ್ರೊಬೇಷನ್ ಐಎಎಸ್ ಅಧಿಕಾರಿ ಕೂರ್ಮಾರಾವ್ ಭಾಗವಹಿಸಿದ್ದರು. ಉಪ ವಿಭಾಗಾಧಿಕಾರಿ ನಾಗರಾಜ್ ವಂದಿಸಿದರು.

ಹಿರಿಯೂರು ವರದಿ
ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಗಾಂಧಿ ಜಯಂತಿಆಚರಿಸಲಾಯಿತು.
ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ಸಲ್ಲಿಸಿದ ಸೇವೆ, ಅಳವಡಿಸಿಕೊಂಡಿದ್ದ ನೈತಿಕತೆ, ಪ್ರಾಮಾಣಿಕತೆ ಇಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದರು.

ತಾಲ್ಲೂಕು ಮಡಿವಾಳರ ಸಂಘ ಹಾಗೂ ಮಡಿವಾಳ ಯುವ ವೇದಿಕೆ ಆಶ್ರಯದಲ್ಲಿ ಮಂಗಳವಾರ ಗಾಂಧಿ ಜಯಂತಿ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು-ಹಣ್ಣು ವಿತರಿಸಲಾಯಿತು.

ಸತೀಶ್, ವೆಂಕಟೇಶ್, ರಂಗನಾಥ್, ಮಂಜುನಾಥ್, ತಿಪ್ಪೇಸ್ವಾಮಿ, ಜಗದೀಶ್, ಭೀಮಣ್ಣ, ಭೈರೇಶ್‌ಕುಮಾರ್, ಸುರೇಶ್, ಸಾಗರ್, ಭೋಜರಾಜ್, ಮಹಾಂತೇಶ ಇದ್ದರು.

ತಾಹಾ ಗ್ರೂಪ್‌ವಿದ್ಯಾ ಸಂಸ್ಥೆ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ನವಾಬ್‌ಸಾಬ್ ಮಾತನಾಡಿದರು.

ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್, ಕೆ.ಆರ್. ವೆಂಕಟೇಶ್, ಜಬೀವುಲ್ಲಾ, ಪಿ.ಎಸ್. ಸಾದತ್‌ಉಲ್ಲಾ, ಮೊಹಮ್ಮದ್ ನಯಾಜ್ ಅಹಮದ್, ಮೊಹಮದ್ ತಹಾ ಫೈರೋಜ್, ಪಿ.ಎಂ. ಸಿಗ್‌ಬತ್ ಉಲ್ಲಾಷರೀಫ್, ಜಿ. ದಾದಾಪೀರ್, ಸಯದ್ ನಾಸೀರ್ ಉದ್ದೀನ್, ಕಿರಣ್ ಮಿರಜ್ಕರ್, ರವೀಂದ್ರನಾಥ್ ಇದ್ದರು.

ಸರ್ವಧರ್ಮ ಗ್ರಂಥಗಳ ಪಠಣ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿನಿ ಅಮೃತಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಫಲಾಕ್ ನಾಜ್ ಕಾರ್ಯಕ್ರಮ ನಿರೂಪಿಸಿದರು.

ಗಿರೀಶ ವಿದ್ಯಾಸಂಸ್ಥೆ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಟಿ. ತ್ರಿಯಂಭಕ ಮೂರ್ತಿ, ಪ್ರಾಂಶುಪಾಲ ವಿ.ಟಿ. ಮಂಜುನಾಥ್, ಉಪ ಪ್ರಾಂಶುಪಾಲ ಎಚ್.ಆರ್. ತಿಪ್ಪೇಸ್ವಾಮಿ, ಶಿಕ್ಷಕರಾದ ನರೇಂದ್ರ, ಬಸವರಾಜ್, ಜಿ.ಎಸ್. ಚನ್ನಬಸವಯ್ಯ ಮಾತನಾಡಿದರು. ಅಮೃತೇಶ್ವರ್ ವಂದಿಸಿದರು.

ಇನ್ನರ್‌ವ್ಹೀಲ್ ಕ್ಲಬ್: ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ಗಾಂಧಿಜಯಂತಿ ಪ್ರಯುಕ್ತ ಈಚೆಗೆ ವಿದ್ಯಾರ್ಥಿಗಳಿಗೆ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಆರ್. ಗೋಪಿ, ಎಸ್. ಮಾಲಾ, ಲಲಿತಾ ಹಾಗೂ ಮಮತಾ ಅವರಿಗೆ ಕ್ಲಬ್ ಅಧ್ಯಕ್ಷೆ ಇಂಪಾರಿತೇಶ್ ಮಂಗಳವಾರ ಬಹುಮಾನ ವಿತರಿಸಿದರು.

ಲತಾ ವೆಂಕಟೇಶ್, ವಿಜಯಾ ಮುರಳೀಧರ್, ಪದ್ಮಜಾ ಮಹಾಬಲೇಶ್, ಸೌಮ್ಯಾ ಪ್ರಶಾಂತ್, ಮಧುರಾ ಬಾಲಾಜಿ ಉಪಸ್ಥಿತರಿದ್ದರು.

ಸರ್ಕಾರಿ ಬಾಲಕಿಯರ ಪಿಯು ಕಾಲೇಜು: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಿ. ಚಿಕ್ಕಣ್ಣ, ಉಪನ್ಯಾಸಕ ಟಿ.ಆರ್. ರೇವಣಸಿದ್ದಪ್ಪ ಮಾತನಾಡಿದರು.

ಎನ್. ರಂಗಪ್ಪ, ಕೆ. ತಿಮ್ಮಯ್ಯ, ಚಿನ್ಮಯೇಶ್, ಗುರುರಾಜ್, ಹರಿಯಣ್ಣ, ಕಾಮರಾಜ್, ಶಾಂತಕುಮಾರಿ, ಯಶೋದಮ್ಮ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.

ವೇದಾವತಿ ಪ್ರಥಮದರ್ಜೆ ವಿಜ್ಞಾನ ಕಾಲೇಜು: ಪ್ರಾಂಶುಪಾಲ ಡಿ. ಚಂದ್ರಶೇಖರಪ್ಪ, ಪ್ರಾಧ್ಯಾಪಕರಾದ ಆರ್.ಎಸ್. ನಿರಂಜನ್, ವೀರೇಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಯೋಜನಾಧಿಕಾರಿ ಸಿ.ಟಿ. ಶ್ರೀನಿವಾಸ್, ವಿದ್ಯಾರ್ಥಿಗಳ ಪರವಾಗಿ ವೀಣಾ, ಹರೀಶ್‌ಕುಮಾರ್, ಮೀನಾಕ್ಷಿ ಮಾತನಾಡಿದರು.

ಶಾಂತಿನಾಥ ಜೈನ್‌ಮೂರ್ತಿ ಪೂಜಕ ಸಂಘ ಮತ್ತು ಜೈನ್‌ಯುವ ಮಂಚ್ ವತಿಯಿಂದ ಕಾಲೇಜಿಗೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ ನೀಡಲಾಯಿತು.

ರೋಟರಿ ಕ್ಲಬ್: ಗಾಂಧಿ ಜಯಂತಿ ಮಂಗಳವಾರ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್ಡು- ಹಣ್ಣು ವಿತರಿಸಲಾಯಿತು.

ಅನಿಲ್‌ಕುಮಾರ್, ವೆಂಕಟೇಶ್, ಗೋಪಿನಾಥ್, ಆನಂದಶೆಟ್ಟಿ, ಮಹಾಬಲೇಶ್ವರ ಶೆಟ್ಟರು, ಸಿ.ಎನ್. ಸುಂದರ್, ಡಾ.ಶ್ರೀಪತಿ, ಎಚ್.ಆರ್. ಶಂಕರ್, ಪ್ರಶಾಂತ್, ಎಚ್.ಎಂ. ಬಸವರಾಜ್, ಡಾ.ವಿಜಯಕುಮಾರ್ ಹಾಜರಿದ್ದರು.

ವಾಣಿ ಸಕ್ಕರೆ ಪ್ರಥಮದರ್ಜೆ ಕಾಲೇಜು: ಗಾಂಧಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ, ಉಪನ್ಯಾಸಕ ಆರ್.ಟಿ. ಕೀರ್ತಿಕುಮಾರ್ ಮಾತನಾಡಿದರು.

ವೈ. ತಿಪ್ಪೇಸ್ವಾಮಿ, ಧರಣೇಂದ್ರಯ್ಯ, ಎಚ್. ತಿಪ್ಪೇಸ್ವಾಮಿ, ಜಿ. ತಿಮ್ಮೇಗೌಡ, ಜಿ. ದೊಡ್ಡಬಸಪ್ಪ, ರಾಧಾಕೃಷ್ಣ, ಬಿ.ಎಸ್. ರಾಘವೇಂದ್ರ, ಎಚ್.ಆರ್. ರಂಗಲಕ್ಷ್ಮಮ್ಮ, ರಂಗಮ್ಮ, ಆರ್. ತಿಪ್ಪೇಶ್, ವೀಣಾ, ಎಸ್.ಜಿ. ರಂಗಸ್ವಾಮಿ ಸಕ್ಕರ, ಮಾನಸ, ಮಹೇಶ್, ರಂಗಸ್ವಾಮಿ, ಮಹಾಂತೇಶ್, ರಂಗನಾಯ್ಕ, ಬಸವರಾಜು ಇದ್ದರು.

ಕೂನಿಕೆರೆ: ತಾಲ್ಲೂಕಿನ ಕೂನಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಾಯತ್ರಿದೇವಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿದರು.

ಉಪಾಧ್ಯಕ್ಷ ಟಿ. ತಿಮ್ಮಣ್ಣ, ಮಂಜುನಾಥ್, ಫಕೃದ್ದೀನ್‌ಸಾಬ್, ಕೆ.ಜಿ. ಹನುಮಂತರಾಯ, ಕೃಷ್ಣಪ್ಪ, ಪ್ರಕಾಶ್, ರಂಗಸ್ವಾಮಿ, ಹಸನ್, ಎಂ.ಬಿ. ಲಿಂಗಪ್ಪ, ಜಾವೀದ್‌ಖಾನ್, ಕೆ.ಸಿ. ರಮೇಶ್, ಇರ್ಫಾನ್ ಇದ್ದರು.

ಹೊಳಲ್ಕೆರೆ ವರದಿ
ತಾಲ್ಲೂಕಿನ ತಾಳ್ಯದ ಆಂಜನೇಯ ಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಗಾಂಧಿ ಜಯಂತಿ ಅಂಗವಾಗಿ ಸೆಲ್ಕೋ ಕಂಪೆನಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೋಲಾರ್ ದೀಪಗಳನ್ನು ವಿತರಿಸಲಾಯಿತು.

ಕಾಲೇಜಿನ ಕಾರ್ಯದರ್ಶಿ ವಿ.ಸಿ. ಲಿಂಗರಾಜು ಮಾತನಾಡಿ, ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಬಡತನ, ಅಸ್ಪೃಶ್ಯತೆ ನಿವಾರಣೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.
ಸೆಲ್ಕೋ ಕಂಪೆನಿಯ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿದರು.

ಪ್ರಾಂಶುಪಾಲ ಟಿ.ಎಸ್. ಕುಬೇರಪ್ಪ, ಶಾಂತಕುಮಾರ್, ಟಿ. ಹನುಮಂತಪ್ಪ, ಅಶೋಕ್, ಶಿವಪ್ಪ, ದೊಡ್ಡತಿಮ್ಮಪ್ಪ, ರಂಗನಾಥ್ ಹಾಜರಿದ್ದರು.

ಎಚ್. ಕುಬೇರಪ್ಪ ಕಾರ್ಯಕ್ರಮ ನಿರೂಪಿಸಿದರು. ಟಿ.ಎಂ. ಲೋಕೇಶ್ ವಂದಿಸಿದರು.

ಭರಮಸಾಗರ ವರದಿ
ಇಂದಿನ ಕುಲಷಿತ ರಾಜಕೀಯ ವ್ಯವಸ್ಥೆ ಸುಧಾರಣೆಗೆ ಗಾಂಧೀಜಿ ಅವರ ತತ್ವ ಆದರ್ಶಗಳ ಪಾಲನೆ ಅವಶ್ಯಕ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರದಮ್ಮ ಹೇಳಿದರು.

ಸಮೀಪದ ಕೋಗುಂಡೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳಿಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಜೀವನ ಚರಿತ್ರೆ ಬಗ್ಗೆ ಇಂದಿನ ಯುವಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಈರಣ್ಣ, ರಾಜಪ್ಪ, ಬಸಪ್ಪ, ವೀರಬಸಪ್ಪ, ರಾಜು, ಶಿವಣ್ಣ, ಹನುಮಂತಪ್ಪ, ಶಿವಮೂರ್ತಿ, ಚೌಡಪ್ಪ, ಮಲ್ಲಪ್ಪ, ಪಿಡಿಒ ಸುರೇಶ್, ಕಾರ್ಯದರ್ಶಿ ಮಲ್ಲಣ್ಣ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಧರ್ಮಪುರ ವರದಿ
ಇಂದಿನ ಸಮಾಜಕ್ಕೆ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳು ಅನುಕರಣೀಯ ಎಂದು ಪಿ.ಡಿ. ಕೋಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ರಾಮಣ್ಣ ತಿಳಿಸಿದರು.

ಸಮೀಪದ ಪಿ.ಡಿ. ಕೋಟೆ ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಮತ್ತು ಲಾಲ್ ಬಹದ್ದೂರ್‌ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಲ್. ಗುಣ್ಣಯ್ಯ, ಪಿಡಿಒ ವಿವೇಕ್, ಎಂ. ಚಂದ್ರಪ್ಪ, ಶ್ರೀರಂಗ, ನಾಗೇಂದ್ರ, ಸೋಮಶೇಖರ್, ಜಗನ್ನಾಥ್, ರಂಗಧಾಮಪ್ಪ ಮತ್ತು ಪಂಚಾಯ್ತಿ  ಸಿಬ್ಬಂದಿ ಇದ್ದರು.

ನಾಯಕನಹಟ್ಟಿ ವರದಿ
ವಿವಿಧೆಡೆ ಮಂಗಳವಾರ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸರ್ಕಾರಿ ಪ್ರೌಢಶಾಲೆ ತಿಮ್ಮಪ್ಪಯ್ಯನಹಳ್ಳಿ:  ಶಿಕ್ಷಕ ಕೆ.ಒ. ರಾಜಯ್ಯ ಮಾತನಾಡಿದರು.

ಮುಖ್ಯ ಶಿಕ್ಷಕ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತಿಪ್ಪೇಸ್ವಾಮಿ ಸ್ವಾಗತಿಸಿದರು. ಬಂಡಪ್ಪಳ್ ಶಿವಕುಮಾರ್ ವಂದಿಸಿದರು.

ಕಡಬನಕಟ್ಟೆ: ತುರುವನೂರು ಹೋಬಳಿಯ ಕಡಬನಕಟ್ಟೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಮಾರಂಭದಲ್ಲಿ  ಸತ್ಯನಾರಾಯಣ ರೆಡ್ಡಿ ಮಾತನಾಡಿ, ಬಾಪೂಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನರಹರಿ ಭಜನಾ ಮಂಡಳಿಯವರು ತತ್ವಪದ ಹಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಓಬಳೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಮುನಿಯಾನಾಯ್ಕ, ಗ್ರಾಮ ಪಂಚಾಯ್ತಿ ಸದಸ್ಯರು, ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT